Breaking News

ರಾಜಕಾರಣ ಬೇರೆ ಪಕ್ಷದವರಿಗೆ ವೃತ್ತಿ ಆದರೆ ಬಿಜೆಪಿಗೆ ಅದು ನೀತಿ : ಡಾ: ಮಲ್ಲಿಕಾರ್ಜುನ ಬಾಳಿಕಾಯಿ


ಗೋಕಾಕ : ಗೋಕಾಕ ಮತಕ್ಷೇತ್ರದ ಬಿಜೆಪಿಯ ಯುವ ಮೊರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕಾರಿಣಿ ಸಭೆ ಗೋಕಾಕ ನಗರದ ಸಮುದಾಯ ಬವನದಲ್ಲಿ ನಡೆಯಿತು.

ಜ್ಯೋತಿ ಬೆಳಗಿಸಿ ಅಟಲ ಜಿ ಬಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ರಾಜ್ಯ ಯುವ ಮೊರ್ಚಾ ಪ್ರದಾನ ಕಾರ್ಯದರ್ಶಿಗಳಾದ ಡಾ: ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ಇವತ್ತು ಬಾರತಿಯ ಜನತಾ ಪಾರ್ಟಿಗೆ ಅಜಾತ ಶತ್ರು,ದೇಶಕ್ಕಾಗಿ,ಪಕ್ಷಕ್ಕಾಗಿಪ್ರದಾನಿ ಮಂತ್ರಿ ಹುದ್ದೆ ತ್ಯಾಗ ಮಾಡಿದ ಅಟಲ ಬಿಹಾರಿ ವಾಜಪೇಯಿಯ ಹುಟ್ಟಿದ ದಿನ ಇರುವುದರಿಂದ ಬಹುಮುಖ್ಯವಾದ ದಿನ ತಾನು ಮಾಡಿದ ಕೆಲಸ ಕಾರ್ಯಗಳನ್ನು ಇನ್ನೊಬ್ಬರಿಗೆ ಒಪ್ಪುವಂತೆ ಮಾಡವವರೆ ಅಜಾತ ಶತ್ರು, ಅಂತಹ ವ್ಯಕ್ತಿ ಅಟಲ ಬಿಹಾರಿ ವಾಜಪೇಯಿ, ಅತ್ಯಂತ ಶತ್ರುಗಳನ್ನು ಹೊಂದುವ ಎಕೈಕ‌ ಕ್ಷೇತ್ರವೆಂದರೆ ಅದುವೆ ರಾಜಕೀಯ ಕ್ಷೇತ್ರ ಅಂತಹ ಕ್ಷೇತ್ರದಲ್ಲಿ ಯಾವುದೆ ವಿರೋದಿಗಳಿಲ್ಲದೆ ಅಜಾತಶತ್ರುವಾಗಿ ಇದ್ದವರು ಅಟಲಜಿ ಎಂದರು.ಅದೆ ರೀತಿ ತನ್ನ ಕ್ಷೇತ್ರಕ್ಕಷ್ಟೆ ಮಿಸಲಾಗದೆ ರಾಜ್ಯಾದಂತ ಪ್ರವಾಸ ಮಾಡಿ ತನಗೆ ನಿಡಿದ ಜವಾಬ್ದಾರಿಯನ್ನು ಮಾಡುತ್ತಿರುವ ರಮೇಶ ಜಾರಕಿಹೋಳಿಯವರ ಕೈ ಬಲ ಪಡಿಸಬೇಕಾಗಿದೆ,

ಬೇರೆ ಪಕ್ಷದವರಿಗೆ ರಾಜಕೀಯ ವೃತ್ತಿಯಾದರೆ ಬಿಜಿಪಿಗೆ ರೀತಿ,ನೀತಿ ಎನ್ನುತ್ತಾ ಬಿಜೆಪಿ ಪಕ್ಷದ ಹಿರಿಯರು ಪ್ರಾಣ ತೆತ್ತು ಶ್ರಮದಿಂದ ಬೆಳೆದ ಪಕ್ಷ ಎಂದರು, ಸಚಿವ ರಮೇಶ ಜಾರಕಿಹೋಳಿ ಮತ್ತು ಕೆ,ಎಮ್,ಎಪ್,ಅದ್ಯಕ್ಷರಾದ ಬಾಲಚಂದ್ರ ಜಾರಕಿಹೋಳಿಯವರು ನಮಗೆ ಕೊಟ್ಟ ಜವಾಬ್ದಾರಿಯನ್ನು ನಿಬಾಯಿಸಲು ನಮಗೆ ಕೊಟ್ಟ ಸಾದನ ಎಂದರು, ನಮ್ಮನ್ನೆಲ್ಲಾ ಬೆನ್ನು ತಟ್ಟಿ ಯಾವಾಗಲೂ ಪ್ರೊತ್ಸಾಹ ನೀಡುತ್ತಿರುವ ಇಂತಹ ಮಹಾನುಭಾವರನ್ನು ಪಡೆದ ಗೋಕಾಕ ಮತ್ತು ಅರಬಾಂವಿ ಕ್ಷೇತ್ರದ ಜನತೆ ಪುಣ್ಯವಂತರು.

