Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಚುನಾವಣೆ ಆಗೋವರೆಗೂ ಈ ಥರ ಇದ್ದಿದೆ. ಈ ಥರ ಗಲಾಟೆ ಮಾಡಿಸೋರು ಎಲ್ಲಾ ಬಿಜೆಪಿ ಸ್ಪಾನ್ಸರ್ ಗಳು : ಸತೀಶ್ ಜಾರಕಿಹೊಳಿ

ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನಾವೇನು ಬೋರ್ಡ್​ ಹಾಕ್ಕೊಂಡು ಗಲಾಟೆ ಮಾಡಿ ಅಂತ ಹೇಳಿಲ್ಲ ಎಂದಿದ್ದಾರೆ. ಹಾವೇರಿಯಲ್ಲಿ ಬುಧವಾರ ಮಾತನಾಡಿದ ಅವರು ರಾಜ್ಯದಲ್ಲಿಯ PFI,SDPI ಬ್ಯಾನ್ ವಿಚಾರವಾಗಿ ಸರ್ಕಾರಕ್ಕೆ ಹೇಳಿದ್ದೇವೆ.ಇದರ ಜೊತೆಗೆ ಇತರ ಸಂಘಟನೆಗಳು ಬ್ಯಾನ್ ಆಗಬೇಕು.ಈ ಥರ ಗಲಾಟೆ ಮಾಡಿಸೋರೆಲ್ಲಾ ಬಿಜೆಪಿಯ ಸ್ಪಾನ್ಸರ್ ಗಳೆ ಎಂದರು. ಇಂತಹ ವಿಚಾರಕ್ಕೆ ಸಂಘಟನೆಗಳನ್ನು ಉಪಯೋಗ ಮಾಡ್ತಾರೆ.ಚುನಾವಣೆ ಆಗೋವರೆಗೂ …

Read More »

ಲಂಚ ಪಡೆಯುತ್ತಿದ್ದ ಟ್ರಾಫಿಕ್ ಮಹಿಳಾ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ!

ಬೆಂಗಳೂರು: 20 ಸಾವಿರ ಲಂಚ ಪಡೆಯುತ್ತಿದ್ದ ಟ್ರಾಫಿಕ್ ಮಹಿಳಾ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ‌. ಚಿಕ್ಕಜಾಲ ಟ್ರಾಫಿಕ್‌ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ವಶಕ್ಕೆ‌ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಚಿಕ್ಕಜಾಲ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್‌ ಗ್ಯಾಸ್ ಕಂಪನಿ ವತಿಯಿಂದ ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಲು ಮುಂದಾಗಿದ್ದರು‌. ಈ ಬಗ್ಗೆ ಅನುಮತಿ ಪಡೆಯಲು ಸಂಚಾರಿ …

Read More »

ಮಠಗಳಿಗೆ ಪರ್ಸೇಂಟೇಜ್ ಬೇಡಿಕೆಯನ್ನು ಯಾರು ಇಟ್ಟಿಲ್ಲ : ಹಿಂದುಳಿದ ವರ್ಗಗಳ ಮಠಾಧೀಶರು!

ಚಿತ್ರದುರ್ಗ: ಕರ್ನಾಟಕದ ಮಟ್ಟಿಗೆ ದಲಿತ ಮಠಗಳ ಪರಂಪರೆಯಲ್ಲಿ ದಲಿತ, ಹಿಂದುಳಿದ ಮಠಮಾನ್ಯಗಳು ಕೇವಲ ೨-೩ ದಶಕಗಳ ಇತ್ತೀಚಿನ ಇತಿಹಾಸ ಹೊಂದಿರುವುದು ನಾಡಿಗೆ ತಿಳಿದ ವಿಚಾರ. ಅಂತಹ ಸಂದರ್ಭದಲ್ಲಿ ಆರ್ಥಿಕವಾಗಿ, ಸ್ಥಿತಿವಂತ ಸಮುದಾಯಗಳು ಮಠಮಾನ್ಯಗಳ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ನಿರೀಕ್ಷೆಯಂತೆ ಮುನ್ನಡೆ ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಮಠಮಾನ್ಯಗಳ ಮೂಲಕ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂಕಲ್ಪತೊಟ್ಟಿದ್ದರು ಕೂಡ ಆರ್ಥಿಕವಾದ ಬೆಂಬಲ …

Read More »

ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡಬಾರದು : ಸಿಎಂ ಖಡಕ್ ಎಚ್ಚರಿಕೆ!

