ಹುಕ್ಕೇರಿ: ಬಸವಣ್ಣವರ ಕ್ರಾಂತಿಯಿಂದ 12ನೇ ಶತಮಾನದಲ್ಲೇ ಮಹಿಳೆಯರ ಜೀವನದಲ್ಲಿ ಕೆಲ ಬದಲಾವಣೆಗಳಾದವು, ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ತರುವ ಮೂಲಕ ಮಹಿಳೆಯರ ಪ್ರಗತಿಗಾಗಿ ಅನೇಕ ಕಾನೂನುಗಳನ್ನು ತಂದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಪಾಚ್ಛಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾದೇವಿ ಮೆಮೋರಿಯಲ್ ನೂತನ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ …
Read More »ಸತೀಶ್ ಜಾರಕಿಹೊಳಿ ಫೌಂಡೇಶನದಿಂದ ಉಚಿತ ಕರಾಟೆ ತರಬೇತಿ; ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಶಿವಾ ಫೌಂಡೇಶನ್ ಮಕ್ಕಳು!
ಗೋಕಾಕ: ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಶಿವಾ ಫೌಂಡೇಶನ್ ಮಕ್ಕಳಿಗೆ ಕರಾಟೆ ತರಬೇತಿ, ಪ್ರೋತ್ಸಾಹ ನೀಡಿದರು, ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ವಿಧ್ಯಾರ್ಥಿಗಳು ಸಾಧನೆ ಮಾಡಿದರು. ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022 ದಲ್ಲಿ ಶಿವಾ ಫೌಂಡೇಶನ್ ಮಕ್ಕಳು ವಿಜೇತರಾಗಿ ಸಾಧನೆ ಮಾಡಿದ್ದು …
Read More »ವಿವಿಧ ಸೇವಾ ಕಾರ್ಯಗಳ ಮೂಲಕ ಲಖನ್ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ!
ಗೋಕಾಕ: ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಅಭಿಮಾನಿಗಳಿಂದ ಮಕ್ಕಳಿಗೆ ನೋಟ ಬುಕ್ ಹಾಗೂ ರೋಗಿಗಳಿಗೆ ಹಣ್ಣು ಹಂಪಲು, ಉಪಾಹರ ವಿತರಿಸುವ ಮೂಲಕ ವಿನೂತನವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಲಖನ್ ಜಾರಕಿಹೊಳಿ ಅಭಿಮಾನಿ ಬಳಗದ ಸದಾನಂದ ಕಲಾಲ, ಆಸೀಫ್ ಮುಲ್ಲಾ, ಅಶೋಕ ಸಾಯನ್ನವರ, ರಮೇಶ ಬಡೆಪ್ಪಗೋಳ, ಸಂಜು ಜಡೆನ್ನವರ, ಅರುಣ ಕಲಾಲ, ದೇವಾನಂದ ಕಂಬಾರ, ಖಾಲೀದ್ ಅತ್ತಾರ, ಮಹೇಶ ಪಾಟೀಲ, ಮಹಾದೇವ ಜಗನೂರ ಸೇರಿದಂತೆ …
Read More »ವಿಪ ಚುನಾವಣೆ: ಜೂನ್ 13 ರಂದು ಶಾಲಾ ಕಾಲೇಜುಗಳಿಗೆ ರಜೆ
ಬೆಂಗಳೂರು,ಜೂನ್ 10: ರಾಜ್ಯದ ನಾಲ್ಕು ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಜೂನ್ 13ರಂದು ನಡೆಯಲಿದ್ದು. ಎರಡು ಪದವೀಧರ ಕ್ಷೇತ್ರ ಮತ್ತು ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ನಡೆಯಲಿದ್ದು ಜೂನ್ 13ರಂದು ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.ಜೂನ್ 13 ಸೋಮವಾದಂದು ಕರ್ನಾಟಕ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು. ಶಿಕ್ಷಕರು ಮತ್ತು ಪಧವೀಧರರು ಮತದಾನವನ್ನು ಮಾಡುವ ಸಲುವಾಗಿ ವಿಶೇಷ ಸಾಂದರ್ಭಿಕ …
Read More »ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟ!
