ಬೆಳಗಾವಿ : ಎರಡೂವರೆ ವರ್ಷದ ಮಗುವೊಂದು ತೆರೆದ ಬೋರ್ ವೆಲ್ ಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದ್ದು, ಇದೀಗ ಕೊಳವೆ ಬಾವಿಗೆ ಬಿದ್ದ ಮಗು ಶವವಾಗಿ ಪತ್ತೆಯಾಗಿದೆ.
ಹೌದು, ಕೊಳವೆ ಬಾವಿಗೆ ಬಿದ್ದಂತಹ ಬಾಲಕ ಶರತ್ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಎರಡೂವರೆ ವರ್ಷದ ಬಾಲಕ ಶರತ್ ಹಸಿವೆ 15 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದು, ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆಯಲು ಕಾರ್ಯಾಚರಣೆ ನಡೆಸಲಾಗಿತ್ತು.
ಆದರೆ ಕೊಳವೆ ಬಾವಿಗೆ ಬಿದ್ದ ಮಗು ಶವವಾಗಿ ಪತ್ತೆಯಾಗಿದೆ.
ಅಲಖನೂರ ಗ್ರಾಮದಲ್ಲಿ ನಿನ್ನೆಯ ದಿನ ಮೂರು ವರ್ಷದ ಮಗು ಶರತ್ ಕಾಣೆಯಾಗಿದ್ದ. ಹಾಲಪ್ಪ ಎಂಬುವವರ ತೋಟದ ನಿವಾಸದಲ್ಲಿ ಆಡುತ್ತಿದ್ದಾಗ ಬಾಲಕ ಕಾಣೆಯಾಗಿದ್ದನು. ಈ ಕುರಿತು ಹಾರೂಗೇರಿ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ನಂತರ ಹೊಲದಲ್ಲಿ ಬೋರ್ ವೆಲ್ ಬಾಲಕ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಂತರ ರಕ್ಷಣಾ ಕಾರ್ಯ ಆರಂಭವಾಗಿದ್ದು, 15 ಅಡಿ ಆಳದಲ್ಲಿ ಸಿಲುಕಿರುವ ಕಂದಮ್ಮನ ರಕ್ಷಣೆಗೆ ಅಗ್ನಿಶಾಮಕ ದಳ, ಎನ್ ಡಿ ಆರ್ ಎಫ್ ಸಿಬ್ಬಂದಿ ಧಾವಿಸಿತ್ತು, ಆದರೆ ಕೊಳವೆ ಬಾವಿಗೆ ಬಿದ್ದ ಮಗು ಶವವಾಗಿ ಪತ್ತೆಯಾಗಿದೆ.
ಆ ರು ತಿಂಗಳ ಹಿಂದೆಯಷ್ಟೇ ಜಮೀನಿನಲ್ಲಿ ಬೋರ್ವೆಲ್ ಕೊರೆಸಲಾಗಿತ್ತು, ಆದರೆ ನೀರು ಸಿಗದ ಕಾರಣ ಬೋರ್ವೆಲ್ ಮುಚ್ಚದೆ ಹಾಗೆಯೇ ಬಿಡಲಾಗಿತ್ತು, ಬೋರ್ವೆಲ್ ಮುಚ್ಚದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.