Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಬೆಳಗಾವಿ ಜಿಲ್ಲೆಗೆ ಮೂರು ದಿನ ಯಲ್ಲೋ ಅಲರ್ಟ್ : ಡಿ.ಸಿ ನಿತೇಶ್ ಪಾಟೀಲ್

ಬೆಳಗಾವಿ: ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ತಹಶೀಲ್ದಾರ್ ಅಕೌಂಟ್‍ನಲ್ಲಿ ಹಣ ಇದ್ದು ತುರ್ತು ಪರಿಹಾರಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂದು ಡಿ.ಸಿ ನಿತೇಶ್ ಪಾಟೀಲ್ ಹೇಳಿದ್ದಾರೆ.   ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ 69 ಸಾವಿರ ಕ್ಯೂಸೆಕ್‍ನಷ್ಟು ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. …

Read More »

ಅರಭಾವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೂ ಕೋವಿಡ್-19 ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಶ್ಲಾಘನೆ*

ಗೋಕಾಕದಲ್ಲಿ ಶುಕ್ರವಾರದಂದು ಜರುಗಿದ ಬಿಜೆಪಿ ಅರಭಾವಿ ಮಂಡಲ ಕಾರ್ಯಕಾರಿಣಿ ಸಭೆ* *ಗೋಕಾಕ*: ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರೀಯ ಆಡಳಿತವೇ ಕಾರಣ. ಹೀಗಾಗಿ ಮೋದಿ ಅವರು ವಿಶ್ವಮಾನ್ಯ ನಾಯಕರು ಎಂದು ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು. ಶುಕ್ರವಾರದಂದು ಇಲ್ಲಿಯ ಎನ್‍ಎಸ್‍ಎಫ್ ದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ …

Read More »

ಪ್ರವಾಹ ಭೀತಿ ಇದ್ದರೂ ಸಭೆ ನಡೆಸದ ಸಚಿವರು- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಿಡಿ!

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಮಾತ್ರ ಮುಂಜಾಗ್ರತಾ ಸಭೆ ಮಾಡುತ್ತಿಲ್ಲ. ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿಕಾರಿದರು. ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೂ ಪ್ರವಾಹದ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ …

Read More »

ಯುವ ಜನತೆ ದುಶ್ಚಟ ಮಾಡದೆ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ : ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ!

ಮೂಡಲಗಿ : ಯುವ ಜನತೆ ದುಶ್ಚಟ ಮಾಡದೆ, ದೇವರ ಕಾರ್ಯ, ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಯುವಕರಿಗೆ ಕರೆ ನೀಡಿದರು. ನಗರದ ಶ್ರೀ ವೆಂಕಟೇಶ್ವರ ದೇವಸ್ತಾನದ ಸಪ್ತಾಹ ಮತ್ತು ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದ ಪ್ರತಿ ಸಮಾಜಮುಖಿ ಕಾರ್ಯಕ್ರಮಗಳಿಗೆ ನಾವು ಸದಾ ನಿಮ್ಮೋಂದಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ, ಇಂದಿನ ಯುವ ಜನತೆ ದುಶ್ಚಟಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ, ದೈವ …

Read More »

ಕುಲಗೋಡ ಪೋಲಿಸರ ಭರ್ಜರಿ ಭೇಟೆ; 95 ಕೆ.ಜಿ ಗಾಂಜಾ ವಶ.!

ಕುಲಗೋಡ : ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗಾಂಜಾ ಬೆಳೆಯುತ್ತಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಸುಮಾರು 95 ಕೆ.ಜಿ, ₹ 9.51 ಲಕ್ಷ ಮೌಲ್ಯದ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಬಸಪ್ಪ ರಾಮಪ್ಪ ಲಗಳಿ. ಸಿದ್ದಪ್ಪಾ ಬಸಪ್ಪಾ ಲಗಳಿ ಬಂಧಿತ ಆರೋಪಿಗಳು. ಪಿಎಸ್ಐ ಗೋವಿಂದಗೌಡ ಎಸ್ ಪಾಟೀಲ್, ಎಎಸ್ಐ ಬಿ ವೈ ಅಂಬಿ, ಕಲ್ಮೇಶ್ ಬಾಗಲಿ, ಸಿದ್ದು ಮಂಗಿ, ಮಾಳಪ್ಪಾ ಆಡಿನ, ಮಹೇಶ್ ಲದ್ದಿ, ಎಸ್ ವಿ ಹಂಜಿ, ಮಾರುತಿ ಕುರಿನವರ್, …

Read More »

ಕೃಷಿ ಸಂಜೀವಿನಿ ವಾಹನಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ!

