ಬೆಳಗಾವಿ: ಲೋಕಸಭಾ ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿರುವ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು, ಜಿಲ್ಲೆಯ ಮರಾಠಾ ಸಮುದಾಯದ ಪ್ರಮುಖ ಮುಖಂಡರ ಸಭೆ ನಡೆಸಿದರು. ಗೋಕಾಕ್ ನಗರದಲ್ಲಿರುವ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ವಾಡಿಕೆಗಿಂತಾ ಹೆಚ್ಚಿನ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮತ್ತಷ್ಟು ಸುಭದ್ರ ಪಡಿಸಬೇಕು ಎಂದು ಸಚಿವರು ಕರೆ ನೀಡಿದರು. ಬೆಳಗಾವಿ ಜಿಲ್ಲೆಯಾದ್ಯಂತ …
Read More »ಯಮಕನಮರಡಿಯಲ್ಲಿ ಕಾಂಗ್ರೇಸ್ ಮುಖಂಡರ ಮೇಲೆ ಗುಂಡಿ ದಾಳಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಶಾಸಕ ಸತೀಶ ಜಾರಕಿಹೋಳಿ ಆಪ್ತರಾದ ಕೀರಣ ರಜಪೂತ, ಬರಮಾ ದೂಪದಾಳೆ ಮೇಲೆ ಗುಂಡಿನ ದಾಳಿ ಗ ನಡೆಸಿ ಫರಾರಿಯಾಗಿರುವ ಘಟನೆ ನಡೆದಿದೆ.ಈ ದಾಳಿಯು ಕಂಟ್ರಿ ಪಿಸ್ತೋಲದಿಂದ ನಡೆಸಲಾಗಿದೆ. ಕಳೆದ ಬುಧವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯ ನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, …
Read More »ಅಜ್ಜನಕಟ್ಟಿ ಗ್ರಾ.ಪಂ ಗೆ ಅವಿರೋಧ ಆಯ್ಕೆ : ಸದಸ್ಯರಿಂದ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ
ಗೋಕಾಕ: ಮತಕ್ಷೇತ್ರದ ಮಮದಾಪುರ ಗ್ರಾಮ ಪಂಚಾಯತಿ ಹದ್ದಿಯ ಅಜ್ಜನಕಟ್ಟಿ ಗ್ರಾಮದ ಪಂಚಾಯತಿಯ ಐದಕ್ಕೆ-ಐದು ಸ್ಥಾನಗಳಿಗೆ ಗ್ರಾಮದ ಹಿರಿಯರು ಒಕ್ಕೋರಿಳಿನಿಂದ ಅವಿರೋಧ ಆಯ್ಕೆ ಮಾಡಿದ್ದು ಆಯ್ಕೆಯಾದ ಅಭ್ಯರ್ಥಿಗಳಾದ ರೂಪಾ ಸುನೀಲ ಅವರಾದಿ,ಲಕ್ಷ್ಮಿ ಮುತ್ತೆಪ್ಪ ರಕ್ಷಿ,ಭೀಮಪ್ಪ ಲಕ್ಷ್ಮಪ್ಪ ಚಂದರಗಿ,ರಾಜು ಯಲ್ಲಪ್ಪ ಬೆಳಗಲಿ,ಸಿದ್ದಲಿಂಗಪ್ಪ ಲಕ್ಷ್ಮಪ್ಪ ಪೂಜೇರ.ಅವರು ಅವಿರೋಧ ಆಯ್ಕೆ ಹಿನ್ನೆಲೆ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರ ಗೃಹ ಕಛೇರಿಗೆ ಭೇಟಿ ನೀಡಿ ಕಾರ್ಮಿಕ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರಿಗೆ ಸನ್ಮಾನಿಸಿ ಕೃತಜ್ಞತೆ …
Read More »ಶಿಂದಿಕುರಬೇಟ ಗ್ರಾಪಂ ಗೆ ಅವಿರೋಧ ಆಯ್ಕೆ: ಸದಸ್ಯರಿಂದ ಸಚಿವ ರಮೇಶ ಜಾರಕಿಹೊಳಿಗೆ ಸತ್ಕಾರ
