Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಹಿರಿಯ ಪತ್ರಕರ್ತ ಶ್ಯಾಮಸುಂದರ್ ನಿಧನಕ್ಕೆ ಸಂತಾಪ ಸೂಚಿಸಿದ: ಸಚಿವ ರಮೇಶ್ ಜಾರಕಿಹೊಳಿ‌

ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ *ಶ್ಯಾಮ್ ಸುಂದರ್* ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದ ಶ್ಯಾಮ್ ಸುಂದರ್ ಅವರು *ದಿ ಹಿಂದು ಪತ್ರಿಕೆ* ಯ ವರದಿಗಾರರಾಗಿ ಕೆಲಸ ಮಾಡಿದ್ದರು. ಇವರ ವರದಿಗಾರಿಕೆ ಮೆಚ್ಚಿ ರಾಜ್ಯ ಸರ್ಕಾರವು ಮಾಧ್ಯಮ ವಿಭಾಗದಲ್ಲಿ ಪ್ರತಿಷ್ಠಿತ *ರಾಜ್ಯೋತ್ಸವ ಪ್ರಶಸ್ತಿ* ಯನ್ನು ನೀಡಿ ಗೌರವಿಸಿತ್ತು. ಇಂಥಹಾ ವಿರಳ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ ಎಂದು ಸಚಿವರು …

Read More »

ಲಂಚ ಪಡೆಯುತ್ತಿದ್ದ ಭ್ರಷ್ಟ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ!

ಕಲಘಟಗಿ: ಮಳೆಗೆ ಕುಸಿದಿದ್ದ ಮನೆಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಪರಿಹಾರಕ್ಕೆ ಶಿಫಾರಸು ಮಾಡಲು ಸಂತ್ರಸ್ತ ಮಿಶ್ರಿಕೋಟಿ ಗ್ರಾಮದ ಅಶೋಕ ಗಂಗಪ್ಪ ಕಾಶಿಬಡಿಗೇರ ಅವರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದ ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿ ಬಂಧಿಸಿದ್ದಾರೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಗೆ ಅಶೋಕ ಅವರ ಮನೆ ಕುಸಿದಿತ್ತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ …

Read More »

ಬಿಜೆಪಿ ಅತ್ಯಂತ ಶಿಸ್ತಿನ ಪಕ್ಷ – ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆ ಗೋಕಾಕ : ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಕಾರ್ಯಕರ್ತರಿಗಿರುವ ಗೌರವ ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ ಸಭಾ ಭವನದಲ್ಲಿ ಜರುಗಿದ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಹೊಸ ಪದಾಧಿಕಾರಿಗಳು ಸಂಘಟನಾತ್ಮಕವಾಗಿ ದುಡಿದು ಕೇಂದ್ರ …

Read More »

ಕಿರುತೆರೆ ಕಲಾವಿದ ಕೃಷ್ಣ ನಾಡಿಗ್ ನಿಧನ.

ಬೆಂಗಳೂರು: ಕನ್ನಡ ಚಿತ್ರಂಗ ಮತ್ತು ಕಿರುತೆರೆ ಕಲಾವಿದ ಕೃಷ್ಣ ನಾಡಿಗ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಲೇಖಕರಾಗಿ, ವ್ಯವಸ್ಥಪಕರಾಗಿ ನಟರಾಗಿದ್ದ ಕೃಷ್ಣ ನಾಡಿಗ್ ಅವರು ಶನಿವಾರ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸುಮಾರು 50 ವರ್ಷಗಳಷ್ಟು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅವರ 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದು ನಿರ್ಮಾಣ …

Read More »

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳಾಗಡ್ಡಿ, ಖಾನಾಪುರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಇಂದು ಚಾಲನೆ ನೀಡಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಉಳ್ಳಾಗಡ್ಡಿ, ಖಾನಾಪುರ ಗ್ರಾಮಗಳಲ್ಲಿ   573.73 ಲಕ್ಷ ರೂ ಅಂದಾಜು ಮೊತ್ತದ ವಿವಿಧ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಭೂಮಿ ಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾಹಾಂತೇಶ ಮಗದುಮ್ಮ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ  ಪಾರೀಶಗೌಡ …

Read More »

ನೂತನ ಪೆಟ್ರೋಲ್ ಬಂಕ್ ಗೆ ಚಾಲನೆ ನೀಡಿದ ರಾಹುಲ್ ಜಾರಕಿಹೊಳಿ

ಬೆಳಗಾವಿ: ತಾಲೂಕಿನ ಕಲಕಂಬಾದಲ್ಲಿ ನಿರ್ಮಿಸಲಾದ ನೂತನ ಜಗನ್ನಾಥ್ ಪೆಟ್ರೋಲ್ ಬಂಕ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಶನಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ್, ಜಿಪಂ ಸದಸ್ಯ ಯಲ್ಲಪ್ಪ ಬುಟರಿ, ಭಾರತ ಪೆಟ್ರೋಲಿಯಂ ಮ್ಯಾನೇಜರ್ ಕುಲದೀಪ ಗುಲಾಟಿ, ಸಂದೀಪ , ಶಾಸಕ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಅರವಿಂದ ಕಾರ್ಚಿ …

