Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಗೋಕಾಕ ಹಿಲ್ ಗಾರ್ಡನ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ!

ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ನಗರದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಛೇರಿಯಲ್ಲಿ ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. …

Read More »

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಜ್ಞಾನಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿ : ಸನತ ಜಾರಕಿಹೊಳಿ

ಗೋಕಾಕ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಜ್ಞಾನಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿ ಅವರನ್ನು ಪ್ರತಿಭಾವಂತರಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು . ಮಂಗಳವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡೋ ಫ್ರೀ ಸ್ಕೂಲ್ ನ ಗ್ರ್ಯಾಜಿವೇಷನ್ ಡೇ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು . ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ …

Read More »

ಟ್ರಾಫಿಕ್ ನಿರ್ವಹಣೆಗೆ ಮತ್ತಷ್ಟು ಬೀಗಿ ಕ್ರಮಗಳನ್ನು ಕೈಗೊಂಡ ಗೋಕಾಕ PSI ಕೆ ವಾಲಿಕಾರ!

– ಸಂಪಾದಕೀಯ ಚೇತನ ಲ ಖಡಕಭಾಂವಿ ಗೋಕಾಕ : ವೇಗವಾಗಿ ಬೆಳೆಯುತ್ತಿರುವ ಕರದಂಟು ನಗರಿ ಗೋಕಾಕದಲ್ಲಿ ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಬೀಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮಾರ್ಕೇಟ್ ದಂತಹ ಮದ್ಯ ಭಾಗದಿಂದ ಹಾದು ಹೋಗುವುದರಿಂದ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ನಗರ ಪೋಲಿಸ್ …

Read More »

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

  ಬೆಳಗಾವಿ: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಪಂ ವ್ಯಾಪ್ತಿಯ ಮನ್ನಿಕೇರಿ, ಹಂದಿಗನೂರ, ಬೋಡಕೇನಹಟ್ಟಿ ಗ್ರಾಮದಲ್ಲಿ ನಬಾರ್ಡ್‌ ಆರ್.‌ ಐ. ಡಿ. ಎಫ್‌ ಅತಿವೃಷ್ಠಿ ಯೋಜನೆಯಲ್ಲಿ ಮುಂಜೂರಾದ 66 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.   ಒಳ್ಳೆಯ ಸಮಾಜ …

Read More »

ಕೇಂದ್ರ ಸಚಿವ ಅಮೀತ್ ಷಾ ಅವರಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರದಾನ

ಗುಜರಾತ್ ಗಾಂಧೀ ನಗರದಲ್ಲಿ ಭಾನುವಾರದಂದು ನಡೆದ ಎನ್ ಸಿ ಡಿ ಎಫ್ ಐ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ದಲ್ಲಿ ಕೆಎಂಎಫ್ ಗೆ ಪ್ರಶಸ್ತಿ ನೀಡಿ ಗೌರವಿಸಿದ ಸಚಿವ ಅಮೀತ್ ಷಾ.*   ಬೆಂಗಳೂರು- ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲ ( ಎನ್ ಸಿ ಡಿ ಎಫ್ ಐ) ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ …

Read More »

ಕರವೇ ಬೆಳಗಾವಿ ರೈತ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರೆಹಮಾನ್ ಮೊಕಾಶಿ ಆಯ್ಕೆ!

ಬೆಳಗಾವಿ : ಕರವೇ ಬೆಳಗಾವಿ ರೈತ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರೆಹಮಾನ್ ಮೊಕಾಶಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಸಂಚಾಲಕರಾಗಿದ್ದ ರೆಹಮಾನ್ ಮೊಕಾಶಿ ಇವರ ಹೋರಾಟವನ್ನು ಗಮನಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷರಾದ ಎಚ್ ಶಿವರಾಮೇಗೌಡರು ಇವರನ್ನು ಬೆಂಗಳೂರಿನ ತಮ್ಮ ಮಲ್ಲೇಶ್ವರಂ ನಲ್ಲಿ ಇರುವ ಕಛೇರಿಯಲ್ಲಿ ರೆಹಮಾನ್ ಮೊಕಾಶಿ ಯವರನ್ನು ಬೆಳಗಾವಿ ರೈತ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ . ಈ ಆಯ್ಕೆಯನ್ನು …

Read More »

ಬಣವಿ ಭಸ್ಮ: ರೈತರಿಗೆ 90 ಸಾವಿರ ರೂ. ಪರಿಹಾರ ನೀಡಿದ ರಾಹುಲ್‌ ಜಾರಕಿಹೊಳಿ

ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಸಾರ್ವಜನಿಕರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು. ನಗರದ ಕುವೆಂಪು ನಗರದ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಿ ಅವರು ಮಾತನಾಡಿದರು. ಕಳೆದ ಇಪ್ಪತ್ತು ವರ್ಷಗಳಿಂದ …

Read More »

ದೇಶಕ್ಕೆ ಬಸವಣ್ಣವರ ಕೊಡುಗೆ ಅಪಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ವಿಜಯಪುರ: ವಿಶ್ವಗುರು ಬಸವಣ್ಣವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು. ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದ ಕರ್ತೃ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಜ್ಞಾನ ದಾಸೋಹಿ ಶ್ರಿ ಮ.ನಿ.ಪ್ರ. ಸಂಗನಬಸವ ಮಹಾಶಿವಯೋಗಿಗಳ ಪುಣ್ಯಾರಾಧನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿಶ್ವಗುರು ಬಸವಣ್ಣವರ ನಾಡಿನಲ್ಲಿ ನಾಲ್ಕು ದಿನಗಳ …

Read More »

ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ ಫೌಂಡೇಶನ್‌ನಿಂದ ವಿವಿಧ ದೇವಸ್ಥಾನ ಹಾಗೂ ಮಸಿದಿಗಳಿಗೆ ಕುರ್ಚಿ-ಸೌಂಡ್‌ ಸಿಸ್ಟಮ್‌ ವಿತರಣೆ ಬೆಳಗಾವಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು(ಸೋಮವಾರವೂ) ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಆದರೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ದೂರಿದರು. ನಗರದ ಜಾಧವ ನಗರ ಕಚೇರಿಯಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ಬೆಳಗಾವಿ ದಕ್ಷಿಣ, …

Read More »

ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ

ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಶಿವಶಕ್ತಿ ನಗರದ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರು ಭಾಗವಹಿಸಿದ್ದರು. ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಡಾ| ಶಿವಾನಂದ ಭಾರತಿ ಮಹಾಸ್ವಾಮಿಜೀಗಳು, ಶ್ರೀ ನಿಜಗುಣ ಮಹಾಸ್ವಾಮಿಜೀಗಳು, ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಜೀಗಳು, ಶ್ರೀ ಕೃಪಾನಂದ ಮಹಾಸ್ವಾಮೀಜಿಗಳು ಸಾನಿಧ್ಯವನ್ನು ವಹಿಸಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಪೂಜ್ಯರು ಹಾಗೂ ಸಂತೋಷ …

Read More »