Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ಕೆ!

ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯ ಫಲಿಂತಾಶ ಹೊರ ಬಿದ್ದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಶಶಿ ತರೂರ್ ಸೋಲು ಕಂಡಿದ್ದಾರೆ. ಈ ಮೊದಲು ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾದಂತಾಗಿದೆ. ಹಾಗೆಯೇ, ಈ ಸ್ಥಾನವನ್ನು ವಹಿಸಿಕೊಳ್ಳುತ್ತಿರುವ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ. ತರೂರ್ ಅವರಿಗೆ 1072 ಮತಗಳು …

Read More »

ಗೋಕಾಕ ತಾಲೂಕಿನಲ್ಲಿ ಜಾನುವಾರು ಆರೋಗ್ಯ ಶಿಬಿರ ಮತ್ತು ಚರ್ಮಗಂಟು ರೋಗದ ಅರಿವು ಕಾರ್ಯಕ್ರಮ

ಗೋಕಾಕ : ಜಾನುವಾರುಗಳಿಗೆ ಚರ್ಮಗಂಟಿನ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಅದನ್ನು ಇತರೆ ಜಾನುವಾರುಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವಂತೆ ಪಶು ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕಮತ ತಿಳಿಸಿದರು   ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗಾಗಿ ಹಮ್ಮಿಕೊಂಡ ಜಾನುವಾರು ಆರೋಗ್ಯ ಶಿಬಿರ ಮತ್ತು ಚರ್ಮಗಂಟು ರೋಗದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .   ಜಾನುವಾರುಗಳು ರೈತನ ಆರ್ಥಿಕ ಶಕ್ತಿಯಾಗಿವೆ . …

Read More »

*ಗುಜನಾಳ ಗ್ರಾಮದಲ್ಲಿ ಅಂಟು ರೋಗ ಕುರಿತು ಜನಜಾಗೃತಿ ಕಾರ್ಯಕ್ರಮ ಪಶು ಆರೋಗ್ಯ ವರ್ಧಕ ಔಷಧಿ ವಿತರಣೆ

ಗೋಕಾಕ ತಾಲೂಕಿನ ಗುಜನಾಳ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ದನ – ಕರುಗಳಲ್ಲಿ ಉಲ್ಬಣಗೊಂಡಿರುವ ಅಂಟುರೋಗ ಕುರಿತು ರೈತರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಜಾನುವಾರುಗಳಿಗೆ ಆರೋಗ್ಯ ವರ್ಧಕ ಔಷಧಿ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಭೀಮನಗೌಡ ಪೋಲೀಸಗೌಡರ ಅವರು ಭಾಗವಹಿಸಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಚಿತ ಆರೋಗ್ಯವರ್ಧಕ ಔಷಧಿ ವಿತರಿಸಿದರು , ಈ …

Read More »

ಗೋಕಾಕದಲ್ಲಿ ಟ್ರಾಫಿಕ್ ಕಿರಿಕಿರಿ; ಬೇಸತ್ತ‌ ಜನತೆ! ಕಾರಣ ಯಾರು?

ಗೋಕಾಕ : ನಗರದ ಬಸವೇಶ್ವರ ವೃತ್ತದಲ್ಲಿ ಹೆಚ್ಚುತ್ತಿದೆ ಟ್ರಾಫಿಕ್ ಕಿರಿಕಿರಿ ದಿನನಿತ್ಯವೂ ಟ್ರಾಫಿಕ್ ಕಿರಿಕಿರಿಗೆ ಸಾರ್ವಜನಿಕರು ಬೇಸತ್ತಿದ್ದಾರೆ. ಇಂದು ಬಸವೇಶ್ವರ ವೃತ್ತದಿಂದ ಲಕ್ಷ್ಮೀ ಟಾಕೀಸ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ಪಾರ್ಕಿಂಗ್ ಅವ್ಯವಸ್ಥೆ: ಪ್ರಮುಖ ರಸ್ತೆ ಮತ್ತು ನಗರದ ಒಳಭಾಗದ ರಸ್ತೆಗಳ ಬದಿಯಲ್ಲಿ ಸಮ ಮತ್ತು ಬೆಸ ಎಂದು ನಿಯಮ ಮಾಡಿದರು ಸಹಿತ ನಿಯಮ ಪಾಲನೆ ಆಗ್ತಾ ಇಲ್ಲ. ಮನಸ್ಸಿಗೆ ಬಂದ ಹಾಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. …

Read More »

*ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ*

ಗೋಕಾಕ : ತಾಲೂಕಿನ ಸಂತೋಷ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಹಿರೇನಂದಿ ಗ್ರಾಮದಿಂದ ಕಾರ್ಖಾನೆವರಗೆ ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ತರಲಾಯಿತು. ನಂತರ ಗೋಮಾತೆ ಗೆ ಪೂಜೆ ಸಲ್ಲಿಸಿ, ಶ್ರೀ ಅನಂತಪದ್ಮನಾಭ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಮಹಿಳೆಯರು ಕುಂಭ ಮೇಳ, ಯುವಕರು ಭಂಡಾರದಲ್ಲಿ ಮಿಂದೆದ್ದು ಅತಿ ಉತ್ಸಾಹದಿಂದ ಮೇರವಣಿಗೆಯಲ್ಲಿ …

Read More »

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ವರ್ಚಸ್ಸಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ: ಅರುಣ್ ಸಿಂಗ್.

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ.ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗುತ್ತದೆ ಎಂದರು‌. …

Read More »

ಕನ್ನಡ ರಕ್ಷಣಾ ವೇದಿಕೆಯ ಪಾಮಲದಿನ್ನಿ ಗ್ರಾಮದ ಘಟಕದ ಉದ್ಘಾಟನೆ!

ಗೋಕಾಕ : ಪಾಮಲದಿನ್ನಿ ಗ್ರಾಮದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಶ್ರೀ ತಾಯಿ ಭುವನೇಶ್ವರಿ ಪೂಜೆ ಮಾಡುವುದರೊಂದಿಗೆ ಉದ್ಘಾಟನೆ ಮಾಡಿದರು. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ಅವರು ಮಾತನಾಡಿ ನಾಡು ನುಡಿ ನೆಲ ಜಲ ಭಾಷೆ ರಕ್ಷಣೆಗಾಗಿ ನಮ್ಮ ಸಂಘಟನೆ ಕಂಕಣ ಬದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಪಂಜಾನಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ ಗೋಕಾಕ್ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣ …

Read More »

ನಾಳೆಯಿಂದ ಟಿ20 ವಿಶ್ವಕಪ್ ಆರಂಭ, ಗೋಕಾಕದಲ್ಲಿ ಮತ್ತೆ ಬೆಟ್ಟಿಂಗ್‌ ಆರಂಭವಾಗುತ್ತಾ? ಯುವಕರಿಗೆ ಸಾಲದ ಶೂಲ.. ಹೆತ್ತವರಿಗೆ ತಳಮಳ..!

ಗೋಕಾಕ: ಬೆಟ್ಟಿಂಗ್‌ನಲ್ಲಿ ಯಾವ ಟೀಮ್‌ನಲ್ಲಿ ಯಾರು ಹೆಚ್ಚು ರನ್‌ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್‌ ಪಡೆಯುತ್ತಾರೆ, ಯಾವ ಟೀಮ್‌ ಕೊನೆ ಹಂತಕ್ಕೆ ಬರಲಿದೆ, ಸೇರಿದಂತೆ ಪ್ರತಿ ಬಾಲ್‌, ರನ್‌ ಮೇಲೆಯೂ ಬಾಜಿ ಕಟ್ಟುವುದಕ್ಕೆ ಭಾರಿ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಕ್ರಿಕೆಟ್‌ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ಬೆಟ್ಟಿಂಗ್‌ ದಂಧೆ ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇನ್ನೇನು ಆರಂಭವಾಗುತ್ತಿದ್ದು, ಇದರ ಜತೆಜತೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೆಟ್ಟಿಂಗ್‌ ಕೂಡಾ ಜೋರಾಗುವ …

Read More »

*ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ*

ಸಾಲಹಳ್ಳಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ …

Read More »

“ಭಾರತ ಜೋಡೋ ಪಾದಯಾತ್ರೆಯಲ್ಲಿ ಗೋಕಾಕ ಕಾಂಗ್ರೆಸ್ ಕಾರ್ಯಕರ್ತರು ಭಾಗಿ*

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಶುಕ್ರವಾರ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಆರಂಭವಾಯಿತು. ಈ ಪಾದಯಾತ್ರೆಯಲ್ಲಿ ಗೋಕಾಕ ತಾಲೂಕಿನ ಕಾಂಗ್ರೆಸ್‌ ಮುಖಂಡರು ಹೆಜ್ಜೆ ಹಾಕಿ, ‘ಭಾರತ್‌ ಜೋಡೊ ಯಾತ್ರೆ ಹೋದಲೆಲ್ಲ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದೆ. ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದರಿಂದ ನಮಗೂ ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್‌ 30ರಂದು ಕರ್ನಾಟಕ ಪ್ರವೇಶಿಸಿರುವ ಯಾತ್ರೆಯು ಅಕ್ಟೋಬರ್‌ …

Read More »