ಗೋಕಾಕ: ಮೇ-10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸತತ 6ನೇ ಬಾರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಅವರು ಹೇಳಿದರು. …
Read More »ಬಹುಜನ ಭಾರತ ಪಕ್ಷದ ಅಭ್ಯರ್ಥಿ ಈಶ್ವರ ಗುಡಜ ಭರ್ಜರಿ ಪ್ರಚಾರ!
ಚಿಕ್ಕೋಡಿ : ಈಶ್ವರ ಗುಡಜ ಅವರನ್ನು ಈ ಭಾರೀ ಅಂತರದಿಂದ ಗೆಲ್ಲಿಸಬೇಕೆಂದು ದಲಿತ ಮುಖಂಡ ದೇವರಾಜ ಕಾಂಬಳೆ ಅವರು ಕರೆ ನೀಡಿದರು. ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರದ ಸಿದ್ದಾಪುರವಾಡಿ ನಲ್ಲಿ ನಡೆದಿದ್ದ ಕಾರ್ಯಕರ್ತರು ಬಹುಜನ ಭಾರತ ಪಕ್ಷದ ಅಭ್ಯರ್ಥಿ,ಈಶ್ವರ ಗುಡಜ ಪರ ಮತಯಾಚಿಸಿ ಅವರು ಮಾತನಾಡಿದರು. ಸಂಘಟನೆಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದೆಯೂ ಸರ್ವರ ಪ್ರಗತಿಗೆ ಶ್ರಮಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಕಾರಣ ಅವರನ್ನು ಆಯ್ಕೆ ಮಾಡಿ ವಿಧಾನ …
Read More »*ಹಿಡಕಲ್ ಜಲಾಶಯದಿಂದ ಜಿಆರ್ಬಿಸಿ, ಜಿಎಲ್ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ*
*ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ *ಗೋಕಾಕ* : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರ ಸಂಜೆ …
Read More »ಚಿಕ್ಕೋಡಿ ಸದಲಗಾ ಅಭ್ಯರ್ಥಿಯಾಗಿ BBP (ಬಹುಜನ ಭಾರತ ಪಾರ್ಟಿ ) ವತಿಯಿಂದ ಈಶ್ವರ ಗುಡಜ ನಾಮಪತ್ರ ಸಲ್ಲಿಕೆ.
ಚಿಕ್ಕೋಡಿ :ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭಾ ಚಿಕ್ಕೋಡಿ- ಸದಲಗಾ ಮತಕ್ಷೇತ್ರದ BBP (ಬಹುಜನ ಭಾರತ ಪಾರ್ಟಿ ) ವತಿಯಿಂದ ಶ್ರೀ ಈಶ್ವರ ಗುಡಜ ಇವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬುಧವಾರ ಪಟ್ಟಣದ ತಾಲೂಕಾಡಳಿತ ವಿಧಾನ ಸೌಧ(ತಹಶೀಲ್ದಾರ ಕಾರ್ಯಾಲಯ)ಕ್ಕೆ ತೆರಳಿ ಚಿಕ್ಕೋಡಿ ಮತಕ್ಷೇತ್ರದ ಚುನಾವಣಾಧಿಕಾರಿ ಮಾಧವ್ ಗಿತ್ತೆ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. BBP (ಬಹುಜನ ಭಾರತ ಪಾರ್ಟಿ ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿ …
Read More »ಬಿಜೆಪಿಗೆ ಗುಡ್ ಬೈ ಹೇಳಿದ ಜಗದೀಶ್ ಶೆಟ್ಟರ್!