ಗೋಕಾಕ: ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತಿಗೆ ವಾರ್ಡ್ ನಂಬರ್ 8ರ ಸದಸ್ಯರಾದ ಭೀಮಶಿ ಯಲ್ಲಪ್ಪ ಬಿರನಾಳಿ ಮತ್ತು ಮಂಜುಳಾ ವಿಠ್ಠಲ ಕರೋಶಿ ಅವರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಬುಧವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ. ಆರ್. ಕಾಗಲ, ಮಡೆಪ್ಪ ತೋಳಿನವರ, ಶ್ರೀಕಾಂತ ಯತ್ತಿನಮನಿ,ರಾಮಯ್ಯ ಆಲೋಶಿ,ಅಡಿವೆಪ್ಪ ಬೆಳಗಲಿ, ಸಿದ್ದಪ್ಪ ಸಂಸುದ್ದಿ, ಮುಸಾ ಸರಕಾವಸ, ಭೀಮಶಿ …
Read More »ಸಕಲ ಸರಕಾರಿ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆ||ಸಂತಾಪ ಸೂಚಿಸಿದ ಗಣ್ಯರು||
ಗೋಕಾಕ: ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಾಲೂಕಿನ ಲೋಳಸೂರ ಗ್ರಾಮದ ಹುತಾತ್ಮ ಯೋಧ ಕಲ್ಲಪ್ಪ ಸಿದ್ದಪ್ಪ ಬಾಂವಚಿ ೪೫ ಅವರ ಅಂತ್ಯಕ್ರೀಯೆ ಲೋಳಸೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿದೆ ಮಧ್ಯಾಹ್ನ ೧೨.೩೦ಕ್ಕೆ ನೆರವೆರಿತು. ಲೋಳಸೂರ ಗ್ರಾಮದಲ್ಲಿ ಜನಿಸಿದ ಯೋಧ ಕಲ್ಲಪ್ಪ ಬಾಂವಚಿ ಪ್ರಾಥಮಿಕ ಲೋಳಸೂರ ಹಾಗೂ ಪ್ರೌಢಶಿಕ್ಷಣವನ್ನು ಗೋಕಾಕ ಪಟ್ಟಣದಲ್ಲಿ ಮುಗಿಸಿ. ಭಾರತಮಾತೆಯ ರಕ್ಷಣೆಗಾಗಿ ೨೦೦೦ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆಗೆ ಸೇರಿದ್ದರು. ಸುಮಾರು ೨೦ವರ್ಷಗಳ ಕಾಲ ಸೇನೆಯಲ್ಲಿ ದೇಶದ …
Read More »ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ …
Read More »ಕಳ್ಳನ ಬಂಧನ: ನಾಲ್ಕು ಬೈಕ್, ಎರಡು ಸೈಕಲ್, ನಾಲ್ಕು ಮೊಬೈಲ್ ವಶ
ಗೋಕಾಕ :ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಎಸ್,ಪಿ, ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್,ಪಿ, ಅಮರನಾಥ ರೆಡ್ಡಿ, ಗೋಕಾಕ ಡಿ,ಎಸ್,ಪಿ, ಜಾವೇದ ಇನಾಮದಾರ,ಸಿ,ಪಿ,ಆಯ್,ಗೋಪಾಲ ರಾಠೋಡ,ಇವರ ಮಾರ್ಗದರ್ಶನದಲ್ಲಿ ಪಿ,ಎಸ್,ಆಯ್,ಶ್ರೀ ಕೆ,ಬಿ,ವಾಲಿಕಾರ (ಕಾಸು) ,ಪಿ,ಎಸ್,ಆಯ್,ಶ್ರೀ ಅಮಿನಬಾಂವಿ,(ಸಿಬಿ)ಗೋಕಾಕ. ಶಹರ ಠಾಣೆಯ ಸಿಬ್ಬಂದಿಗಳಾದ ಬಿ,ಎಸ್,ಸಿದ್ನಾಳ,ಎಲ್,ಎಸ್ನಾಡಗೌಡರ,ಕೆ,ಬಿ,ಹಕ್ಯಾಗೋಳ,ಸಿ,ಎಸ್,ಬೀರಾದರ,ಆರ್,ಆರ್,ಮುರನಾಳ,ಎಸ್,ವಾಯ್,ಕುರಿ,ಎಂ,ಆರ್,ಅಂಬಿ,ಇವರು ಕಾರ್ಯಾಚರಣೆ ನಡೆಸಿ ಒರ್ವನನ್ನು ವಿಚಾರಣಗೆ ಒಳಪಡಿಸಿದಾಗ ಅವನಿಂದ ಕಳ್ಳತನ ಮಾಡಿದ 4 ಮೋಟಾರ್ ಬೈಕ್, 2 ಸೈಕಲ್ ಹಾಗೂ 4 ಮೊಬೈಲಗಳನ್ನು ವಶಪಡಿಸಿಕೊಳ್ಳುವಲ್ಲಿ …
