ಗೋಕಾಕ: ಕೋವಿಡ್ ಮಾಹಾಮಾರಿ ಕಟ್ಟಿಹಾಕುವ ಲಾಕ್‍ಡೌನ್ ಈ ಸಮಯದಲ್ಲಿ ದುಡಿಯುವ ವರ್ಗಗಳು ಒಂದೊತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಬಿಜೆಪಿ ಯುವ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆ ಗೋಕಾಕ ನಗರ ಮಂಡಲ ವತಿಯಿಂದ 250 ಮಾಸ್ಕ್ ಹಾಗೂ ನಿರ್ಗತಿಕರರಿಗೆ ಉಪಹಾರ, ನೀರಿನ ವ್ಯವಸ್ಥೆಯನ್ನು ಮಾಡಿದರು.
ಕೋವಿಡ್ ಮೊದಲನೇ ಅಲೆಯಿಂದ ಇನ್ನೂ ಸುಧಾರಿಸಿಕೊಳ್ಳದ ಹೊತ್ತಿನಲ್ಲಿಯೇ 2ನೇ ಅಲೆ ಬಂದು ಸಮಾಜದಲ್ಲಿನ ಸಾಕಷ್ಟು ಜನರಿಗೆ ತೊಂದರೆ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವಾಗುವುದು ಸಾಮಾಜಿಕ ಕರ್ತವ್ಯ ಎಂದು ಯುವ ಮೋರ್ಚಾ ಗೋಕಾಕ ನಗರ ಮಂಡಲದ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಸುರೇಶ ಸನದಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಯುವ ಮೋರ್ಚಾ ಗೋಕಾಕ ನಗರ ಮಂಡಲದ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಎಕ್ಕೇರಿಮಠ, ಕಾರ್ಯದರ್ಶಿ ಕಿರಣ ವಾಲಿ, ,ವಿಶ್ವನಾಥ ಜೋಶಿ,ಆನಂದ ಖಾನಪ್ಪನವರ, ಸೀನು ಪಾಟೀಲ, ಕಿರಣ ಡಮಾಮಗರ, ಚಂದನ ಮಗದುಮ್, ಶಿವಾಜಿ ಸುಭಂಜಿ, ಆನಂದ ಪೂಜೇರಿ, ಸಂತೋಷ ಕೋಲಕಾರ್, ರಮೇಶ ಖಾನಪ್ಪನವರ ಹಾಗೂ ಬಿಜೆಪಿ ಪಧಾದಿಕಾರಿಗಳು ಉಪಸ್ಥಿತರಿದ್ದರು.