ಗೋಕಾಕ ನಗರದ ಪ್ರತಿಷ್ಠಿತ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನೇಮಕವಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಲಾಯಿತು . ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ , ಸುರೇಶ ಸನದಿ ಹಾಗೂ ಸಮಿತಿಯ ಸದಸ್ಯರಾದ ಪ್ರಮೋದ ಜೋಶಿ , ಲಕ್ಕಪ್ಪ ತಹಶೀಲ್ದಾರ , ಪೀರಸಾಬ ಲೋಕಾಪುರ , ಅಶೋಕ ಮೇಸ್ತ್ರಿ , ಲಕ್ಷ್ಮಿಕಾಂತ ಎತ್ತಿನಮನಿ , …
Read More »*ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಸಾಮಾಜಿಕ ಕಾರ್ಯ*
ಗೋಕಾಕ: ನಗರದ ಶ್ರೀ ಸಾಯಿ ಸಮರ್ಥ ಫೌಂಡೇಶನ್ 2ನೇ ವಾರ್ಷಿಕೋತ್ಸವ ನಿಮಿತ್ತ ಉಚಿತ ನೇತ್ರ ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಉಚಿತ ಕಂಪ್ಯೂಟರ್ ತರಬೇತಿ, ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ರಕ್ತದಾನ ಶಿಬಿರದಲ್ಲಿ ದಾಖಲೆಯ148 ಜನ ದಾನಿಗಳು ರಕ್ತದಾನ ಮಾಡಿದ್ದಾರೆ ಮತ್ತು ಅದೆರೀತಿ 10 ಜನ ನೇತ್ರ ಚಿಕಿತ್ಸೆಯ ಸುದುಪಯೋಗವನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಾಯಿ ಸಮರ್ಥ ಫೌಂಡೇಶನದ ಸಂಸ್ಥಾಪಕ ಅರುಣ ಮೊ ಸಾಲಳ್ಳಿ ಹಾಗೂ ನಿರ್ದೇಶಕ ಮಂಡಳಿಯ …
Read More »ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ* *ಗೋಕಾಕ :* ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಆರಂಭಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ …
Read More »ಪ್ರತಿ ಸಮಸ್ಯೆಗಳಿಗೂ ಸತೀಶ ಜಾರಕಿಹೊಳಿ ಫೌಂಡೇಶನ್ ಕೈ ಜೋಡಿಸಲಿದೆ : ಯುವ ನಾಯಕ ರಾಹುಲ್ ಜಾರಕಿಹೊಳಿ
ಬೆಳಗಾವಿಯ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳಿಗೆ ಸೌಂಡ್ ಸಿಸ್ಟಮ್ ಹಾಗು ಕುರ್ಚಿ ಗಳನ್ನು ವಿತರಿಸಿದ ರಾಹುಲ್ ಜಾರಕಿಹೊಳಿ ಬೆಳಗಾವಿ: “ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್‌ನಿಂದ ಘಟಪ್ರಭಾ ಸೇವಾದಳದಲ್ಲಿ ವಿದ್ಯಾರ್ಥಿಗಳಿಗೆ ಆರ್ಮಿ, ಪೊಲೀಸ್ ತರಬೇತಿಯನ್ನು ಉಚಿತ ನೀಡಲಾಗುತ್ತಿದೆ ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ಜಾದವ ನಗರದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ …
Read More »ಬಸವ ಪಂಚಮಿ ನಿಮಿತ್ತ ಮಕ್ಕಳಿಗೆ ಹಾಲು-ಹಣ್ಣು ವಿತರಣೆ: ಯುವ ನಾಯಕ ರಾಹುಲ್ ಜಾರಕಿಹೊಳಿ
ನಾಡಿನ ಜನತೆಗೆ ಬಸವ ಪಂಚಮಿ ಹಾರ್ದಿಕ ಶುಭಾಶಯ ಕೋರಿದ ರಾಹುಲ್ ಜಾರಕಿಹೊಳಿ ಗೋಕಾಕ :” ದೇಶದಲ್ಲಿ ಲಕ್ಷಾಂತರ ಬಡಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಅಂತಹ ಮಕ್ಕಳನ್ನು ಗುರುತಿಸಿ ಹಾಲು-ಹಣ್ಣು ವಿತರಿಸುವ ಕಾರ್ಯಗಳಾಗಬೇಕು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಗೋಕಾಕ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು. ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ರಾಜ್ಯಾದ್ಯಂತ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಪರಿವರ್ತನೆ ಮಾಡಿ …
Read More »ಶ್ರೀ ಮಹಾಲಿಂಗೇಶ್ವರ ಪೆಟ್ರೋಲಿಯಂ ನೂತನ ಬಂಕ್ ಉದ್ಘಾಟಿಸಿದ ಶಾಸಕ ಸತೀಶ ಜಾರಕಿಹೊಳಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ
ಮಹಾಲಿಂಗಪೂರ: ” ಸರ್ವಧರ್ಮ ಸಮಾನತೆಯಿಂದ ಕಾಣಿದಾಗ ಮಾತ್ರ ಜನರ ವಿಶ್ವಾಸ, ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ. ಬೆಳಗಾವಿಯಿಂದ ಬೆಂಗಳೂರು ಬೆಳೆಯಲು ಸಮಾನತೆಯ ಮೂಲಮಂತ್ರವೇ ಕಾರಣವಾಗಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು. ಪಟ್ಟಣದ ಶ್ರೀ ಮಹಾಲಿಂಗೇಶ್ವರ ಪೆಟ್ರೋಲಿಯಂ ಅವರ ನೂತನ ಬಂಕ್ ನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿ ಮಾತನಾಡಿದರು. ಶಕ್ತಿ ಮೀರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೆವೆ. ಯಾವುದೇ ಜಾತಿ ಮೇಲೆ ವಿಶ್ವಾಸ ಇಟ್ಟಿಲ್ಲ. …
Read More »*ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ*
ತಪಸಿ ಹಾಗೂ ಗೋಸಬಾಳ ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನೆ ಸಲ್ಲಿಕೆ* *ಗೋಕಾಕ: ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ ಎರಡೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ …
Read More »ಯಮಕನಮರಡಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ
5 ಕೋಟಿ ವೆಚ್ಚದ ಸಿಸಿ ರಸ್ತೆಗೆ ಶಾಸಕ ಸತೀಶ್ ಜಾರಕಿಹೊಳಿ ಅವರ ಹೆಸರು ನಾಮಕರಣ, ಮಕ್ಕಳೇ ದೇಶದ ಆಸ್ತಿ ಯಮಕನಮರಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಶಾಸಕರ ವಿಶೇಷ ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದ ಇಸ್ಲಾಂಪುರ , ಚಿಲಬಾಂವಿ ಗ್ರಾಮದ ವಿವಿಧ ಕಾಮಗಾರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು. ಇಸ್ಲಾಂಪುರ , ಚಿಲಬಾಂವಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ …
Read More »ಘಟಪ್ರಭಾ ಬ್ರೇಕಿಂಗ್: ಬೈಕ್ ಮೇಲೆ ಬಂದು ಸರಗಳ್ಳತನ ಮಾಡಿದ ಖದೀಮರು!
ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಸರಗಳ್ಳತನವಾಗಿರುವ ಘಟನೆ ನಡೆದಿದೆ .ಪಟ್ಟಣದ ನಿವಾಸಿಯಾದ ಗೃಹಿಣಿಯೊಬ್ಬರು ಊರಿಂದ ಬಂದ ತಮ್ಮ ಸಂಬಂಧಿಗಳ ಜೊತೆ ಮಾರ್ಕೆಟ್ ಗೆ ಬಂದು ಮನೆಗೆ ವಾಪಸ್ಸು ತೆರಳುತ್ತಿರುವಾಗ ಕಂಬಾರ ಓಣಿಯ ಹತ್ತಿರದ ಮುಖ್ಯ ರಸ್ತೆಯಲ್ಲಿಯೇ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಎಸ್ಕೆಪ್ ಆಗಿದ್ದಾರೆ . ಬೈಕ್ ಸವಾರರು ಮಂಕಿ …
Read More »ಗೋಕಾಕ ಬ್ರೇಕಿಂಗ್ : 4 ವರ್ಷದ ಪುತ್ರನ ಕುತ್ತಿಗೆ ಇರಿದು ಹಾಕಿದ ಪಾಪಿ ತಂದೆ
ಗೋಕಾಕ್ ತಾಲೂಕಿನ ಶಿಲ್ತಿಬಾವಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು 4 ವರ್ಷದ ಮಗನ ಕುತ್ತಿಗೆ ಇರಿದು ಹಾಕಿದ್ದು, ಮಗ ಸಾವಿಗೀಡಾಗಿದ್ದಾನೆ. ಪತ್ನಿ ಸ್ಥಿತಿ ಗಂಭೀರವಾಗಿದ್ದು, ಗೋಕಾಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ ಸಂಜೆ ಘಟನೆ ನಡೆದಿದೆ. ಕಬ್ಬಿನ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿದ 28 ವರ್ಷದ ಮುತ್ತೆಪ್ಪ ಅಕ್ಕಾನಿ ತನ್ನ ಪತ್ನಿ 25 ವರ್ಷದ ಲಕ್ಷ್ಮೀ ಮತ್ತು 4 ವರ್ಷದ ಪುತ್ರ ಬಾಳೇಶ್ ನ …
Read More »