ಬೆಂಗಳೂರು : ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ, 2019 ರ ಮೇ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದರು. ಅಣ್ಣಾಮಲೈ ಬಿಜೆಪಿಗೆ ಸೇರಿದ ನಂತರದಲ್ಲಿ ಮಾತನಾಡಿದ ಮುರಳೀಧರ್ ರಾವ್, ತಮಿಳುನಾಡಿನಲ್ಲಿ ಹಲವಾರು ಜನ ಬಿಜೆಪಿ ಸೇರುತ್ತಿದ್ದಾರೆ. ಈಗ ಅಣ್ಣಾ ಮಲೈ ಕೂಡ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅವರು ಸಮಾಜ ಸೇವೆ ಮಾಡಬೇಕೆನ್ನುವ ಉದ್ದೇಶ ಇಟ್ಟುಕೊಂಡು ರಾಜಕಾರಣಕ್ಕೆ ಬಂದವರು. ಕೃಷಿ ಕುಟುಂಬದ ಮೂಲಕ ಬಂದು ಉನ್ನತ ವ್ಯಾಸಂಗ ಮಾಡಿ ಈಗ ರಾಜಕಾರಣಕ್ಕೆ ಬರುತ್ತಿದ್ದಾರೆ.
ಬಿಜೆಪಿಗೆ ಸೇರಿದ್ದೇಕೆ ಎನ್ನುವ ಬಗ್ಗೆ ಮಾತನಾಡಿದ ಅಣ್ಣಮಲೈ, ‘ಯಾವುದೇ ನಿರೀಕ್ಷೆ ಇಟ್ಟುಕೊಂಡು ಬಿಜೆಪಿ ಸೇರಿಲ್ಲ. ಮೋದಿ ಮತ್ತು ಬಿಜೆಪಿ ಕಾರ್ಯವೈಖರಿ ನನಗೆ ಇಷ್ಟವಾಯಿತು. ಇದು ಬೆಜೆಪಿಗೆ ಸೇರುವಂತೆ ನನ್ನನ್ನು ಪ್ರೇರೆಪಿಸಿತು. ಪಕ್ಷದ ಸಿದ್ದಾಂತಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ,’ ಎಂದರು. ಮೂಲತಃ ತಮಿಳುನಾಡಿನವರಾದ ಅಣ್ಣಾಮಲೈ ಅವರು ಕಳೆದ ವರ್ಷ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ತಾವು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಅವರು ರಾಜೀನಾಮೆ ನೀಡಿದ ಬಳಿಕ ಆರ್ಎಸ್ಎಸ್ನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂಲಕ ತಾವು ಬಿಜೆಪಿ ಸೇರುವ ಸುಳಿವನನು ಆಗಲೇ ನೀಡಿದ್ದರು. ಅದರಂತೆ ಈಗ ಬಿಜೆಪಿ ಸೇರಿದ್ದಾರೆ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಮಲೈ ಅವರನ್ನು ಕಣಕ್ಕೆ ಇಳಿಸಿದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ಬಲ ಬರಲಿದೆ ಎಂಬುದು ಹಿರಿಯ ನಾಯಕರ ಲೆಕ್ಕಾಚಾರ.
Check Also
“ಸಾಹುಕಾರ್ ಕಮಾಲ್ ಮಹಾರಾಷ್ಟ್ರದಲ್ಲಿ ಸಾಹುಕಾರ್ ಶಕ್ತಿ ಪ್ರದರ್ಶನ” ಜಾರಕಿಹೊಳಿ ಅಭಿಮಾನಿಗಳ ಪೋಸ್ಟ್ ವೈರಲ್!
ಗೋಕಾಕ :ಮಹಾರಾಷ್ಟ್ರದ ಅಘಾಡಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ 15 ರಿಂದ 20 ದಿನ ಮುಂಬೈನಲ್ಲೆ ಸಾಹುಕಾರ್ ಇದ್ದು ಬಿಜೆಪಿ …