ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ 13 ನೂತನ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ 50 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನೂತನ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ನೂತನ ಕಾರ್ಯಕರ್ತರಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ಶಾಸಕರು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು …
Read More »*ಗೋಕಾಕ್ ; 25 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ*.
ಗೋಕಾಕ್ ; 25 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ*. ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಅಂದಾಜು ಮೊತ್ತ *25 ಕೋಟಿ ರೂ* ಗಳಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಶಂಕು ಸ್ಥಾಪನೆ ನೆರವೇರಿಸಿದರು. ಗೋಕಾಕ್ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಕಾಮಗಾರಿಗಳು, ವಿದ್ಯುತ್ ಕಾಮಗಾರಿಗಳು, ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು,ನೀರು ಸರಬರಾಜು …
Read More »ಕೇಂದ್ರ ಮಾಜಿ ಸಚಿವ ಬುಟಾ ಸಿಂಗ್ ವಿಧಿವಶ :ಸಂತಾಪ ಸೂಚಿಸಿದ ಶಾಸಕ ಸತೀಶ್ ಜಾರಕಿಹೊಳಿ.
ಹೊಸದಿಲ್ಲಿ: ಕೇಂದ್ರ ಸಚಿವ ಹಾಗೂ ರಾಜಸ್ಥಾನದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಬುಟಾ ಸಿಂಗ್ (86) ಅವರು ಶನಿವಾರ ವಿಧಿವಶವರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬುಟಾ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಜಲೋರ್-ಸಿರೋಹಿ ಸಂಸದೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಬುಟಾ ಸಿಂಗ್ ಅವರು, ಲಕ್ಷಾಂತರ ಬೆಂಬಲಿಗರನ್ನು ಹೊಂದಿದ್ದಾರೆ. ಬುಟಾ ಸಿಂಗ್ ಅವರ …
Read More »ಪಾಮಲದಿನ್ನಿ ಗ್ರಾಂ.ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳಿಗೆ ಸನ್ಮಾನ.
ಗೋಕಾಕ: ಪಾಮಲದಿನ್ನಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಆಯ್ಕೆಯಾದ 23 ಜನ ಸದಸ್ಯರ ಪೈಕಿ 17 ಜನ ಸದಸ್ಯರನ್ನು ಗ್ರಾಮದ ಯುವಕರು, ಭಗೀರಥ ಯುವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸತ್ಕಾರ ಮಾಡಿದರು. ಈ ಸಭೆಯ ಅಧ್ಯಕ್ಷತೆಯನ್ನು ಪಿಡಿಓ ಬಬಲಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸದಸ್ಯರು ಮುಂಬರುವ ದಿನಗಳಲ್ಲಿ ಪಾಮಲದಿನ್ನಿ ಗ್ರಾಮವನ್ನು ಮಾದರಿ ಗ್ರಾಮವಾಗಿಸುತ್ತೇವೆ, ಅಭಿವೃದ್ಧಿಯತ್ತ ಹೆಚ್ಚಿನ ಆಸಕ್ತಿ ವಹಿಸಿಕೊಂಡು, …
Read More »*ಗ್ರಾಮೀಣದಲ್ಲಿ ಬಿಜೆಪಿ ಬೇರು ಗಟ್ಟಿ, ಅರಳಿದ ಕಮಲ* *ಜಾರಕಿಹೊಳಿ ಸಾಹುಕಾರ ಆಶೀರ್ವಾದ ಪಡೆದ ಬಿಜೆಪಿ ಪಡೆ*
ಗೋಕಾಕ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ವೀರ ಸೇನಾನಿಗಳು ಶನಿವಾರ ಮುಂಜಾನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗುವ ಮೂಲಕ ಬಿಜೆಪಿಯ ಶಕ್ತಿ ಪದರ್ಶನ ನಡೆಸಿದರು. ಗೋಕಾಕನ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ನೂತನ ಸದಸ್ಯರು ಬಂದು ಸಚಿವ ರಮೇಶ ಜಾರಕಿಹೊಳಿ ಅವರ ಆಶೀರ್ವಾದ ಪಡೆದರು. ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ ಎಂದು ಸಚಿವರಿಗೆ ಮನವರಿಕೆ …
Read More »ಕೆಎಂಎಫ್‍ನಿಂದ ರೈತರಿಗೆ ಹಲವು ಪ್ರಯೋಜನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ .
ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸರ್ಕಾರದಿಂದ ಕೆಎಂಎಫ್‍ಗೆ 32 ಎಕರೆ ಜಮೀನನ್ನು ನೀಡುತ್ತಿದ್ದು, ಇದರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಜಮೀನಿನಲ್ಲಿ ಅತ್ಯಾಧುನಿಕ ಉತ್ಪನ್ನಗಳ ಮತ್ತು ಪ್ಯಾಕಿಂಗ್ ಸಾಮಗ್ರಿಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ಉದ್ಧೇಶಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಕೆಎಂಎಫ್‍ಗೆ ಜಾಗೆ ನೀಡುವ ಸಂಬಂಧ ಸಹಕಾರ …
Read More »ಬಿಜೆಪಿಯ ರಾಜು ಚಿಕ್ಕನಗೌಡರ್ ನಿಧನ: ಸಂತಾಪ ಸೂಚಿಸಿದ ಸಚಿವ ರಮೇಶ ಜಾರಕಿಹೊಳಿ
ನನ್ನ ಸ್ನೇಹಿತರೂ, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ *ಶ್ರೀ ರಾಜು ಚಿಕ್ಕನಗೌಡರ್* ಅವರ ಅಕಾಲಿಕ ನಿಧನದಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ ಮುಂಚೂಣಿ ನಾಯಕರಾಗಿದ್ದ ರಾಜು, ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ ಮಾಡಿದ್ದರು. ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಸಕ್ರಿಯ ಕಾರ್ಯಕರ್ತರಾಗಿದ್ದ ರಾಜು, ಬೆಳಗಾವಿ ಗ್ರಾಮೀಣ …
Read More »ಸಿಎಂ ಇಬ್ರಾಹಿಂ ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ನಮ್ಮ ಜತೆಯೇ ಇರಲಿದ್ದಾರೆ: ಸತೀಶ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ ಅಪ್ರಸ್ತುತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ನೂತನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ತರಲಾಗುವುದು ಆ ಬಳಿಕ ಸಿಎಲ್ ಪಿ ಮೀಟಿಂಗ್, ಹೈಕಮಾಂಡ್ ಮುಂದಿನ ಸಿಎಂ ಯಾರಾಗಬೇಕು ಎಂದು ನಿರ್ಧರಿಸುತ್ತೆ ಎಂದರು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಯವಿದೆ ಎಂಬ ಮಾಧ್ಯಮದವರ …
Read More »ಅಸ್ಸಾಂ* – *ಶಕ್ತಿ ಪೀಠ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ*
ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ *ಶ್ರೀ ಕಾಮಾಕ್ಯ ದೇವಾಲಯ* ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ*, *ಕಾಮಾಕ್ಯ ದೇವಾಲಯ* ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ *ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ *ರಮೇಶ್ ಜಾರಕಿಹೊಳಿ*, ಮಾರಕ ಕೊರೋನಾ ಸೋಂಕು …
Read More »ಗ್ರಾಂ.ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳಿಂದ ಸಂತೋಷ ಜಾರಕಿಹೊಳಿಯವರಿಗೆ ಸತ್ಕಾರ.
ಗೋಕಾಕ : ಚಿಕ್ಕ ನಂದಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ಇಂದು ಯುವ ನಾಯಕರು ಹಾಗೂ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನರಾದ ಸಂತೋಷ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಜಾರಕಿಹೊಳಿ ಅವರು ಗ್ರಾಮದ ಜನತೆಯೊಂದಿಗೆ ಉತ್ತಮ ಒಡನಾಟದಿಂದ ಇರಿ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಹೇಳಿದರು. ನಂತರ ಜಯ ಗಳಿಸಿದ ಅಭ್ಯರ್ಥಿಗಳು ಸಾಹುಕಾರರಿಗೆ ಸನ್ಮಾನಿಸಿ , ಸಿಹಿ …
Read More »
CKNEWSKANNADA / BRASTACHARDARSHAN CK NEWS KANNADA