ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಧ್ವಜಾರೋಹಣ ನೆರವೇರಿಸಿದರು, ಜಿಟಿ ಜಿಟಿ ಮಳೆ ನಡುವೆಯೂ ಸರಳವಾಗಿ ಸಮಾರಂಭ ಆಚರಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಇಲ್ಲದೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಮಾತ್ರ ಭಾಗಿಯಾಗಿದ್ದರು. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ: ಇದೇ ವೇಳೆ ಇಲಾಖೆಯ ವಸತಿ …
Read More »ಸ್ವಾತಂತ್ರ್ಯ ದಿನಾಚರಣೆ ಪ್ರಶಸ್ತಿ: ರಾಜ್ಯದ 19 ಪೊಲೀಸರಿಗೆ ಗೌರವ
ಹೊಸದಿಲ್ಲಿ: ಸ್ವಾತಂತ್ರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳು ನೀಡುವ ಶೌರ್ಯ ಪ್ರಶಸ್ತಿಗೆ ಈ ಬಾರಿ ರಾಜ್ಯದ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಕೇಂದ್ರ ಗೃಹ ಇಲಾಖೆ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕರ್ನಾಟಕ ಪೊಲೀಸ್ ಸಿಐಡಿ ಎಎಸ್‌ಐ ಪ್ರಸನ್ನ ಕುಮಾರ್ ಅವರಿಗೆ ರಾಷ್ಟ್ರಪತಿ ಪದಕ ನೀಡಲಾಗಿದೆ. ಇನ್ನು ರಾಜ್ಯದ 18 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ. 1. ಹೇಮಂತ್‌ಕುಮಾರ್ ರಂಗಪ್ಪ-DSP, ಲೋಕಾಯುಕ್ತ 2. ಪರಮೇಶ್ವರ್ ಹೆಗ್ಡೆ-DSP, ಆರ್ಥಿಕ ಅಪರಾಧ ಇಲಾಖೆ …
Read More »ಲಂಚ ಪ್ರಕರಣ: ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಎಸಿಬಿ ಬಲೆಗೆ.
ಗದಗ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಲಂಚ ಪಡೆಯುವಾಗ ಪಿಡಿಓ ಮತ್ತು ಅಕೌಂಟೆಂಟ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಮುಂಡರಗಿ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಪಿಡಿಓ ಸಿದ್ದಪ್ಪ ಡಂಬಳ, ಅಕೌಂಟೆಂಟ್ ಪ್ರದೀಪ್ ಕದಮ್ ಎಂಬವವರು 41 ಕಂಪ್ಯೂಟರ್ ಉತಾರ ನೀಡಲು 41 ಸಾವಿರ ಬೇಡಿಕೆ ಇಟ್ಟಿದ್ದಾರೆ. 41 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಡರಗಿ ಪಟ್ಟಣದ ಅಕೌಂಟೆಂಟ್ …
Read More »ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆ ಶುಭ ಕೋರಿದ್ದಾರೆ. ನಾಳೆ ದೇಶದಾದ್ಯಂತ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದು, ಬ್ರಿಟಿಷ್ ರ ದಾಸ್ಯದ ಸಂಕೋಲೆಯಿಂದ ಭಾರತ ಮುಕ್ತಗೊಂಡ ಈ ದಿನದಂದು ಸ್ವಾತಂತ್ರ್ಯ ಪಡೆಯಲು ಹೋರಾಡಿದ ಎಲ್ಲ ಮಹಾನುಭಾವರ ತ್ಯಾಗ, ಬಲಿದಾನವನ್ನು ಸ್ಮರಿಸೋಣ; ಕೋವಿಡ್ ಯೋಧರನ್ನು ಗೌರವಿಸೋಣ. ನಾಡಿನ ಜನತೆಗೆ 74ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರು.
Read More »ಸರಕಾರದ ಆದೇಶದಂತೆ ಶ್ರೀ ಗಣೇಶೋತ್ಸವ ಹಬ್ಬವನ್ನು ಆಚರಿಸಿ : PSI ಖಿಲಾರೆ ಹೇಳಿಕೆ.