  ಶಿವಮೊಗ್ಗ: ಪರ್ಸಂಟೆಜ್ ಅನ್ನುವಂತಹದ್ದು ಬಹಳ ವ್ಯಾಪಕವಾಗಿ ಮಾಡುವ ವಿಚಾರ. ಇದನ್ನು ನಿಯಂತ್ರಣ ಮಾಡುವುದು ಬಹಳ ಮುಖ್ಯ ಎಂದು ಬುಧವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂತೋಷ್ ಪಾಟೀಲ್ ವಿಚಾರ ವಿಭಿನ್ನ ಪ್ರಕರಣ, ಎಸ್ಟಿಮೇಟ್ ಮಾಡುವುದರಿಂದ ಈ ಪ್ರಕರಣ ಆರಂಭವಾಗುತ್ತದೆ.ನಿವೃತ್ತ ಹೈಕೋರ್ಟ್ ಜಡ್ಜ್, ಇಲಾಖೆಯ ಎಕ್ಸ್ ಫರ್ಟ್ ಒಳಗೊಂಡು ಒಂದು ಉನ್ನತ ಮಟ್ಟದ ಸಮಿತಿ‌ ರಚಿಸುತ್ತೇನೆ. ಟೆಂಡರ್ ಆರಂಭಕ್ಕೂ ಮೊದಲು ಈ ತಂಡ ಕೆಲಸ …

Read More »

ದಿಂಗಾಲೇಶ್ವರ ಶ್ರೀಗಳು .30 ರಷ್ಟು ಲಂಚ ಕೊಟ್ಟು ತಪ್ಪಲ್ಲವೇ :ಯತ್ನಾಳ್

ವಿಜಯಪುರ: ರಾಜ್ಯ ಸರ್ಕಾರದ ವಿರುದ್ಧ ಶೇ.30 ಕಮಿಷನ್ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳು, ಯಾರಿಗೆ ಕೊಟ್ಟರು, ಎಲ್ಲಿ ಕೊಟ್ಟರು ಎಷ್ಟು ಕೊಟ್ಟರು ಎಂಬುದಕ್ಕೆ ಸಾಕ್ಷಿ ನೀಡಲಿ. ನೀವೇಕೆ ಶೇ.30 ರಷ್ಟು ಲಂಚ ಕೊಟ್ಟು ಅನುದಾನ ಪಡೆದಿರಿ. ಅದು ತಪ್ಪಲ್ಲವೇ ಎಂಬುದನ್ನು ಸಮಾಜಕ್ಕೆ ಹೇಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಓರ್ವ ಮಠಾಧೀಶರಾಗಿ ಸತ್ಯ, ನ್ಯಾ, ನೀತಿ, ಧರ್ಮದ ಬಗ್ಗೆ ಪ್ರವಚನ ನೀಡುವ …

Read More »

ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಗಾತ್ರದ ಮರ ಧರೆಗೆ!

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಸುಮಾರು ಐವತ್ತಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ಮಂಗಳವಾರ ಆರಂಭವಾದ ಬಿರುಗಾಳಿಗೆ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಬಿದ್ದಿದೆ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಸುಮಾರು ಐವತ್ತಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳು ಮರದ ಅಡಿಯಲ್ಲಿ ಸಿಲುಕಿಕೊಂಡಿವೆ, ಅಲ್ಲದೆ ಘಟನೆಯಲ್ಲಿ ಇಬ್ಬರಿಗೆ …

Read More »

ಪ್ರಧಾನಿ ಮೋದಿಯವರ ಜನಪರ ಯೋಜನೆಗಳನ್ನು ತಲುಪಿಸಲು ಶ್ರಮಿಸಿ-ರಮೇಶ ಜಾರಕಿಹೊಳಿ.!

ಗೋಕಾಕ: ಪ್ರಧಾನಿ ಮೋದಿಯವರ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಭಾರತೀಯ ಜನತಾ ಪಾರ್ಟಿಯ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ಸಾಮಾಜಿಕ ನ್ಯಾಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸಾಮಾಜಿಕ ನ್ಯಾಯದೊಂದಿಗೆ ಬಿಜೆಪಿ ನೇತ್ರತ್ವದ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳ ಜಾರಿಗೊಳಿಸುತ್ತಿದ್ದು, ಅವುಗಳನ್ನು ಜನತೆಯಲ್ಲಿ ಅರಿವು ಮೂಢಿಸಿ ಅವರಿಗೆ ತಲುಪಿಸಲು …

Read More »

ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ!

