ಬೆಳಗಾವಿ:ಉತ್ತರ ಕರ್ನಾಟಕ ಭಾಗದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕುಂದಾನಗರಿ ಬೆಳಗಾವಿಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ NWKRTC ವಿಭಾಗ, ಪ್ರವಾಸಿಗರಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಮಳೆಗಾಲ ಬಂದರೆ ಸಾಕು ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಂದ ಪ್ರವಾಸಿಗರು ಬೆಳಗಾವಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇದೀಗ ಲಾಕ್ಡೌನ್ ತೆರವಾಗಿದ್ದು, ಉತ್ತಮ ಮಳೆ ಕೂಡ ಆಗುತ್ತಿರುವುದರಿಂದ, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ.
ಪ್ರವಾಸಿ ತಾಣಗಳಿಗೆ ಅನುಮತಿ ನೀಡಿದ ಮೊದಲ ವಾರವೇ ಹಂಪಿಯಲ್ಲಿ ಜನ ಜಂಗುಳಿ
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿರುವ ಬೆಳಗಾವಿ ಸಾರಿಗೆ ವಿಭಾಗ, ಪ್ರಮುಖವಾಗಿ ಹಿಡ್ಕಲ್ ಜಲಾಶಯ, ಗೊಡಚಿನಮಲ್ಕಿ ಜಲಪಾತ, ಗೋಕಾಕ್ ಜಲಪಾತಗಳ ವೀಕ್ಷಣೆಗೆ ಅನುವು ಮಾಡಿಕೊಟ್ಟಿದೆ.
ನಿತ್ಯ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಈ ವಿಶೇಷ ಬಸ್ ದರ 180 ರೂ. ಇದ್ದು, ಸಾಯಂಕಾಲ ಮರಳಿ ಕೇಂದ್ರ ಬಸ್ ನಿಲ್ದಾಣವನ್ನು ಸೇರಲಿದೆ.
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ತೆರವುಗೊಳಿಸಿದ ಬಳಿಕ, ಅಂಬೋಲಿ ಫಾಲ್ಸ್ಗೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹದೇವಪ್ಪ ಮುಂಜಿ ಸ್ಪಷ್ಟಪಡಿಸಿದ್ದಾರೆ.