ಗೋಕಾಕ: ಬಣಜಿಗ ಸಮಾಜದ ಶಿಕ್ಷಣಕ್ಕಾಗಿ(2ಎ) ಹಾಗೂ ಉದ್ಯೋಗಕ್ಕಾಗಿ (3ಎ) ಸರ್ಕಾರದಿಂದ ಮೀಸಲಾತಿ ಪ್ರಮಾಣ ಪತ್ರ ಶೀಘ್ರವೇ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಳಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ತಹಶೀಲ್ದಾರರ ಮನವಿ ಸಲಿಸಲಾಯಿತು.
ಬಣಜಿಗ ಸಮುದಾಯದ ಮುಂಖಡರಾದ ಬಸವನಗೌಡ ಎಸ್ ಪಾಟೀಲ ನೇತೃತ್ವದಲ್ಲಿ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ, ಮನವಿ ಸಲ್ಲಿಸಲಾಗಿದೆ. ಸರ್ಕಾರ ಆದೇಶ ಹೊರಡಿಸಿದರು ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಯುವಕರಿಗೆ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅಧಿಕಾರಿಗಳ ಈ ಬಗ್ಗೆ ಚರ್ಚೆ ನಡೆಸಿ ಮೀಸಲಾತಿ ಪ್ರಮಾಣ ಪತ್ರ ತಕ್ಷಣವೇ ನೀಡಬೇಕೆಂದು ಒತ್ತಾಯಿಸಿದರು.
ಬಣಜಿಗ ಸಮುದಾಯದ ಹಿತದೃಷ್ಟಿಯಿಂದ ಸರ್ಕಾರ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ನೀಡುವ ಕುರಿತು ಆದೇಶ ನೀಡಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳಿಗೆ ಮೀಸಲಾತಿ ದೊರತಿದೆ, ಇತ್ತೀಚೆಗೆ ಪ್ರಮಾಣ ಪತ್ರ ನೀಡುತ್ತಿಲ್ಲ. ವಿಳಂಬದಿಂದ ಬಣಜಿಗ ಸಮುದಾಯದ ಯುವಕರಿಗೆ ಸಮಸ್ಯೆಯಾಗುತ್ತಿದೆ, ಹೀಗಾಗಿ ಸರ್ಕಾರ ತಮ್ಮ ಮನವಿ ಸ್ಪಂಧಿಸಬೇಕೆಂದರು ಮನವಿ ಮೂಲಕ ಕೇಳಿಕೊಂಡರು.
ಬಣಜಿಗ ಸಮಾಜದ ಮುಖಂಡರು ಹಾಗೂ ಇತರರು ಇದ್ದರು.