ಬೆಳಗಾವಿ : ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಆಗಿದ್ದು ಇಂತಹ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಅಂತಹ ತುರ್ತು ಸೇವೆಯ ಕೆಲಸಗಾರರೆಂದು ಬಿಂಬಿಸಿ ಲಾಕ್ ಡೌನ್ ಸಮಯದಲ್ಲಿ ಬಿಂದಾಸ್ ಆಗಿ ಸಂಚಾರಿಸುವುದಕ್ಕಾಗಿ ಹಲವರಿಗೆ ನಕಲಿ ಐಡಿ ಕಾರ್ಡ್ ಗಳನ್ನು ತಯಾರಿಸಿ ದಂಧೆ ನಡೆಯುತ್ತಿದ್ದ ಇಬ್ಬರು ಖದೀಮರನ್ನು ಡಿಸಿಪಿ ವಿಕ್ರಂ ಆಮಟೆ ಬಂಧಿಸಿದ್ದಾರೆ.
ಖಚಿತ ಮಾಹಿತಿ ಪಡೆದ ಡಿಸಿಪಿ ಆಮಟೆ ಖಡೆ ಬಜಾರ ಪೋಲೀಸರೊಂದಿಗೆ ನಗರದ ಕಡೋಲ್ಕರ ಗಲ್ಲಿಯಲ್ಲಿನ ಮುಚ್ಚಂಡಿ ಪ್ರಿಂಟರ್ಸ್ ಅಂಗಡಿಯ ಮಾಲಿಕ ವಿಶ್ವನಾಥ ಮುಚ್ಚಂಡಿ (35) ಹಾಗೂ ಭಾತಖಾಂಡೆ ಗಲ್ಲಿಯ ರೋಹಿತ ಸುನೀಲ ಕುಟ್ರೆ (23) ಎಂಬುವರನ್ನು ನಕಲಿ ಐಡಿ ತಯಾರು ಮಾಡುವ ವೇಳೆ ನೂರಾರು ಜನರ ಹೆಸರಿನಲ್ಲಿ ನಕಲಿ ಐಡಿಗಳ ಜೊತೆ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.