ನಾವು ಬೇರೆಯವರ ಜೊತೆ ಸ್ಪರ್ದೆ ಮಾಡುವುದನ್ನು ಬಿಟ್ಟು ನಮ್ಮ ಜೊತೆ ನಾವೆ ಸ್ಪರ್ದೆ ಮಾಡಿಕೊಂಡಲ್ಲಿ ನಮ್ಮಲ್ಲಿರುವ ಅಹಂಕಾರ, ಸ್ವಾರ್ಥ ಕಡಿಮೆಯಾಗಿ ನಾವು ದೇಶಕ್ಕೆ, ಸಮಾಜಕ್ಕೆ ಎನಾದರೂ ಕೊಡಲಿಕ್ಕೆ ಸಾದ್ಯ ಅದರಂತೆ ತಾವುಗಳು ಪಕ್ಷಕ್ಕೆ ಎನು ಕೊಟ್ಟಿದ್ದೇನೆ ಎಂದು ಅರಿತು ತನಗೆ ಕೊಟ್ಟ ಜವಾಬ್ದಾರಿಯನ್ನು ಚಾಚು ತಪ್ಪದೆ ಮಾಡಿದರೆ ಗೋಕಾಕದಲ್ಲಿ ಬಾರತಿಯ ಜನತಾ ಪಾರ್ಟಿ ಪತಾಕಿ ಹಾರಿಸುತ್ತಲೆ ಇರುತ್ತದೆ. ಅದು ಪದಾದಿಕಾರಿಗಳಾದ ತಮ್ಮ ಕೈಯಲಿದೆ ಎಂದರು.

ನರೇಂದ್ರ ಮೋದಿಯವರು ಮಾಡಿದಂತಾ ಯೊಜನೆಗಳ ಬಗ್ಗೆ ತಿಳಿಸದೆ ಕಾರಣ ಇವತ್ತು ಅವರ ಯೋಜನೆಗಳ ಬಗ್ಗೆ ಹಲವರು ಪ್ರಶ್ನೆ ಕೇಳುವಂತಾಗಿದೆ, ಆ ಕೆಲಸವನ್ನು ನಾವು ತಡೆಯಬೇಕಾಗಿದೆ,
ನಮಗೆ ಕೊಟ್ಟ ಕೆಲಸವನ್ನು ಮಾಡಿದರೆ ನಾವು ಸಾಮಾನ್ಯ ವಕ್ಯಿಯಾಗದೆ ಅಸಮಾನ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ, ಅದಿಕಾರದ ಬೆನ್ನು ಹತ್ತಿದೆ ಜವಾಬ್ದಾರಿಗೆ ಬೆನ್ನು ಹತ್ತಿ, ಇವತ್ತಿನ ಬೆಜೆಪಿ ಕೊಟ್ಟ ಕೆಲಸ ಮಾಡಿದರೆ ದೇಶದ ಕೆಲಸ ಮಾಡಿದಂತೆ ಎಂದು ಹೇಳಿ ಭಾರತಿಯ ಜನತಾ ಪಾರ್ಟಿಯ ಯುವ ಮೋರ್ಚಾ ನುಡಿದಂತೆ ನಡೆಯುವಂತರಾಗಬೇಕೆಂದರು.

ಈ ಸಂದರ್ಭದಲ್ಲಿ ನಗರ ಘಟಕ ಮಂಡಲ ಅದ್ಯಕ್ಷರಾದ ಬೀಮಶಿ ಭರಮನ್ನವರ, ಗ್ರಾಮೀಣ ಘಟಕದ ಅದ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣಾ ಅಂಗಡಿ, ಜಿಲ್ಲಾ ಅದ್ಯಕ್ಷರಾದ ಬಸವರಾಜ ನೇಸರಗಿ, ಮಹಾದೇವ ಅಕ್ಕಿ, ಸತೀಶ ಹುಗಾರ,ಸುಭಾಸ ಪಾಟೀಲ ನಗರ ಯುವ ಮೊರ್ಚಾ ಅದ್ಯಕ್ಷರಾದ ಮಂಜುನಾಥ ಪ್ರಭುನಟ್ಟಿ, ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