ಬೆಂಗಳೂರು: ಪಂಚಮಸಾಲಿ ಮೀಸಲಾತಿ ಸಮಾವೇಶ ಹಾಗೂ ಪಾದಯಾತ್ರೆ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿಡೀರ್ ದೆಹಲಿಗೆ ತೆರಳಿದ್ದಾರೆ.ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಯತ್ನಾಳ್ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಯತ್ನಾಳ್ ಅವರ ದೆಹಲಿ ಭೇಟಿಯಿಂದಾಗಿ ಅನೇಕ ವಿಚಾರಗಳು ಚೆರ್ಚೆಗೆ ಗ್ರಾಸವಾಗಿವೆ.ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿ ನೋಟೀಸ್ ನೀಡಿತ್ತು.ನೋಟೀ ಸಿಗೆ ಅವರು 11 ಪುಟಗಳ ಉತ್ತರವನ್ನು ನೀಡಿದ್ದರು.ಅದರಲ್ಲಿ 45 ಪ್ಯಾರಾಗಳು ಯಡಿಯೂರಪ್ಅವರ ಸ್ವಜನ ಪಕ್ಷಪಾತ,ಪುತ್ರ ವ್ಯಾಮೋ ಹ,ಬಿ.ಎಸ್.ವೈ. ಪುತ್ರ ಬಿ.ವೈ.ವಿಜಯೇಂದ್ರ ಅವರಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದರು.ಯತ್ನಾಳ್ ನೀಡಿರುವ ಮಾಹಿತಿಯ ಬಗ್ಗೆ ಸ್ಪಷ್ಟಣೆ ಹಾ ಗೂ ಸಾಕ್ಷ್ಯ ನೀಡುವಂತೆ ಹೈಕಮಾಂಡ್ ಯತ್ನಾಳ್ ಗೆ ಸೂಚನೆ ನೀಡಿತ್ತು.ಒಂದೆರಡು ದಿನಗಳ ಬಳಿಕ ದೆಹಲಿಗೆ ಬರುವುದಾಗಿ ಮನವಿ ಮಾಡಿದ್ದರು.
ಆದರೆ ದಿಢೀರ್ ತಕ್ಷಣ ದೆಹಲಿಗೆ ಬರುವಂತೆ ಪಂಚಮಸಾಲಿ ಸಮಾವೇಶನ ಬಳಿಕ ಪಕ್ಷದ ಹೈಕ ಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಹೀಗಾಗಿ ರಾತ್ರಿ 9.30ರ ವಿಮಾನದಲ್ಲಿ ಯತ್ನಾಳ್ ದೆಹಲಿಗೆ ತೆರಳಿದ್ದಾರೆ.