ಬೆಳಗಾವಿ: ರಾಜ್ಯಾದ್ಯಂತ ಕಳೆದ ಎರಡು ದಿನದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಜನರ ಪಾಡು ಹೇಳತೀರದ್ದಾಗಿದೆ.

ಕಳೆದ ಎರಡು ದಿನದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ, ಬೆಳಗಾವಿಯ ಕಂಗ್ರಾಳ ಗ್ರಾಮ, ನಂದಗಡದಲ್ಲಿ ಮನೆ ಕುಸಿತಗೊಂಡಿದೆ. ಗ್ರಾಮದಲ್ಲಿ ತಲಾ ಒಂದೊಂದು ಮನೆ ಕುಸಿದಿದೆ. ಖಡೇ ಬಜಾರ್ ನಲ್ಲೂ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಇನ್ನು ಈಗಾಗಲೇ ಶಿಥಿಲಗೊಂಡಿರವ ಕಟ್ಟಡಗಳು ಸುರಿಯುತ್ತಿರೋ ಮಳೆಗೆ ಬೀಳುವ ಸಾಧ್ಯತೆ ಇದೆ. ಆ ಕಟ್ಟಡದಲ್ಲಿದ್ದವರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ ಅನ್ನೋದೆ ಖುಷಿ ವಿಚಾರ.
ಇನ್ನಹ ಮಳೆಯ ನಡುವೆಯೂ ಎಸ್‌ಎಸ್‌ಎಲ್ಸಿ ಪರೀಕ್ಷೆ ಕೂಡ ಸಲೀಸಾಗಿ ನಡೆದಿದೆ. ಎರಡು ದಿನದಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ಇದರ ನಡುವೆಯೂ ಮಕ್ಕಳು ಹೇಗೋ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಅಷ್ಟೆ ಅಲ್ಲ ಪ್ರಶ್ನೆ ಪತ್ರಿಕೆಗಳು ಸರಿಯಾದ ಸಮಯಕ್ಕೆ ಮಕ್ಕಳಿಗೆ ತಲುಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA