Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಭ್ರಷ್ಟ ಅಧಿಕಾರಿಗಳ ಬೇಟೆಗಿಳಿದ ಎಸಿಬಿ: ಕೆಜಿಗಟ್ಟಲೆ ಚಿನ್ನಾಭರಣ ವಶ…..!

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಖಚಿತ ಮಾಹಿತಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ.ಅಧಿಕಾರಿಗಳು ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಾಏಕಿ ದಾಳಿ ನಡೆಸಿ 15 ಲಕ್ಷ ರೂ.ನಗದು ಮತ್ತು ಮೂರು ಕೆಜಿಯಷ್ಟು ಚಿನ್ನಾಭರಣ ವಶಪಡಿಸಿಕೊಂಡು, ದಾಖಲೆ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ. ಬೆಂಗಳೂರು ಕೊಳಚೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಂಎಸ್‍ಎನ್ ರಾಜು ಅವರಿಗೆ ಸೇರಿದ ತುಮಕೂರಿನ ವಾಸದ ಮನೆ, ಬೆಂಗಳೂರು …

Read More »

ಪದವಿ ಶೈಕ್ಷಣಿಕ ವರ್ಷ ಆರಂಭ: ಸೆಪ್ಟೆಂಬರ್ 1ರಿಂದ ಆನ್ ಲೈನ್ ||ಅಕ್ಟೋಬರನಿಂದ ನೇರ(ಆಫ್‍ಲೈನ್) ತರಗತಿ .

ಬೆಂಗಳೂರು, ಆ.26: ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ(ಆಫ್‍ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯ ನಗರದ ವಾರ್ಡ್ ಸಂಖ್ಯೆ 66ರಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ನೇರವಾಗಿ …

Read More »

ಅಕ್ರಮ TDR ಪ್ರಕರಣ: ಬಿಬಿಎಂಪಿ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ!…..

ಬೆಂಗಳೂರು: ಇಂದು ಬೆಳಗ್ಗೆ ಬಿಬಿಎಂಪಿ ಎಂಜಿನಿಯರ್ ಹಾಗೂ ಬ್ರೋಕರ್ ಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಏಕಕಾಲದಲ್ಲಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ. ಅಕ್ರಮ ಟಿಡಿಆರ್ ಹಗರಣ ಸಂಬಂಧಿಸಿ ಇಬ್ಬರು ಮಧ್ಯವರ್ತಿಗಳು, ಜಮೀನು ಮಾಲೀಕ ಹಾಗೂ ಓರ್ವ ಸಹಾಯಕ ಇಂಜನಿಯರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಸಹಾಯಕ ಇಂಜನಿಯರ್ ದೇವರಾಜು, ಮಧ್ಯವರ್ತಿಗಳಾದ ನಾಗೇಶ್, ನಾಗರಾಜು ಮತ್ತು ಜಮೀನು ಮಾಲೀಕನೆಂದು ಮೋಸ …

Read More »

ಅಧಿಕೃತವಾಗಿ ಬಿಜೆಪಿಗೆ ಸಿಂಗಂ ಅಣ್ಣಾಮಲೈ ಸೇರ್ಪಡೆ…..!

ಬೆಂಗಳೂರು : ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ, 2019 ರ ಮೇ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದರು. ಅಣ್ಣಾಮಲೈ ಬಿಜೆಪಿಗೆ ಸೇರಿದ ನಂತರದಲ್ಲಿ ಮಾತನಾಡಿದ ಮುರಳೀಧರ್​ ರಾವ್​, ತಮಿಳುನಾಡಿನಲ್ಲಿ ಹಲವಾರು ಜನ ಬಿಜೆಪಿ ಸೇರುತ್ತಿದ್ದಾರೆ. ಈಗ …

Read More »

ಯಮಕನಮರಡಿ ಕ್ಷೇತ್ರದಲ್ಲಿ ಎರಡು ವರ್ಷದೊಳಗೆ “ಉನ್ನತ ಮಟ್ಟ ಶಿಕ್ಷಣ “ಯೋಜನೆ ಕಾರ್ಯರೂಪಕ್ಕೆ: ಶಾಸಕ ಸತೀಶ ಜಾರಕಿಹೊಳಿ ಭರವಸೆ.

ಬೆಳಗಾವಿ: ಯಮಕನಮರಡಿ ಕ್ಷೇತ್ರದಲ್ಲಿ  ಬಡ ಜನರಿಗೆ ಉನ್ನತ ಮಟ್ಟ ಶಿಕ್ಷಣ  ದೊರೆಯಲಿ ಎಂಬ ಮಹಾತ್ವಾಂಕಾಕ್ಷೆಯಿಂದ  ಯೋಜನೆಯೊಂದನ್ನು ರೂಪಿಸಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಹೇಳಿದ್ದಾರೆ. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಪದವಿ ಪೂರ್ವ ಕಾಲೇಜು, ಮಹರ್ಷಿ ವಾಲ್ಮೀಕಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನಕ್ಕೆ ಮಂಗಳವಾರ  ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ  200 ಕ್ಕೂ ಹೆಚ್ಚು ಖುರ್ಚಿ, ಟಿಪಾಯಿ …

Read More »

ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಾಥ್ !

