Breaking News

“ವಿಶ್ವ ಪುಸ್ತಕ ದಿನ” ಶುಭಾಶಯ ಕೋರಿದ : ಬಿಇಓ ಜಿ ಬಿ ಬಳಗಾರ ಗುರುಗಳು!


ಜಿ ಬಿ ಬಳಗಾರ

ಕ್ಷೇತ್ರ ಶಿಕ್ಷಣಾಧಿಕಾರಿಗಳು.

ಗೋಕಾಕ.

ಗೋಕಾಕ : ಈ ಮುಂಚೆ ಕೆಲ ಸಂಗತಿಗಳು ನನಗೆ ಹೊಸತು ಅನಿಸಿ ನನ್ನ ಕುತೂಹಲ ಕೆರಳಿಸಿದ ಅನುಭವಗಳು ಉಂಟು… ಆದರೆ ಇಂದು ಹಾಗಲ್ಲ.ಮತ್ತೆ ಹಾಗೆ ಅನಿಸುವುದು ಇಲ್ಲ… ನಿರಾಸಕ್ತಿ … ನಿರುತ್ಸಾಹ ಹೊಂದಿರುವೆ ಎಂದು ತಾವು ಭಾವಿಸಿದ್ದರೆ, ಅದು ಖಂಡಿತ ತಪ್ಪು ಮಾಹಿತಿ ಅಂದ್ಕೊಂಡು ಮುಂದುವರಿಸುತ್ತೇನೆ… ಬದುಕಿನಲ್ಲಿ ಪ್ರತಿದಿನವೂ ನಡೆಯುವ ಎಲ್ಲಾ ಹೊಸ ಘಟನಾವಳಿಗಳು ನಮಗೆ ಖಂಡಿತವಾಗಿ ಹೊಸತನ್ನು ಕಲಿಸುತ್ತೇವೆ… ಇದರಿಂದಾಗಿ ನಮ್ಮಲ್ಲಿ ಪಕ್ವತೆ.. ಅನುಭವದ ಹಿರಿತನ.. ಸಾಮಾಜಿಕ ಸ್ಥಾನಮಾನದಲ್ಲಿ ಗೌರವ ಎಲ್ಲವೂ ಡಬಲ್… ಟ್ರಿಪಲ್ ಆಗುತ್ತದೆ.‌‌.. ನಮ್ಮನ್ನು ಇಂದು ಸಮಾಜ ಇಷ್ಟು ಗೌರವಿಸುತ್ತದೆ ಅಂದ್ರೆ… ಸಮುದಾಯ ನಮಗೆ ಕಲಿಕಾ ಅನುಭವಗಳ ಹಂಚಿಕೆ ಮಾಡಿ ನಮ್ಮ ಗೌರವ ಹೆಚ್ಚಾಗುವಂತೆ ಮಾಡಿದೆ ಎಂದರ್ಥ… ಸಮುದಾಯದ ಅನುಭವ ಒಮ್ಮೊಮ್ಮೆ ಪ್ರತ್ಯಕ್ಷವಾಗಿ ಹಂಚಿಕೆ ಆದರೆ… ಅದೇ ಅನುಭವವನ್ನು ಸಂಯೋಜಿಸಿ… ಅಕ್ಷರಗಳಿಗೆ ಶಕ್ತಿ ತುಂಬಿ.. ತಮ್ಮೆಲ್ಲಾ ವಿಚಾರಧಾರೆಯನ್ನು ಪುಸ್ತಕ ರೂಪದಲ್ಲಿ ತಲೆ ತಲೆಮಾರಿನ ಜನರ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ ಮಹಾನುಭಾವರು…. ಅವರೇ ಕವಿ ಲೇಖಕ ಮಹಾನುಭಾವರು ಅವರಿಗೊಂದು ಥ್ಯಾಂಕ್ಸ್… ಮಹರ್ಷಿ ವಾಲ್ಮೀಕಿ ಅವರ ರಾಮಾಯಣ..ವ್ಯಾಸ ಮಹರ್ಷಿಗಳ ಮಹಾಭಾರತ… ವಿಶ್ವದ ಹದಿಮೂರು ಭಾಷೆಗಳಿಗೆ ತರ್ಜುಮೆ ಗೊಂಡು, ವಿಶ್ವದ ಜನರೇ ಅನುಸರಿಸಿ ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಅನಿವಾರ್ಯತೆ ಇದೆ ಅಂತ ಭಾವಿಸಿ ಅಣ್ಣ ಬಸವಣ್ಣನವರು ಮತ್ತು ಅವರ ಸಮಕಾಲೀನ ದಿಗ್ಗಜ ಶರಣ ಶರಣೆಯರು ತಮ್ಮ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿ… ತಮ್ಮ ನಡೆ, ನುಡಿ, ಆಚಾರ ವಿಚಾರಗಳನ್ನು ಹಂಚಿಕೊಳ್ಳಲು ನೀಡಿದ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯ ಅನಿಸಿಕೊಂಡರೇ… ಭಗವಂತನ ಕೃಪೆಗೆ ಪಾತ್ರರಾಗಲು ಕಂಡುಕೊಂಡ ಪರಮ ಪವಿತ್ರ ಮಾರ್ಗ… ದಾಸ ಸಾಹಿತ್ಯ ಅದರ ಪಿತಾಮಹರು…. ಅಶ್ವಿನಿ ನಕ್ಷತ್ರಗಳು ಎಂದು ಖ್ಯಾತನಾಮರಾದ ಪುರಂದರದಾಸರು, ಕನಕದಾಸರು ಅವರುಗಳಿಂದ ರಚಿತವಾಗಿರುವ ದಾಸ ಸಾಹಿತ್ಯ…