Read More »

●ಅತಿವೃಷ್ಟಿ: ಮುನ್ನೆಚ್ಚರಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ. ●ಕೋವಿಡ್ ನಿಯಂತ್ರಣ: ನಿರ್ಲಕ್ಷ್ಯ ಸಲ್ಲದು; ಅಧಿಕಾರಿಗಳಿಗೆ ಸಚಿವರ ತಾಕೀತು

ಬೆಳಗಾವಿ, ಅ.16: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲ. ಆದಾಗ್ಯೂ ಮಳೆಯ ಪ್ರಮಾಣ ಹೆಚ್ಚಾದರೆ ಅದನ್ನು ಗಮನದಲ್ಲಿರಿಸಿಕೊಂಡು ಆಲಮಟ್ಟಿ ಜಲಾಶಯದಿಂದ ಇನ್ನಷ್ಟು ನೀರು ಬಿಡುಗಡೆ ಮಾಡಲು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ (ಅ.16) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ …

Read More »

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಗೆ ಹೈಕೋರ್ಟ್ ತಡೆ|| ಮತ್ತೆ ನಿರಾಸೆಯಲ್ಲಿ ಸ್ಥಳಿಯ ಸದಸ್ಯರು ||

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದ್ದು, ಮೀಸಲಾತಿ ಪರಿಶೀಲನೆಗೆ ಎಎಜಿ ಧ್ಯಾನ್ ಚಿನ್ನಪ್ಪ, ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ರಾಜ್ಯ ಚುನಾವಣಾ ಆಯೋಗದ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಅವರನ್ನೊಳಗೊಂಡ ಸಮೀತಿಯನ್ನು ರಚಿಸಲಾಗಿದ್ದು, ಅಕ್ಟೋಬರ್ 22 …

Read More »

ವಿಶ್ವ ಆಹಾರ ದಿನ ; ಶುಭ ಕೋರಿದ ಜಲಸಂಪನ್ಮೂಲ ಸಚಿವರು.*

ಪೌಷ್ಟಿಕ ಆಹಾರ ‌ಸೇವನೆಯ ಮಹತ್ವ ಸಾರುವ ಜಾಗತಿಕ ಆಹಾರ ದಿನವಾದ ಇಂದು ಕೋವಿಡ್ ಸೋಂಕು ಹಬ್ಬುತ್ತಿರುವ ಈ ಕಾಲ ಘಟ್ಟದಲ್ಲಿ ಪ್ರತಿನಿತ್ಯ ಪೌಷ್ಟಿಕಾಂಶಯುಕ್ತ ಆಹಾರವನ್ನೇ ಸೇವಿಸುವ ಕುರಿತು ಜಾಗೃತಿ ಮೂಡಿಸೋಣ. ಹಸಿವು ಮತ್ತು ಬಡತನದ ಹಿಂದಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸೋಣ. ಆರೋಗ್ಯಕರ ಮತ್ತು ರೋಗಮುಕ್ತ ಜೀವನ ನಡೆಸಲು ಪೌಷ್ಠಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡೋಣ. ಎಲ್ಲರಿಗೂ *ವಿಶ್ವ ಆಹಾರ ದಿನ* ಶುಭಾಶಯಗಳು. – *ಶ್ರೀ ರಮೇಶ್ ಜಾರಕಿಹೊಳಿ‌* …

Read More »

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ;ಮುನ್ನೆಚ್ಚರಿಕಾ ಕ್ರಮಕ್ಕೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ವಿಪರೀತ ಹಾನಿ ಸಂಭವಿಸಿದೆ. ಈ ಕುರಿತು ಚರ್ಚಿಸಲು *ನಾಳೆ ಉನ್ನತ ಮಟ್ಟದ ಸಭೆ* ಕರೆದಿರುವುದಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಲಸಂಪನ್ಮೂಲ ಸಚಿವ *ಶ್ರೀ ರಮೇಶ್ ಜಾರಕಿಹೊಳಿ* ತಿಳಿಸಿದ್ದಾರೆ. “ಬೆಳಗಾವಿ ಜಿಲ್ಲೆಯ ಮಳೆಯ ಹಾನಿಯ ಕುರಿತು ಈಗಾಗಲೇ ಅಧಿಕಾರಿಗಳಿಂದ ವರದಿ ಪಡೆದಿದ್ದೇನೆ. ನಾಳೆ ಸಭೆ ಕರೆದು ಚರ್ಚಿಸುತ್ತೇನೆ. ಕಲಬುರಗಿ …

Read More »