ವಿಜಯಪುರ:  ಆಲಮಟ್ಟಿಯ ಲಾಲ್‌ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಗಳವಾರ ಬಾಗಿನ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬಾಗಲಕೋಟೆ ಜಿಲ್ಲಾ‌ ಉಸ್ತುವಾರಿ ಸಚಿವರಾದ ಗೋವಿಂದ‌ ಕಾರಜೋಳ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ,  ಕಂದಾಯ ಸಚಿವ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ವಿಧಾನ ಪರಿಷತ್ ವಿರೋಧ ಪಕ್ಷದ‌ನಾಯಕ ಎಸ್.ಆರ್.ಪಾಟೀಲ್, ಜಿ.ಪಂ ಅದ್ಯಕ್ಷೆ ಬಾಯಕ್ಕ ಮೇಟಿ, ಮುದ್ದೇಬಿಹಾಳ ಶಾಸಕ ನಡಹಳ್ಳಿ, ಎಸ್. ಕೆ ಬೆಳ್ಳುಬ್ಬಿ, ಸೇರಿದಂತೆ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಯ …

Read More »

ಹೆಲಿಕ್ಯಾಪ್ಟರ್ ನಲ್ಲಿ ಸಿ ಎಂ ಬಿ ಎಸ್ ವೈ ವೈಮಾನಿಕ ಸಮೀಕ್ಷೆ

ನೆರೆ ನಿರ್ವಹಣೆ ಸೇರಿದಂತೆ ತುರ್ತು ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆಗೆ 412 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳಾದ *ಶ್ರೀ ಬಿ ಎಸ್ ಯಡಿಯೂರಪ್ಪ* ತಿಳಿಸಿದ್ದಾರೆ. ಅತಿವೃಷ್ಟಿಗೆ ಸಂಬಂಧಿಸಿದಂತೆ ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು 972 ಕೋಟಿ …

Read More »

ಬೆಳಗಾವಿಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಬೆಳಗಾವಿ: ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಳಗಾವಿಯಲ್ಲಿ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಸಚಿವರು, ಸಂಸತ್ ಸದಸ್ಯರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ  ಲಕ್ಷ್ಮಣ್ ಸವದಿ, ಗೃಹ ಸಚಿವ  ಬಸವರಾಜ್ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ  ಕಂದಾಯ ಸಚಿವ ಆರ್ ಅಶೋಕ್, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Read More »

ಸರ್ಕಾರ-ಬೆಳಗಾವಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಶೀಘ್ರವೇ ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಸ್ಥಾಪಿಸಿ :ಕರವೇ ಆಗ್ರಹ

ಬೆಳಗಾವಿ : ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿವಾದ ಬಗೆ ಹರಿಸಲು ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಕರವೇ ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಕರವೇ ಪದಾಧಿಕಾರಿಗಳು, ಐತಿಹಾಸಿಕ ಬೆಳಗಾವಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷ್ ಅಧಿಕಾರಿಗಳನ್ನೇ ನಡುಗಿಸಿದ ಕ್ರಾಂತಿವೀರ,ಶೂರ,ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪೀರನವಾಡಿಯ ಮುಖ್ಯ ಸರ್ಕಲ್ ನಲ್ಲಿ ಪ್ರತಿಷ್ಠಾಪನೆ ಮಾಡುವ ಕುರಿತು ರಾಯಣ್ಣನ …

Read More »

ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಕುರಿಗಳ ಮೇಲೆ ಕಾರು ಹಾಯ್ದು ಪರಿಣಾಮ, 40 ಕುರಿಗಳು ಸ್ಥಳದಲ್ಲಿಯೇ ಸಾವು !

ಬೆಳಗಾವಿ : ಕುರಿಗಳ ಮೇಲೆ ಕಾರೊಂದು ಹರಿದ ಪರಿಣಾಮ 38ಕ್ಕೂ ಹೆಚ್ಚಿನ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಉಳಿಗೇರಿ ಗ್ರಾಮದ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಕುರಿಗಾಹಿ ಯಲ್ಲಪ್ಪ ಬಿಜ್ಜನ್ನವರ್ ಎಂಬುವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿವೆ. ಪ್ರತೀ ವರ್ಷ ಮೇವಿಗಾಗಿ ಕುರಿಗಳೊಂದಿಗೆ ವಲಸೆ ಹೋಗುತ್ತಿದ್ದರು. ಸವದತ್ತಿಯಿಂದ ಚಿಕ್ಕ ಉಳಿಗೇರ ರಸ್ತೆ ಮೂಲಕ‌ ನರಗುಂದ ಕಡೆಗೆ ಹೋಗುವ ಸಂದಭರ್ದಲ್ಲಿ ಚಿಕ್ಕ ಉಳಿಗೇರಿ ಗ್ರಾಮದ ಬಳಿ ಆ. 23ರಂದು ಬೆಳಗಿನ ಜಾವ ಅಪಘಾತ …

Read More »