ಗೋಕಾಕ: ಕರೋನಾ ವೈರಸ್ ತೀವೃತೆಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಶ್ರೀ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪಿಸದೇ, ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಬೇಕು. ಸರಕಾರದ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಅಂತವರ ವಿರುದ್ಧ ಕಠೀಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಗೋಕಾಕ ಗ್ರಾಮೀಣ ಠಾಣೆಯ ಪಿಎಸ್‌ಐ ನಾಗರಾಜ ಖಿಲಾರೆ ಹೇಳಿದರು.ಶುಕ್ರವಾರದಂದು ನಗರದ ಗೋಕಾಕ ಗ್ರಾಮೀಣ ಠಾಣೆಯ ಆವರಣದಲ್ಲಿ ಗಣೇಶ ಚತುರ್ಥಿಯ ನಿಮಿತ್ಯವಾಗಿ ಕರೆದ ಶಾಂತಿ ಸಭೆಯನ್ನುದ್ದೇಶಿಸಿ …
Read More »ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ಪ್ರಯತ್ನ ಮಾಡೊಣ: ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ದೇಶದ ಸಮಸ್ತ ನಾಗರೀಕರಿಗೆ ನಾಳೆ ದೇಶ್ಯಾದ್ಯಂತ ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕೋರಿದ್ದಾರೆ. ನಮ್ಮ ದೇಶದ ಜನರು ಸ್ವಾತಂತ್ರ್ಯವಾಗಿ ಸಮಾನತೆಯಿಂದ ಮತ್ತು ಸಹ ಬಾಳ್ವೆಯಿಂದ ಬದುಕಬೇಕು ಎಂದು ಬಯಸಿದ್ದ ಹಿರಿಯರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಲು ಪ್ರಯತ್ನ ಮಾಡೋಣ ಎಂದ ಸತೀಶ ಜಾರಕಿಹೊಳಿ ಅವರು ಮಹಾನ ನಾಯಕರು ಕಂಡ ಕನಸನ್ನು ನಾವು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ನಾಳಿನ ಸ್ವಾತಂತ್ರ್ಯ ದಿನಾಚರಣೆಯೂ …
Read More »ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮತ್ತೊಂದು ದಾಖಲೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಸುದೀರ್ಘ ಅವಧಿ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದೀಗ ಮಾಜಿ ಪ್ರಧಾನಿ, ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆ ಮುರಿದಿದ್ದಾರೆ. ಇಷ್ಟೇ ಅಲ್ಲ ಸುದೀರ್ಘ ಅವಧಿಗೆ ಪ್ರಧಾನಿಯಾದ ಭಾರತದ ನಾಲ್ಕನೇ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಿಜೆಪಿಯಿಂದ ಪ್ರಧಾನಿ ಪಟ್ಟ ಅಲಂಕರಿಸಿದ ಅಟಲ್ ಬಿಹಾರಿ ವಾಜಪೇಯಿ 2,268 ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. …
Read More »ಶ್ರೀ ಶಂಕರಾನಂದ ಮಹಾಸ್ವಾಮಿಗಳು ಲಿಂಗೈಕ್ಯ .
ಭಾವ ಪೂರ್ಣ ಶ್ರದ್ಧಾಂಜಲಿ ???????????????? ಗೋಕಾಕ : ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ(ಯರಗಲ ಮಠ)ದ ಶ್ರೀ ಶಂಕರಾನಾಂದ ಮಹಾಸ್ವಾಮಿಗಳು (೫೫) ಇವರು ಅನಾರೋಗ್ಯದ ಹಿನ್ನೆಲೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸಂಸಾರಿಕ ಮಠದ ಸ್ವಾಮಿಜಿಗಳಾಗಿದ್ದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಾಯಂಕಾಲ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿಗೆ ಜಾರುವ ಮುಂಚೆ ಕುಸಿದು ಬಿದ್ದಿದ್ದು, ಭಕ್ತರು ಸೇರಿ ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. …
Read More »ಲಂಚ ಪ್ರಕರಣ: ಕಲಕಾಂಬ ಗ್ರಾಪಂ ಪಿಡಿಓ ಬಂಧನ.
ಬೆಳಗಾವಿ: ತಾಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀಶೈಲ ದೇವೇಂದ್ರ ನಾಗಠಾಣ ಲಂಚ ಸ್ವೀಕರಿಸುವಾಗ ಭೃಷ್ಟಾಚಾರ ನಿಗೃಹ ದಳ (ಎಸಿಬಿ)ದ ಬಲೆಗೆ 5 ಸಾವಿರ ರೂಪಾಯಿ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಸ್ಥಳೀಯ ರೋಹಣ ಚಂದ್ರಕಾಂತ್ ಪಾಟೀಲ ಎಂಬುವವರು ಪಿಡಿಓ ವಿರುದ್ಧ ದೂರು ಸಲ್ಲಿಸಿದರು. ಫಿರ್ಯಾದಿಯ ತಂದೆ ಮತ್ತು ದೊಡ್ಡಪ್ಪನ ಹೆಸರಿನಲ್ಲಿ ಜಂಟಿಯಾಗಿರುವ ಮನೆಗಳ( ಜಂಟಿಯಾಗಿರುವ ಮನೆಗಳಾದ ಆಸ್ತಿ ನಂ.೧೨೪ ಸಿ ಮತ್ತು …
Read More »ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಾರ್ಗಸೂಚಿ ಪ್ರಕಟ!
ಬೆಳಗಾವಿ,-ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಶ್ರೀ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ …
Read More »
CKNEWSKANNADA / BRASTACHARDARSHAN CK NEWS KANNADA