ಬೆಂಗಳೂರು, ಜೂ.10: ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜಯರಾಮ್ ರಮೇಶ್ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ.ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕನೇ ಅಭ್ಯರ್ಥಿ ಸಹ ಬಿಜೆಪಿ ಪಾಲಾಗಿದ್ದು, ಲೆಹರ್ ಸಿಂಗ್ ಸಿರೋಯಾ ಅದೃಷ್ಟ ಖುಲಾಯಿಸಿದೆ. ರಾಜ್ಯಸಭೆ ಕಣದಲ್ಲಿ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಂ ರಮೇಶ್, ಲೆಹರ್ ಸಿಂಗ್ ಸಿರೋಯಾ, ಕುಪೇಂದ್ರ ರೆಡ್ಡಿ …
Read More »ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 139 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದ ನಿಖಿಲ್ ಪಾಟೀಲಗೆ ಸತ್ಕಾರ
ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಕಾರಖಾನೆಯ ಕಾರ್ಮಿಕ ಕಲ್ಯಾಣಾಧಿಕಾರಿ ಬಸವರಾಜ ಪಾಟೀಲ ಅವರ ಪುತ್ರ ನಿಖಿಲ್ ಪಾಟೀಲ ಅವರು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 139 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಉರ್ತಿರ್ಣರಾದ ಪ್ರಯುಕ್ತ ಅವರನ್ನು ಹಾಗೂ ನೂತನವಾಗಿ ನೇಮಕಗೊಂಡ ನಿರ್ದೇಶಕ ಜಗದೀಶ್ ಬಂಡ್ರೋ಼ಳಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರಖಾನೆಯ ಅಧ್ಯಕ್ಷ ಅಶೋಕ ಪಾಟೀಲ, ರಾಮಣ್ಣ ಮಹಾರೆಡ್ಡಿ , …
Read More »ವಿದ್ಯಾರ್ಥಿ ಜೀವನದಲ್ಲಿ ಉನ್ನತ ಗುರಿ ಹೊಂದಿ ಸಾಧನೆ ಮಾಡಿದರೆ ಸಮಾಜದಲ್ಲಿ ಉನ್ನತ ಗೌರವ : ಪ್ರವಿಣ್ ಗುಡಿ
ಗೋಕಾಕ : ಇಂದು ಉದ್ಯೋಗ ಗಳಿಸಿಕೊಳ್ಳಲು ಕೇವಲ ಶಿಕ್ಷಣ ಒಂದಿದ್ದರೆ ಸಾಲದು. ಜತೆಗೆ ಇತರ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂದು ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಪ್ರವಿಣ್ ಗುಡಿ ಹೇಳಿದರು. ಗುರುವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 3 ದಿನಗಳ ಕಾಲ ವಿಶೇಷ ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಜೀವನ ಮತ್ತು ಜೀವನ ಕೌಶಲ್ಯ ವಿಷಯ ಕುರಿತು ಅವರು ಮಾತನಾಡಿದರು. ಜೀವನದಲ್ಲಿ ಉನ್ನತ …
Read More »ಸಂವಿಧಾನದ ಆಶಯವನ್ನು ಉಳಿಸಿ, ಗೌರವಿಸುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ದೇಶ, ರಾಜ್ಯವನ್ನು ಹಾಳು ಮಾಡುವ ಪಕ್ಷಕ್ಕೆ ಮತ ನೀಡಬೇಡಿ. ಯಾರು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಾರೋ ಅವರು ದೇಶ ದ್ರೋಹಿಗಳು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಮರಾಠಾ ಮಂಡಲ ಶಿಕ್ಷಣ ಸಂಸ್ಥೆಯಲ್ಲಿ ವಾಯವ್ಯ ಶಿಕ್ಷಕರ, ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ, ಸುನೀಲ್ ಸಂಕ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯವನ್ನು ಉಳಿಸಿ, ಗೌರವಿಸುವುದು ಕಾಂಗ್ರೆಸ್ ಪಕ್ಷಕ್ಕೆ …
Read More »ಕಾರ್ಯನಿರತ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಅಧ್ಯಕ್ಷರಾಗಿ ರವಿ ಕಾಂಬಳೆ ಆಯ್ಕೆ!
ಹುಕ್ಕೇರಿ : ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಇದರಿಂದ ನೈಜ ಪತ್ರಕರ್ತರು ಮುಜುಗರ ಅನುಭವಿಸುವ ಪ್ರಸಂಗಗಳು ಎದುರಾಗಿವೆ ಎಂದು ನಿವೃತ್ತ ಉಪನ್ಯಾಸಕ ಪ್ರೊ.ಪಿ.ಜಿ.ಕೊಣ್ಣೂರ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ನಾಲ್ಕನೇ ಅಂಗವೆಂದೇ ಗುರುತಿಸಲ್ಪಡುವ ಪತ್ರಿಕಾ ರಂಗದಲ್ಲಿ ನಕಲಿ ಪತ್ರಕರ್ತರು ನುಸುಳುವಿಕೆ …
Read More »ಕುತೂಹಲ ಮೂಡಿಸಿದ ಸಿದ್ದರಾಮಯ್ಯ- ಬಿಎಸ್ವೈ ಭೇಟಿ
ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಳಗಾವಿಗೆ ತೆರಳುವ ಸಂದರ್ಭದಲ್ಲಿ ಇಬ್ಬರು ನಾಯಕರು ಲಾಂಜ್ ನಲ್ಲಿ ಭೇಟಿ ಮಾಡಿದರು. ಇದೊಂದು ಸೌಹಾರ್ದ ಭೇಟಿ ಎಂದು ಉಭಯ ನಾಯಕರ ಕಚೇರಿ ಮೂಲಗಳು ಹೇಳಿವೆ. ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿಯ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ಆರಂಭಿಸಿರುವ …
Read More »