ಒಳಗೊಂಡಂತೆ ಆದಿಕವಿ ಪಂಪ… ರನ್ನ… ಪೊನ್ನ .. ಮಹಾನ್ ಸಾಧಕರು ಕುವೆಂಪು.. ಶಿವರಾಮ ಕಾರಂತರು.. ಬೇಂದ್ರೆ.. ಅವರನ್ನು ಒಳಗೊಂಡಂತೆ ಇತ್ತೀಚಿನ ವರೆಗಿನ ಪರ್ವ ಕಾದಂಬರಿ ಜನಕ ಭೈರಪ್ಪ… ಕಾದಂಬರಿಗಳು‌ ಅಂದರೆ ಹೀಗೂ ಉಂಟೇ ಎಂದು ಅನ್ನುವ ಭಾವನೆ ಮೂಡಿಸಿದ ಯಂಡಮೂರಿ ವೀರೇಂದ್ರನಾಥ್.. ನನ್ನೂರಿನ ಹೆಮ್ಮೆಯ ಕೃಷ್ಣ ಮೂರ್ತಿ ಪುರಾಣಿಕ… ಬೆಟಗೇರಿ ಕೃಷ್ಣಶರ್ಮರು.. ಬಸವರಾಜ ಕಟ್ಟಿಮನಿ.. ಡಾಕ್ಟರ್ ಸಿ ಕೆ ನಾವಲಗಿ ಎಂಥಾ ದೈತ್ಯ ಪ್ರತಿಭೆಗಳು… ಮುಂದಿನ ದಿನಗಳಲ್ಲಿ ಸೂರ್ಯ ಚಂದ್ರ ಇರುವವರೆಗೂ ಜನರು ಉತ್ಸುಕತೆಯಿಂದ ಬದುಕಲು ಅದ್ಭುತ ಅನುಭವದ ಜ್ಞಾನವನ್ನು ತಮ್ಮ ಕೃತಿಗಳಲ್ಲಿ ಹಂಚಿಕೊಂಡಿದ್ದಾರೆ… ಕನ್ನಡ ಸಾರಸ್ವತ ಲೋಕದ ಕಿರೀಟ…ಆ ತಾಯಿ ಶಾರದೆ ಗರ್ವ ಪಡುವಂತೆ ಮಾಡಿದ್ದಾರೆ… ಅಂದಿನಿಂದ ಇಂದಿನವರೆಗೂ ಸಾಹಿತ್ಯ ನಿರಾಂತಕವಾಗಿ ಕೃಷಿ ಸಾಗಿದೆ… ತಮ್ಮ ಬದುಕಿನಲ್ಲಿ ಸಾರ್ಥಕತೆ ಮೆರೆಯುವ ವೃತ್ತಿ ಜೀವನದ ಜೀವನದ ಜೊತೆಗೆ… ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ… ನಾಡಿನ ಹೆಸರಾಂತ ಕವಿಗಳು.. ಲೇಖಕರು.. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಪ್ರಕಾಶಕರು..