ರಾಯಚೂರು ನಗರದ ದೇವದುರ್ಗ ಜಿಲ್ಲೆಯಲ್ಲಿ ನಡೆದ ಶ್ರೀ ಗಣೇಶ ಪ್ರತಿಷ್ಠಾಪನೆಗೆ ಹಾಕಿದ್ದ ಭಕ್ತಿಗೀತೆಗಳ ಧ್ವನಿ ವರ್ಧಕ ತೆಗೆಯಲು ಪ್ರಯತ್ನಿಸಿದ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಕೇಸ್ ದಾಖಲಿಸಿದ್ದ ತಹಶೀಲ್ದಾರ ವಿರುದ್ದ ಖಂಡಿಸಿ ಗೋಕಾಕ್ ನಗರದ ಹಿಂದೂ ಜಾಗರಣ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಗೋಕಾಕ ನಗರದ ತಹಸೀಲ್ದಾರ್ ಮುಖಾಂತರ ಖಂಡಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಯೋಜಕರು ಸಮರ್ಥ್ ಖಾಸ್ನಿಸ್ …
Read More »ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ
ಗೋಕಾಕ : ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ಮುತ್ಸದ್ಧಿಯಾಗಿದ್ದ ಮುಖರ್ಜಿ ಅವರು ಕೇಂದ್ರದಲ್ಲಿ ಹಣಕಾಸು, ರಕ್ಷಣಾ, ವಿದೇಶಾಂಗ ವ್ಯವಹಾರ, ವಾಣಿಜ್ಯ ಮತ್ತು ಉದ್ಧಿಮೆ, ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಭಾರತದ ಪ್ರಥಮ ಪ್ರಜೆಯಾಗಿ ಉತ್ತಮ ಕಾರ್ಯಭಾರ ನಿರ್ವಹಿಸಿದ್ದರು. ಇವರ ನಿಧನದಿಂದ ಇಡೀ ರಾಷ್ಟ್ರಕ್ಕೆ ನಷ್ಟವಾಗಿದೆ. …
Read More »ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ.
ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ದಾ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ, ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು ಎಂದು …
Read More »ಜೀವನದಲ್ಲಿ ಎಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಹುಕ್ಕೇರಿ : ‘ಜೀವನದಲ್ಲಿ ಎಲ್ಲವನ್ನ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆದ ಕಾರಣ ಪ್ರಯತ್ನ ನಿಮ್ಮದಾದರೆ, ಪ್ರೋತ್ಸಾಹ ನಮ್ಮದಾಗಲಿದೆ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಬಗರನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸ್ವ-ಸಹಾಯ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ‘ಕಳೆದ ತಿಂಗಳೇ ಸಂಘಗಳ ಉದ್ಘಾಟನೆ ನಡೆಯಬೇಕಿತ್ತು. ಆದರೆ ಹಲವು ಕಾರಣಗಳಿಂದ ವಿಳಂಬವಾಯಿತು. …
Read More »ಕಾರ್ಮಿಕರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ..!!
ಗೋಕಾಕ್: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳು ಸರಿಯಾಗಿ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಜಿಪ ಸದಸ್ಯ ಟಿ ಆರ್ ಕಾಗಲ ಕರೆ ನೀಡಿದರು. ರವಿವಾರಂದು ಸಚಿವ ರಮೇಶ ಜಾರಕಿಹೊಳಿ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿನನಿತ್ಯ ವಸ್ತು ಆಹಾರ ಕಿಟ್ ವಿತರಿಸಿ ಮಾತನಾಡಿದರು. ನಗರದಲ್ಲಿ ಸುಮಾರು 500 ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಡ್ಯಪ್ಪ ತೊಳಿನವರ, ಬಿಜೆಪಿ ನಗರ ಘಟಕ ಅಧ್ಯಕ್ಷ …
Read More »ಅರಭಾವಿ ಬಿಜೆಪಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ..!!
ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಮಾರ್ಗದರ್ಶನ ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ. ಗೋಕಾಕ : ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಮಾರ್ಗದರ್ಶನದಲ್ಲಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಅವರು ನೇಮಕ ಮಾಡಿ …
Read More »ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು* – *ಡಿಪಿಆರ್ ತಯಾರಿಸಲು ಅನುಮತಿಸಿದ ಸಚಿವ ರಮೇಶ್ ಜಾರಕಿಹೊಳಿ.
