ಗೋಕಾಕ: ಕರೋನಾ ವೈರಸ್ ತೀವೃತೆಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಶ್ರೀ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪಿಸದೇ, ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಬೇಕು. ಸರಕಾರದ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಅಂತವರ ವಿರುದ್ಧ ಕಠೀಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಗೋಕಾಕ ಗ್ರಾಮೀಣ ಠಾಣೆಯ ಪಿಎಸ್ಐ ನಾಗರಾಜ ಖಿಲಾರೆ ಹೇಳಿದರು.ಶುಕ್ರವಾರದಂದು ನಗರದ ಗೋಕಾಕ ಗ್ರಾಮೀಣ ಠಾಣೆಯ ಆವರಣದಲ್ಲಿ ಗಣೇಶ ಚತುರ್ಥಿಯ ನಿಮಿತ್ಯವಾಗಿ ಕರೆದ ಶಾಂತಿ ಸಭೆಯನ್ನುದ್ದೇಶಿಸಿ …
Read More »ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ಪ್ರಯತ್ನ ಮಾಡೊಣ: ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ದೇಶದ ಸಮಸ್ತ ನಾಗರೀಕರಿಗೆ ನಾಳೆ ದೇಶ್ಯಾದ್ಯಂತ ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕೋರಿದ್ದಾರೆ. ನಮ್ಮ ದೇಶದ ಜನರು ಸ್ವಾತಂತ್ರ್ಯವಾಗಿ ಸಮಾನತೆಯಿಂದ ಮತ್ತು ಸಹ ಬಾಳ್ವೆಯಿಂದ ಬದುಕಬೇಕು ಎಂದು ಬಯಸಿದ್ದ ಹಿರಿಯರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅವರ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಲು ಪ್ರಯತ್ನ ಮಾಡೋಣ ಎಂದ ಸತೀಶ ಜಾರಕಿಹೊಳಿ ಅವರು ಮಹಾನ ನಾಯಕರು ಕಂಡ ಕನಸನ್ನು ನಾವು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ನಾಳಿನ ಸ್ವಾತಂತ್ರ್ಯ ದಿನಾಚರಣೆಯೂ …
Read More »ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮತ್ತೊಂದು ದಾಖಲೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಸುದೀರ್ಘ ಅವಧಿ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದೀಗ ಮಾಜಿ ಪ್ರಧಾನಿ, ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆ ಮುರಿದಿದ್ದಾರೆ. ಇಷ್ಟೇ ಅಲ್ಲ ಸುದೀರ್ಘ ಅವಧಿಗೆ ಪ್ರಧಾನಿಯಾದ ಭಾರತದ ನಾಲ್ಕನೇ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಿಜೆಪಿಯಿಂದ ಪ್ರಧಾನಿ ಪಟ್ಟ ಅಲಂಕರಿಸಿದ ಅಟಲ್ ಬಿಹಾರಿ ವಾಜಪೇಯಿ 2,268 ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. …
Read More »ಶ್ರೀ ಶಂಕರಾನಂದ ಮಹಾಸ್ವಾಮಿಗಳು ಲಿಂಗೈಕ್ಯ .
ಭಾವ ಪೂರ್ಣ ಶ್ರದ್ಧಾಂಜಲಿ ???????????????? ಗೋಕಾಕ : ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ(ಯರಗಲ ಮಠ)ದ ಶ್ರೀ ಶಂಕರಾನಾಂದ ಮಹಾಸ್ವಾಮಿಗಳು (೫೫) ಇವರು ಅನಾರೋಗ್ಯದ ಹಿನ್ನೆಲೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸಂಸಾರಿಕ ಮಠದ ಸ್ವಾಮಿಜಿಗಳಾಗಿದ್ದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಾಯಂಕಾಲ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿಗೆ ಜಾರುವ ಮುಂಚೆ ಕುಸಿದು ಬಿದ್ದಿದ್ದು, ಭಕ್ತರು ಸೇರಿ ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. …
Read More »ಲಂಚ ಪ್ರಕರಣ: ಕಲಕಾಂಬ ಗ್ರಾಪಂ ಪಿಡಿಓ ಬಂಧನ.
