ಗೋಕಾಕ : ನಗರದ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು.
ಜುಲೈ 10ರಂದು ನಡೆಯಲಿರುವ ಬಕ್ರೀದ್ ಹಬ್ಬದ ನಿಮಿತ್ತ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಪ್ರಕಾಶ್ ಹೋಳಪ್ಪಗೋಳ, ಸಿಪಿಐ ಗೋಪಾಲ ರಾಠೋಡ, ನಗರಸಭೆ ಸ ಕಾ ಅ ಪರಿಸರ ಎಂ ಗಜಕೋಶ, ಪಸು ಸಂಗೋಪನಾ ಇಲಾಖೆ ಅಧಿಕಾರಿ ಮೋಹನ ಕಮತ್, ಪಿಎಸ್ಐ ಎನ್ ಕಿಲಾರಿ, ತೌಸಿಪ್ ಘೋರಿ ರವರ ನೇತೃತ್ವದಲ್ಲಿ ಶಾಂತಿಃ ಸಭೆ ನಡೆಸಲಾಗಿದ್ದು, ಯಾವುದೇ ಸಮಸ್ಯೆಯಾಗದೆ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬ ಆಚರಣೆ ಮಾಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಂಜುಮಾನ್ ಇಸ್ಲಾಮಿಕ್ ಕಮಿಟಿ ಅಧ್ಯಕ್ಷ ಜಾವೀದ್ ಗೋಕಾಕ, ಜಾಕೀರ್ ಕುಡಚಿಕರ, ಇಸ್ಮಾಯಿಲ್ , ಯೂಸುಫ್ ಅಂಕಲಗಿ, ಅಬ್ಬಾಸ್ ದೇಸಾಯಿ, ಮಲ್ಲಿಕ್ ತಳವಾರ, ಮಲ್ಲಿಕ್ ಪೈಲ್ವಾನ್, ಅಬ್ದುಲ್ ಶಭಾಷಖಾನ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.