ಬೆಳಗಾವಿ ಜಿಲ್ಲೆಗೆ *11 ಹೊಸ ಏತ ನೀರಾವರಿ ಯೋಜನೆ* ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ* ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ *11 ಏತ ನೀರಾವರಿ ಯೋಜನೆ* ಗಳ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆ ನಡೆಸಿ, ಈ ಯೋಜನೆಗಳಿಗೆ ಅವಶ್ಯವಿರುವ *9.91 ಟಿಎಂಸಿ ನೀರನ್ನು ಹಂಚಿಕೆ ಮಾಡಲು* ಸಹಾ …
Read More »ಲಂಚ ಸ್ವೀಕರಿಸುವಾಗ ತಹಶೀಲ್ದಾರ್ ಕಚೇರಿಯ ಸರ್ವೇ ಇಲಾಖೆ ಮೇಲ್ವಿಚಾರಕ ಎಸಿಬಿ ಬಲೆಗೆ….!
ಕೊಪ್ಪಳ: ಗಂಗಾವತಿ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗಂಗಾವತಿ ತಾಲೂಕು ಹೆಬ್ಬಾಳ ಕ್ಯಾಂಪ್ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅವರನ್ನು ಹಣದ ಸಮೇತ ಬಂದಿಸಿದೆ. ತಾಯಿಯ ಆಸ್ತಿಯ 11ಬಿ/ಇ ನಕ್ಷೆ ನೀಡಲು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್ನ ರಾಜು.ಪಿ. ಅವರಿಂದ 4 ಸಾವಿರ ಲಂಚ ಪಡೆಯುತ್ತಿದ್ದ ಗಂಗಾವತಿ ತಹಶೀಲ್ದಾರ್ ಕಚೇರಿಯ ಸರ್ವೇ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರನ್ನು ಎಸಿಬಿ …
Read More »ರೈತರ ಸಮಸ್ಯೆ ಪರಿಹಾರಕ್ಕೆ ಚಕ್ಕಡಿ ಏರಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಭಟನೆ
ಧಾರವಾಡ: ಅತಿವೃಷ್ಟಿಯಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರ ಶಾಸಕ ಸತೀಶ್ ಜಾರಕಿಹೊಳಿ ನಗರದಲ್ಲಿ ಚಕ್ಕಡಿ ಏರಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿನಗರದಿಂದ ನವಲೂರು ಸೇತುವೆವರೆಗೂ ಚಕ್ಕಡಿ ಏರಿ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಪಾಲ್ಗೊಂಡಿದ್ದರು. ರಾಜ್ಯದ ರೈತರು ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು …
Read More »ಮಧ್ಯರಾತ್ರಿ ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ…!
ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಇಂದು ಮದ್ಯರಾತ್ರಿ ಪೀರನವಾಡಿ ಗ್ರಾಮದಲ್ಲಿ ತಾವು ಗುರುತಿಸಿದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಕ್ರಾಂತಿಯ ಕಹಳೆ ಊದಿದ್ದಾರೆ. ಹಲವಾರು ವರ್ಷಗಳಿಂದ ಪೀರನವಾಡಿ ಗ್ರಾಮದ ಮುಖ್ಯ ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಹೋರಾಟ ಮಾಡುತ್ತ ಬಂದಿದ್ದ ರಾಯಣ್ಣನ ಪರಮ ಭಕ್ತರು ಇಂದು ಮೂರ್ತಿ ಪ್ರತಿಷ್ಠಾಪನೆ ಮಾಡಿ,ರಾಯಣ್ಣನ ಮೂರ್ತಿಗೆ ದೊಡ್ಡ ಹೂಮಾಲೆ ಹಾಕಿ,ಕ್ರಾಂತಿವೀರ,ಶೂರ,ಧೀರ ಸಂಗೊಳ್ಳಿ ರಾಯಣ್ಣನ ಪರ ಘೋಷಣೆಗಳನ್ನು ಕೂಗುವ …
Read More »