ಅರಭಾಂವಿ ಮತಕ್ಷೇತ್ರದ ಬಿಜೆಪಿಯ ಯುವ ಮೊರ್ಚಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಾ: ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ತಾನು ಅಡಿದ ಕೆಲಸ ಕಾರ್ಯಗಳನ್ನು ಇನ್ನೊಬ್ಬರಿಗೆ ಒಪ್ಪುವಂತೆ ಮಾಡವವರೆ ಅಜಾತ ಶತ್ರು, ಅಂತಹ ವ್ಯಕ್ತಿ ಅಟಲ ಬಿಹಾರಿ ವಾಜಪೇಯಿ, ಅತ್ಯಂತ ಶತ್ರುಗಳನ್ನು ಹೊಂದುವ ಏಕೈಕ ಕ್ಷೇತ್ರವೆಂದರೆ ಅದುವೆ ರಾಜಕೀಯ ಕ್ಷೇತ್ರ ಅಂತಹ ಕ್ಷೇತ್ರದಲ್ಲಿ ಯಾವುದೇ ವಿರೋದಿಗಳಿಲ್ಲದೆ ಅಜಾತಶತ್ರುವಾಗಿ ಇದ್ದವರು, ಅಟಲ್ ಜೀ ಎಂದರು,ಬಿಜೆಪಿ ಪಕ್ಷ ಹಿರಿಯರು ಪ್ರಾಣ ತೆತ್ತು ಶ್ರಮದಿಂದ ಬೆಳೆದ ಪಕ್ಷ ಎಂದರು, ಬಾಲಚಂದ್ರ ಜಾರಕಿಹೋಳಿಯವರು ನಮಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ನಮಗೆ ಕೊಟ್ಟ ಸಾಧನೆ ಎಂದರು, ನಮ್ಮನ್ನೆಲ್ಲಾ ಬೆನ್ನು ತಟ್ಟಿ ಯಾವಾಗಲೂ ಪ್ರೊತ್ಸಾಹ ನೀಡುತ್ತಿರುವ ಕೆ,ಎಮ್ಎಪ್,ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ಅರಬಾಂವಿ ಕ್ಷೇತ್ರದ ಜನತೆ ಪುಣ್ಯವಂತರು,
ಅದಲ್ಲದೆ 80 ವರ್ಷದ ಮುಖ್ಯಮಂತ್ರಿಯವರು ಯುವಕರಿಗೂ ಮಿರಿ ಕೆಲಸ ಮಾಡುತಿದ್ದಾರೆ ಅಂತವರ ಮಾರ್ಗದಲ್ಲಿ ಯುವ ಮೋರ್ಚಾದ ಯುವಕರು ದುಡಿಯಬೇಕಾಗಿದೆ,ನರೇಂದ್ರ ಮೋದಿಯವರು ಮಾಡಿದಂತಾ ಯೊಜನೆಗಳ ಬಗ್ಗೆ ತಿಳಿಸದೆ ಕಾರಣ ಇವತ್ತು ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳುವಂತಾಗಿದೆ, ಆ ಕೆಲಸವನ್ನು ನಾವು ತಡೆಯಬೇಕಾಗಿದೆ,
ನಮಗೆ ಕೊಟ್ಟ ಕೆಲಸವನ್ನು ಮಾಡಿದರೆ ನಾವು ಸಾಮಾನ್ಯ ವಕ್ಯಿಯಾಗದೆ ಅಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ, ಅಧಿಕಾರದ ಬೆನ್ನು ಹತ್ತಿದೆ ಜವಾಬ್ದಾರಿಗೆ ಬೆನ್ನು ಹತ್ತಿ, ಇವತ್ತು ಬೆಜೆಪಿ ಕೊಟ್ಟ ಕೆಲಸ ಮಾಡಿದರೆ ದೇಶದ ಕೆಲಸ ಮಾಡಿದಂತೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಪೆರೆಂಟ್ ಬಾಡಿ ಅದ್ಯಕ್ಷರಾದ ಪರಸಪ್ಪ ಬಬಲಿ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣಾ ಅಂಗಡಿ, ಜಿಲ್ಲಾ ಅದ್ಯಕ್ಷರಾದ ಬಸವರಾಜ ನೇಸರಗಿ, ಮಹಾದೇವ ಅಕ್ಕಿ, ಸುಭಾಸ ಪಾಟೀಲ,ದುಂಡಪ್ಪ ನಂದಗಾಂವಿ,ಗುರು ಹೀರೆಮಠ, ಸತೀಶ ಹೂಗಾರ ಉಪಸ್ಥಿತರಿದ್ದರು.