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದ್ದು, ಈ ಅಕ್ರಮ‌ ಬಯಲಿಗೆ ಬಂದಿದ್ದಾದ್ರು ಹೇಗೆ? ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ. 20 ಅಂಕಕ್ಕೆ ಉತ್ತರ ಬಿಡಿಸಿದ್ದ ಪಿಎಸ್​ಐ ಪರೀಕ್ಷಾರ್ಥಿ ವೀರೇಶ್​ನ OMR ಶೀಟ್ ಹೊರಬಂದಿದ್ದಾದ್ರು ಹೇಗೆ ಗೊತ್ತಾ?ಖುದ್ದು ವೀರೇಶ್ ಸ್ನೇಹಿತನಿಂದಲೇ ಪರೀಕ್ಷೆಯಲ್ಲಿನ ಅಕ್ರಮ ಬಯಲಾಗಿದೆ. ಎಲ್ಲರತೆ ವೀರೇಶ್ ಕೂಡ ಪಿಎಸ್‌ಐ ಪರೀಕ್ಷೆಯನ್ನ ಕಟ್ಟಿ ಎಕ್ಸಾಂಗೆ ಸಿದ್ಧತೆ ಮಾಡಿಕೊಂಡಿದ್ದ. ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯ …

Read More »

ಮಠಗಳ ಅನುದಾನದಲ್ಲೂ ಕಮಿಷನ್​; ಗೃಹ ಸಚಿವರು ಏನಂದ್ರು?

ಶಿವಮೊಗ್ಗ: ಮಠಗಳ ಅನುದಾನಕ್ಕೆ ಸಂಬಂಧಿಸಿದಂತೆ ಕಮಿಷನ್​ ಪಡೆಯುವುದು ನಡೆಯುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, ಮಠಗಳ ಅನುದಾನದಲ್ಲೂ ಕಮಿಷನ್​ ಕೇಳಲಾಗುತ್ತಿದೆ ಎಂಬುದೆಲ್ಲ ಸುಳ್ಳು, ಆ ಬಗ್ಗೆ ನಿರ್ದಿಷ್ಟವಾಗಿ ದೂರು ಕೊಟ್ಟರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಮಠಗಳ ಅನುದಾನದಲ್ಲೂ ಕಮಿಷನ್ ಕೇಳಲಾಗುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಾಗೆ ಕಮಿಷನ್ ಕೇಳಿದ್ದು ಯಾರು ಅಂತ ಸ್ವಾಮೀಜಿಯವರು …

Read More »

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ‌ಪ್ರಕರಣ ತನಿಖೆ ಚುರುಕು!

ಹಿಂಡಲಗಾ ಪಿಡಿಒ ವಸಂತಕುಮಾರಿ ವಿಚಾರಣೆಗೆ! ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ‌ಪ್ರಕರಣ ತನಿಖೆ ತೀವ್ರಗೊಂಡಿದೆ. ‌ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಠಿಕಾಣಿ ಹೂಡಿರುವ ಉಡುಪಿ ಪೊಲೀಸರು ‌ತನಿಖೆ ತೀವ್ರಗೊಳಿಸಿದ್ದಾರೆ. ಇಂದು ಹಿಂಡಲಗಾ ‌ಗ್ರಾಪಂಗೆ ಭೇಟಿ ನೀಡಿರುವ ಪೊಲೀಸರು, ‌ಪಿಡಿಒ ವಸಂತಕುಮಾರಿ ವಿಚಾರಣೆ ನಡೆಸಿದ್ದಾರೆ. ಉಡುಪಿ ಟೌನ್ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದ ತಂಡ ಪಿಡಿಒ ವಸಂತಕುಮಾರಿ ಅವರಿಂದ ಪ್ರಕರಣದ ಕುರಿತು ಹಲವು ಮಾಹಿತಿಯನ್ನು ಪಡೆಯಲಾಗಿದೆ.   ಸಂತೋಷ್ ಪಾಟೀಲ್ …

Read More »