ಬೆಳಗಾವಿ: ತಾಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶ್ರೀಶೈಲ ದೇವೇಂದ್ರ ನಾಗಠಾಣ ಲಂಚ ಸ್ವೀಕರಿಸುವಾಗ ಭೃಷ್ಟಾಚಾರ ನಿಗೃಹ ದಳ (ಎಸಿಬಿ)ದ ಬಲೆಗೆ 5 ಸಾವಿರ ರೂಪಾಯಿ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಸ್ಥಳೀಯ ರೋಹಣ ಚಂದ್ರಕಾಂತ್ ಪಾಟೀಲ ಎಂಬುವವರು ಪಿಡಿಓ ವಿರುದ್ಧ ದೂರು ಸಲ್ಲಿಸಿದರು. ಫಿರ್ಯಾದಿಯ ತಂದೆ ಮತ್ತು ದೊಡ್ಡಪ್ಪನ ಹೆಸರಿನಲ್ಲಿ ಜಂಟಿಯಾಗಿರುವ ಮನೆಗಳ( ಜಂಟಿಯಾಗಿರುವ ಮನೆಗಳಾದ ಆಸ್ತಿ ನಂ.೧೨೪ ಸಿ ಮತ್ತು …
Read More »ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಾರ್ಗಸೂಚಿ ಪ್ರಕಟ!
ಬೆಳಗಾವಿ,-ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಶ್ರೀ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ …
Read More »ಯಾದಗಿರಿ : ಲಂಚ ಪಡೆಯುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಎಸಿಬಿ ಬಲೆಗೆ.
ಯಾದಗಿರಿ: ಗುತ್ತಿಗೆ ಆಧಾರದ ನರ್ಸ್ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಡಿಎಚ್ಓ ಎಂ ಎಸ್ ಪಾಟೀಲ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.ಗುತ್ತಿಗೆ ಆಧಾರದ ನರ್ಸ್ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ 30 ಸಾವಿರ ಲಂಚಕ್ಕೆ ಎಂ ಎಸ್ ಪಾಟೀಲ ಬೇಡಿಕೆ ಸಲ್ಲಿಸಿದ್ದರು. ನಂತರ 25 ಸಾವಿರಕ್ಕೆ ಒಪ್ಪಿ ಹಣ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಸಿಕ್ಕಿ ಬಿದ್ದಿದ್ದಾರೆ. ಡಿಎಚ್ಒ …
Read More »ಸಚಿವ ರಮೇಶ ಜಾರಕಿಹೊಳಿ ಅವರಿಗೆ ಭೇಟಿಯಾದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ.
ಬೆಂಗಳೂರು: ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ನಿಯೋಗ ಸಮುದಾಯದ ಮತ್ತು ಜ್ವಲಂತ ವಿಷಯಗಳ ಕುರಿತು ಚರ್ಚೆ ನಡೆಸಿದರು. ನಗರದ ಸಚಿವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಹೊಸದುರ್ಗದ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಕುಂಚಿಟಿಗರ ಮಠದ ಶಾಂತವೀರ ಮಹಾಸ್ವಾಮಿಗಳು,ಮಡಿವಾಳ ಮಾಚಿದೇವ ಮಹಾಸ್ವಾಮಿಗಳು, ಕಾಗಿನೆಲೆ ಗುರುಪೀಠದ ಈಶ್ವರಾನಂದ ಮಹಾಸ್ವಾಮಿಗಳು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಮತ್ತು ಹರಳಯ್ಯ …
Read More »ಪುಂಡಾಟಗಳನ್ನು ಸರ್ಕಾರ ಸಹಿಸಲ್ಲ, ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ’ : ಸಿಎಂ ಬಿಎಸ್ವೈ
ಬೆಂಗಳೂರು: ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗೂ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ. ಈಗಾಗಲೇ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು ಸರ್ಕಾರ ದಾಂಧಲೆ ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೊಲೀಸರು, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. …
Read More »ಬೆಳಗಾವಿ:ಪ್ರತಿ ತಾಲ್ಲೂಕಿನಲ್ಲಿ ಖಾಸಗಿ ಆಸ್ಪತ್ರೆಗೆ ಅನುಮತಿ ನೀಡುವುದು ಕೊರೊನಾ ಹಾವಳಿಯನ್ನು ಎದುರಿಸಲೊಂದು ಅಸ್ತ್ರ.
“ಕೊವಿಡ್ ಹಾಗೂ ಪ್ರವಾಹಗಳು ತಂದೊಡ್ಡಿದ ಮಹಾಪರೀಕ್ಷೆ ಎದುರಿಸಲು ನಾವು ಸಂಪೂರ್ಣ ಬದ್ಧತೆಯೊಂದಿಗೆ ಸಿದ್ಧ” ಬೆಳಗಾವಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಕ್ರಮಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಜಿಲ್ಲೆಯ ಖಾಸಗೀ ಆಸ್ಪತ್ರೆಗಳು ಕೋವಿಡ್ ಹಾಗೂ ಇತರ ಚಿಕಿತ್ಸೆಗೆ ಮುಂದಾಗುತ್ತಿರುವುದು ಸಂತಸದ ಸಂಗತಿ. ಹೀಗೆ ಸ್ವಯಂಪ್ರೇರಿತವಾಗಿ ಮುಂಬರುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿರುವ …
Read More »