ಗ್ರಂಥಪಾಲಕರಿಗೂ ಸಹ ಹೃದಯ ತುಂಬಿದ ಕೃತಜ್ಞತೆಗಳು… ಥ್ಯಾಂಕ್ಸ್ ಹೇಳೋಣ ಸರಿ.. ದಿನಾಲೂ ಹೇಳೋಕೇ ಆಗುತ್ತಾ… ಅದಕ್ಕಾಗಿಯೇ ಒಂದು ಅವಕಾಶ … ಇಂದು ಮುಂಜಾನೆ ನನಗೆ ಗೊತ್ತಾಯಿತು… ವಿಶ್ವ ಪುಸ್ತಕ ದಿನಾಚರಣೆ…. ತುಂಬಾ ಖುಷಿಯಾಯಿತು.. ಇಂದು ಕೇವಲ ಸಾಂಕೇತಿಕ ದಿನಾಚರಣೆ ಅಷ್ಟೇ… ಪ್ರತಿ ದಿನ ನಮಗೆ ಪುಸ್ತಕ ದಿನಾಚರಣೆ… ಅದಕ್ಕಾಗಿ ಪುಸ್ತಕ ಖರೀದಿ…ಸಂಗ್ರಹ.. ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯ…ದೇವರ ಮನೆ ಅನಿವಾರ್ಯತೆ ಎಷ್ಟು ಇದೇಯೋ ಅಷ್ಟೇ ಎಂದು ಭಾವಿಸಿ… ಮನೆಯಲ್ಲಿ ಮಕ್ಕಳಿಗೆ ಟಿವಿ ಮೊಬೈಲ್ ಕೈಗೆ ಸಿಗುವ ಮುಂಚೆಯೇ.. ಪುಸ್ತಕಗಳು ಸಿಗಲಿ ಎಂಬ ಆಸೆ… ನಿಮ್ಮ ಸ್ನೇಹಿತರಿಗೆ… ಮಕ್ಕಳಿಗೆ ಉಡುಗೊರೆ ರೂಪದಲ್ಲಿ ಬಹುಮಾನ ರೂಪದಲ್ಲಿ ಪುಸ್ತಕಗಳು ಇರಲಿ… ಕೊಟ್ಟರೆ ಅಷ್ಟೇ ಸಾಲದೆಂಬಂತೆ… ಓದಿಸಿ.. ಓದಿ…ಓದುವ ಹವ್ಯಾಸ ಬೆಳೆಸಲು ಒಂದು ಮಾರ್ಗ… ಇಂದು ಓದು ಅನಿವಾರ್ಯ ಮತ್ತು ಅವಶ್ಯ…ಮತ್ತೊಮ್ಮೆ ಎಲ್ಲರಿಗೂ ಪುಸ್ತಕ ದಿನಾಚರಣೆ ಹಾರ್ದಿಕ ಶುಭಾಶಯಗಳು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