ಗೋಕಾಕ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಗೋಕಾಕ ವಲಯವು ಶೇಕಡಾ 94.58 ಪಡೆದು, A+ ಶ್ರೇಣಿಯೊಂದಿಗೆ ( ಎ+) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ.
ಪರೀಕ್ಷೆ ಬರೆದ 4517 ವಿದ್ಯಾರ್ಥಿಗಳಲ್ಲಿ 4272 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 230 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರನೇ ಹಾಗೂ ವಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ನಗರದ ಮಯೂರ ಪ್ರೌಢಶಾಲೆಯ ಸಂಜನಾ ತುಬಚಿ, ಘಟಪ್ರಭಾದ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆಯ ತರುಣ ಜೈನ, ಹಿರೇನಂದಿಯ ಎಂಡಿಆರ್ ಶಾಲೆಯ ಅಂಜಲಿ ಅಳ್ಳಿಗಿಡದ, ರಕ್ಷಿತಾ ಮಲಾಲಿ ತಲಾ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಹಾಗೂ ವಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಿರೇನಂದಿಯ ಎಂಡಿಆರ್ ಶಾಲೆಯ ಅಪೇಕ್ಷಾ ಸಾಂಗ್ಲಿಕರ, ಖನಗಾವ ನ ಆರ್.ಎಂ.ಎಸ್.ಎ ಆದರ್ಶ ವಿದ್ಯಾಲಯದ ನಿವೇದಿತಾ ಹಿರೇಮಠ ತಲಾ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ವಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ನಗರದ ಮಯೂರ ಫ್ರೌಢಶಾಲೆಯ ಬಿಬಿಆಯಿಶಾ ಅಂಡಗಿ , ಖನಗಾವದ ಕೆ.ಆರ್.ಸಿ.ಆರ್.ಶಾಲೆಯ ಶಾಂತವ್ವ ಸಣ್ಣಕ್ಕಿ , ಗೌರಮ್ಮಾ ನರಸಣ್ಣವರ, ಘಟಪ್ರಭಾದ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಜೈನಬ್ಬಿ ಜಗದಾಳ, ಸೇಹ್ನಾ ಮಸ್ತಿ, ಸಮೀರ ತಾಳಿಕೋಟಿ ತಲಾ 620 ಅಂಕ ಪಡೆದು ರಾಜ್ಯಕ್ಕೆ 5 ನೇ ಸ್ಥಾನ ಹಾಗೂ ವಲಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಡಿಡಿಪಿಐ ಮಹೋನಕುಮಾರ ಹಂಚಾಟೆ ಅಭಿನಂದಿಸಿದ್ದಾರೆ