ಬೆಳಗಾವಿ: ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾಗಿರುವ ತಾಲೂಕಿನ ಸುಳೇಭಾವಿ ಗ್ರಾಮದ ಕಡು ಬಡವರನ್ನು ಗುರುತಿಸಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದಿಂದ ರವಿವಾರ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ದಿನಸಿ ಕಿಟ್‌ಗಳನ್ನು ನೀಡಲಾಯಿತು. ಗ್ರಾಮದಲ್ಲಿ ಕಡು ಬಡವರನ್ನು ಗುರುತಿಸಿ ಅಗತ್ಯ ಇರುವ ಅಗತ್ಯ ವಸ್ತುಗಳ ಕಿಟ್‌ಗಳನ್ನು ನೀಡಿ ಮಾನವೀಯತೆ ಮೆರೆಯಲಾಯಿತು.
ಗೋಕಾಕ ನಗರ ಬಿಜೆಪಿ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಮಾತನಾಡಿ, ಲಾಕ್‌ಡೌನ್‌ದಿಂದ ಬಹುತೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಇಂಥವರ ನೆರವಿಗೆ ನಿಲುವುದೇ ನಮ್ಮ ಉದ್ದೇಶ ಆಗಿದೆ. ಈಗಾಗಲೇ ಗೋಕಾಕ ನಗರ ಹಾಗೂ ತಾಲೂಕು ಪ್ರದೇಶಗಳಲ್ಲಿರುವ ಅತಿ ಕುಡುಬಡವರನ್ನು ಗುರುತಿಸಿ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲಾಗುತ್ತಿದೆ. ಈವರೆಗೆ ೩೦೦ಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ನುಳಿದಂತೆ ಬೇರೆ ಬೇರೆ ತಾಲೂಕಿನಲ್ಲಿ ಅಗತ್ಯ ಇರುವವರಿಗೆ ಕಿಟ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ೫೦೦ಕ್ಕೂ ಹೆಚ್ಚು ಕಿಟ್ ವಿತರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್‌ದಿಂದಾಗಿ ನಮ್ಮಂಥ ಅನೇಕ ಕುಟುಂಬಗಳು ಕೆಲಸ ಕಳೆದುಕೊಂಡು ಕಷ್ಟದಲ್ಲಿವೆ. ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದಿಂದ ನೀಡಿರುವ ದಿನಸಿ ಕಿಟ್ ನಮಗೆ ಸಹಾಯವಾಗಿದೆ. ಇವರ ಸೇವೆಗೆ ನಾವು ಚಿರಋಣಿ ಆಗಿದ್ದೇವೆ ಎಂದು ಫಲಾನುಭವಿ ನಾರಾಯಣ ಮಿರಜಕರ ಹೇಳಿದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಚೇರಮನ್ ದೇವಣ್ಣ ಬಂಗೇನ್ನವರ, ಅಭಿಮಾನಿ ಬಳಗದ ಸದಸ್ಯರಾದ ಶಿವು ಹಿರೇಮಠ, ಮುತ್ತು ಜಮಖಂಡಿ, ಅಡಿವೇಶ ಮಜ್ಜಗಿ, ಗ್ರಾಮದ ಯುವ ಮುಖಂಡರಾದ ಸಚೀನ್ ಮಂಡು, ಮಾರುತಿ ರಾವಳಗೌಡ್ರ, ಶಂಕರ ಜಾಲಿಕಟ್ಟಿ, ಅರ್ಜುನ ಪೂಜೇರಿ, ಸಿದ್ದು ಪೂಜೇರಿ, ಸದೆಪ್ಪ ಪೂಜೇರಿ, ಮಹಾಂತೇಶ ಕೋಟಿ ಸೇರಿದಂತೆ ಇತರರು ಇದ್ದರು.