Read More »ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸಚಿವ ರಮೇಶ ಜಾರಕಿಹೊಳಿ.
ಆಂಧ್ರಪ್ರದೇಶ : ರಾಜ್ಯ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಂಗಳವಾರ ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಚಿತ್ತೂರು ಜಿಲ್ಲೆಯ ತಿರುಮಲ ಬೆಟ್ಟದ ಪಟ್ಟಣದಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸಚಿವರ ಜತೆಗೆ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಬಿಜೆಪಿ ಮುಖಂಡರು ಇದ್ದಾರೆ.
Read More »ವಿಧಾನಪರಿಷತ್ತಿನ ಮಾನ-ಮರ್ಯಾದೆ ಹರಾಜು ಮಾಡಿದ ಮಾನ್ಯ ವಿಧಾನ ಪರಿಷತ ಶಾಸಕರುಗಳು!
ಬೆಂಗಳೂರು, ಡಿ.15- ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷವಾದ ಬಿಜೆಪಿ, ಪ್ರತಿಪಕ್ಷವಾದ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಉಂಟಾಯಿತು. ಕಲಾಪ ಆರಂಭಕ್ಕೂ ಮುನ್ನ ಉಪಸಭಾಪತಿ ಧರ್ಮೇಗೌಡ ಅವರು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಿದ್ದರು. ಇದನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಪೀಠದ ಹಿಂದೆ ಇರುವ ಬಾಗಿಲ ಮೂಲಕ ಸಭಾಪತಿ ಅವರು ಸದನದ ಸಭಾಂಗಣ ಪ್ರವೇಶಿಸದಂತೆ …
Read More »ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಶ್ರಮ ವಹಿಸಿ, ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ರಾಯಬಾಗ: ‘ ಪ್ರಧಾನಿ ಮೋದಿಯ ಬಣ್ಣದ ಮಾತಿಗೆ ಈಗಾಗಲೇ ದೇಶ ಮರುಳಾಗಿದೆ. ಇದೇನು ಹೊಸದೆನಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಏನು ಹೊಸದಲ್ಲ. 1965ರಲ್ಲಿಯೇ ನೆಹರು ಅವರು ಜಾರಿಗೆ ತಂದಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಅದಕ್ಕೆ ಸುಣ್ಣ ಬಣ್ಣ ಬಳೆದು, ಅಲಂಕರಿಸಿ ಹೊರಟ್ಟಿದ್ದಾರೆ. ದೇಶದ ಜನರು ಬಣ್ಣದ ಮಾತಿಗೆ ಮರುಳಾಗದೆ. …
Read More »