ಗೋಕಾಕ : ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಪ್ರಗತಿ ಸಾಧಿಸುವಂತೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯ ಮುಂಗಾರು ಹಂಗಾಮಿನ ಕೃಷಿ ಅಭಿಯಾನ ಹಾಗೂ ಕೃಷಿ ಸಂಜೀವಿನಿ ವಾಹನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ವೈಜ್ಞಾನಿಕ ಯುಗದಲ್ಲಿ ಯಂತ್ರಗಳ ಅಳವಡಿಕೆಯಿಂದ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ರೈತರು ಈ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕೃಷಿ ಇಲಾಖೆ ಹಾಗೂ ಇತರ ಕೃಷಿಗೆ …

Read More »

ಘಟಪ್ರಭಾದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮನವಿ!

ಗೋಕಾಕ : ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನೂತನವಾಗಿ ಬಸ ನಿಲ್ದಾಣ ನಿರ್ಮಿಸುವಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕ ವತಿಯಿಂದ ಗುರುವಾರದಂದು ನಗರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕೆಂಪಣ್ಣ ಚೌಕಾಶಿ, ಪ್ರಶಾಂತ್ ಅರಳಿಕಟ್ಟಿ , ಸಂತೋಷ ಖಂಡ್ರಿ, ಮಲಿಕಜಾನ ತಲವಾರ, ಶೆಟ್ಟೆಪ್ಪ ಗಾಡಿವಡ್ಡರ, ಅಪ್ಟಸಾಬ ಮುಲ್ಲಾ, ಬಸವರಾಜ ಬೆಡರಟ್ಟಿ, ಮಾರುತಿ ಚೌಕಾಶಿ, ರಾಜು ದೊಡ್ಡಮನಿ, ತಮ್ಮಣ್ಣ ಅರಬಾಂವಿ ಸೇರಿದಂತೆ ಅನೇಕರು ಇದ್ದರು

Read More »

ಬಕ್ರೀದ್ ಹಬ್ಬದ ನಿಮಿತ್ಯ ಘಟಪ್ರಭಾದಲ್ಲಿ ಪೂರ್ವಭಾವಿ ಸಭೆ.

ಘಟಪ್ರಭಾ: ಜುಲೈ 10ರಂದು ಬಕ್ರೀದ್ ಹಬ್ಬವು ಶಾಂತರೀತಿಯಿಂದ ಜರುಗುವಂತೆ ಮತ್ತು ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ಮತ್ತು ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಘಟಪ್ರಭಾ ಪೋಲಿಸ್ ಠಾಣೆಯ ಸಿ ಪಿ ಐ ಶ್ರೀ ಶೈಲ ಬ್ಯಾಕೂಡ ಅವರು ಹೇಳಿದರು. ಅವರು ಬಕ್ರಿದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ,ಜಾನುವಾರು ಸಾಗಾಣಿಕೆ ತಡೆಗಟ್ಟುವ ಕುರಿತಂತೆ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಜುಲೈ6ರಂದು ಸಂಜೆ ನಡೆದ ಪೂರ್ವ ಸಿದ್ಧತೆಯ ಸಭೆಯ …

Read More »

*ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಗೋಕಾಕ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ*

ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ …

Read More »

*ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹಾಮಂಡಳಕ್ಕೆ ಅವಿರೋಧ ಆಯ್ಕೆ

*ಹಿಡಕಲ್ ಡ್ಯಾಂ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಖಂಡ್ರಟ್ಟಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹುಂಡೇಕರ* *ಗೋಕಾಕ :* ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಅಶೋಕ ಶಿವಪುತ್ರ ಖಂಡ್ರಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಪರಮಾನಂದ ಹುಂಡೇಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಹಿಡಕಲ್ ಡ್ಯಾಂನ ಮಹಾಮಂಡಳದ ಪ್ರಧಾನ ಕಛೇರಿಯಲ್ಲಿ ಜರುಗಿದ …

Read More »