ಬಿಜೆಪಿಗೆ ಗುಡ್ ಬೈ ಹೇಳಿದ ಜಗದೀಶ್ ಶೆಟ್ಟರ್! ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಆರು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಾಳೆ ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Read More »*ಐತಿಹಾಸಿಕ “ಲೀಡ್” ಆಗಲು ಕಾರ್ಯಕರ್ತರು ಒಂದಾಗಿ, ಒಗ್ಗಟ್ಟಾಗಿ ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ*
ಶನಿವಾರದಂದು ಅರಭಾವಿ ಕ್ಷೇತ್ರದ ಎಲ್ಲ ಮತಗಟ್ಟೆಗಳ ಪ್ರಮುಖರ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೀಡ್ ನೀಡಲು ಪ್ರತಿ ಮತಗಟ್ಟೆಗಳ ಪ್ರಮುಖರು ಹಾಗೂ ಮುಖಂಡರು ಒಗ್ಗಟ್ಟಾಗಿ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಜರುಗಿದ ಅರಭಾವಿ ಕ್ಷೇತ್ರದ …
Read More »ಯಾರೂ ಪಕ್ಷ ಬಿಡುವ ದುಡುಕಿನ ನಿರ್ಧಾರ ಮಾಡಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು, ಟಿಕೇಟ್ ಮೇಲೆ ಕಣ್ಣಿಟ್ಟು ನಿರಾಶೆಗೊಂಡಿರುವ ಆಕಾಂಕ್ಷಿಗಳು ಯಾವ ಕಾರಣಕ್ಕೂ ಪಕ್ಷ ಬಿಡಬಾರದು. ಆತುರದ ನಿರ್ಧಾರವನ್ನು ಕೈಗೊಳ್ಳಬಾರದು. ಇಷ್ಟರಲ್ಲಿಯೇ ಪಕ್ಷದ ವರಿಷ್ಠರು ಅಸಮಧಾನಿತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಬಸವಂತ ದಾಸನವರ ತೋಟದಲ್ಲಿ ಬುಧವಾರ ಸಂಜೆ ಜರುಗಿದ ಮೂಡಲಗಿ, ನಾಗನೂರ, ಕಲ್ಲೋಳಿ ಮತ್ತು ಅರಭಾವಿ ಪಟ್ಟಣಗಳ ಬಿಜೆಪಿ …
Read More »ಗೋಕಾಕ:ವಿಧಾನಸಭೆ ಚುನಾವಣೆ ; ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಗೋಕಾಕ ಏ 13 : ಗೋಕಾಕ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಗುರುವಾರದಂದು ನಾಮಪತ್ರ ಸಲ್ಲಿಸಿದರು. ಗುರುವಾರ ಶುಭ ಮೂಹರ್ತದಲ್ಲಿ ತಮ್ಮ ಆಪ್ತರೊಂದಿಗೆ ನಗರದ ಮಿನಿ ವಿಧಾನಸೌದಕ್ಕೆ ಆಗಮಿಸಿದ ಬಿಜೆಪಿ ಅಧಿಕೃತ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿ.ಆರ್.ಕಾಗಲ್, ಚಿದಾನಂದ ದೇಮಶೆಟ್ಟಿ , ಲಕ್ಷ್ಮಿಕಾಂತ ಎತ್ತಿನಮನಿ ಉಪಸ್ಥಿತರಿದ್ದರು ಅಪಾರ ಬೆಂಬಲಿಗರ ಮೆರವಣಿಗೆಯೊಂದಿಗೆ ಏಪ್ರಿಲ್ 17 ಅಥವಾ …
Read More »*ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷ ಮತಗಳಿಂದ ಆಯ್ಕೆ ಮಾಡಿ.- ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ*
ಗೋಕಾಕ: ಕಳೆದ ಎರಡು ದಶಕದಿಂದ ಅರಭಾವಿ ಕ್ಷೇತ್ರದ ಶಾಸಕರಾಗಿ, ಆ ಭಾಗದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡುವ ಸಂಕಲ್ಪವನ್ನು ಕಾರ್ಯಕರ್ತರು ಮಾಡುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು, ಅರಭಾವಿ ಕ್ಷೇತ್ರದ ಹಳ್ಳೂರ, ಮೆಳವಂಕಿ, ಕೌಜಲಗಿ ಮತ್ತು ವಡೇರಹಟ್ಟಿ ಜಿಲ್ಲಾ ಪಂಚಾಯತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಾಲಚಂದ್ರ ಜಾರಕಿಹೊಳಿ ಅವರ …
Read More »ಯಮಕನಮರಡಿ ಮತಕ್ಷೇತ್ರದ ಗವನಾಳ ಮತ್ತು ಗೋಟುರ ಗ್ರಾಮಗಳಿಗೆ ಶಾಸಕ ಸತೀಶ ಜಾರಕಿಹೊಳಿ ಮತಯಾಚನೆ
ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಗವನಾಳ ಮತ್ತು ಗೋಟುರ ಗ್ರಾಮಗಳಿಗೆ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ, ಮತಯಾಚಿಸಿದರು. ಈ ವೇಳೆ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನನ್ನ ಕ್ಷೇತ್ರ ಸುಸಜ್ಜಿತವಾಗಿಬೇಕೆಂದು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ ಮತಬಾಂಧವರು ಕಾಂಗ್ರೆಸ್ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಯಮಕನಮರಡಿ ಮತಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿ …
Read More »