ಗದಗ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಲಂಚ ಪಡೆಯುವಾಗ ಪಿಡಿಓ ಮತ್ತು ಅಕೌಂಟೆಂಟ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಸಿದ್ದಪ್ಪ ಡಂಬಳ, ಅಕೌಂಟೆಂಟ್ ಪ್ರದೀಪ್ ಕದಮ್ ಎಂಬವವರು 41 ಕಂಪ್ಯೂಟರ್ ಉತಾರ ನೀಡಲು 41 ಸಾವಿರ ಬೇಡಿಕೆ ಇಟ್ಟಿದ್ದಾರೆ. 41 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಡರಗಿ ಪಟ್ಟಣದ ಅಕೌಂಟೆಂಟ್ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಡಿವೈಎಸ್ಪಿ ವಾಸುದೇವ ರಾಮ ನೇತೃತ್ವದಲ್ಲಿ ದಾಳಿ ನಡೆಸಿದ್ದಾಗ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಪಿಡಿಓ ಹಾಗೂ ಅಕೌಂಟೆಂಟ್ ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA