Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಶಿಂದಿಕುರಬೇಟ ಗ್ರಾಪಂ ಗೆ ಅವಿರೋಧ ಆಯ್ಕೆ: ಸದಸ್ಯರಿಂದ ಸಚಿವ ರಮೇಶ ಜಾರಕಿಹೊಳಿಗೆ ಸತ್ಕಾರ

ಗೋಕಾಕ: ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತಿಗೆ ವಾರ್ಡ್ ನಂಬರ್ 8ರ  ಸದಸ್ಯರಾದ ಭೀಮಶಿ ಯಲ್ಲಪ್ಪ ಬಿರನಾಳಿ ಮತ್ತು ಮಂಜುಳಾ ವಿಠ್ಠಲ ಕರೋಶಿ ಅವರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಬುಧವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ. ಆರ್. ಕಾಗಲ, ಮಡೆಪ್ಪ ತೋಳಿನವರ, ಶ್ರೀಕಾಂತ ಯತ್ತಿನಮನಿ,ರಾಮಯ್ಯ ಆಲೋಶಿ,ಅಡಿವೆಪ್ಪ ಬೆಳಗಲಿ, ಸಿದ್ದಪ್ಪ ಸಂಸುದ್ದಿ, ಮುಸಾ ಸರಕಾವಸ, ಭೀಮಶಿ …

Read More »

ಸಕಲ ಸರಕಾರಿ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆ||ಸಂತಾಪ ಸೂಚಿಸಿದ ಗಣ್ಯರು||

ಗೋಕಾಕ: ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಾಲೂಕಿನ ಲೋಳಸೂರ ಗ್ರಾಮದ ಹುತಾತ್ಮ ಯೋಧ ಕಲ್ಲಪ್ಪ ಸಿದ್ದಪ್ಪ ಬಾಂವಚಿ ೪೫ ಅವರ ಅಂತ್ಯಕ್ರೀಯೆ ಲೋಳಸೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿದೆ ಮಧ್ಯಾಹ್ನ ೧೨.೩೦ಕ್ಕೆ ನೆರವೆರಿತು. ಲೋಳಸೂರ ಗ್ರಾಮದಲ್ಲಿ ಜನಿಸಿದ ಯೋಧ ಕಲ್ಲಪ್ಪ ಬಾಂವಚಿ ಪ್ರಾಥಮಿಕ ಲೋಳಸೂರ ಹಾಗೂ ಪ್ರೌಢಶಿಕ್ಷಣವನ್ನು ಗೋಕಾಕ ಪಟ್ಟಣದಲ್ಲಿ ಮುಗಿಸಿ. ಭಾರತಮಾತೆಯ ರಕ್ಷಣೆಗಾಗಿ ೨೦೦೦ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆಗೆ ಸೇರಿದ್ದರು. ಸುಮಾರು ೨೦ವರ್ಷಗಳ ಕಾಲ ಸೇನೆಯಲ್ಲಿ ದೇಶದ …

Read More »

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು  ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.  ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ …

Read More »

ಕಳ್ಳನ ಬಂಧನ: ನಾಲ್ಕು ಬೈಕ್, ಎರಡು ಸೈಕಲ್, ನಾಲ್ಕು ಮೊಬೈಲ್ ವಶ

ಗೋಕಾಕ :ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಎಸ್,ಪಿ, ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್,ಪಿ, ಅಮರನಾಥ ರೆಡ್ಡಿ, ಗೋಕಾಕ ಡಿ,ಎಸ್,ಪಿ, ಜಾವೇದ ಇನಾಮದಾರ,ಸಿ,ಪಿ,ಆಯ್,ಗೋಪಾಲ ರಾಠೋಡ,ಇವರ ಮಾರ್ಗದರ್ಶನದಲ್ಲಿ ಪಿ,ಎಸ್,ಆಯ್,ಶ್ರೀ ಕೆ,ಬಿ,ವಾಲಿಕಾರ (ಕಾಸು) ,ಪಿ,ಎಸ್,ಆಯ್,ಶ್ರೀ ಅಮಿನಬಾಂವಿ,(ಸಿಬಿ)ಗೋಕಾಕ. ಶಹರ ಠಾಣೆಯ ಸಿಬ್ಬಂದಿಗಳಾದ ಬಿ,ಎಸ್,ಸಿದ್ನಾಳ,ಎಲ್,ಎಸ್ನಾಡಗೌಡರ,ಕೆ,ಬಿ,ಹಕ್ಯಾಗೋಳ,ಸಿ,ಎಸ್,ಬೀರಾದರ,ಆರ್,ಆರ್,ಮುರನಾಳ,ಎಸ್,ವಾಯ್,ಕುರಿ,ಎಂ,ಆರ್,ಅಂಬಿ,ಇವರು ಕಾರ್ಯಾಚರಣೆ ನಡೆಸಿ ಒರ್ವನನ್ನು ವಿಚಾರಣಗೆ ಒಳಪಡಿಸಿದಾಗ ಅವನಿಂದ ಕಳ್ಳತನ ಮಾಡಿದ 4 ಮೋಟಾರ್‌ ಬೈಕ್‌, 2 ಸೈಕಲ್ ಹಾಗೂ 4 ಮೊಬೈಲಗಳನ್ನು ವಶಪಡಿಸಿಕೊಳ್ಳುವಲ್ಲಿ …

Read More »

ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸಚಿವ ರಮೇಶ ಜಾರಕಿಹೊಳಿ.

ಆಂಧ್ರಪ್ರದೇಶ : ರಾಜ್ಯ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಂಗಳವಾರ  ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಚಿತ್ತೂರು ಜಿಲ್ಲೆಯ ತಿರುಮಲ ಬೆಟ್ಟದ ಪಟ್ಟಣದಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸಚಿವರ ಜತೆಗೆ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಬಿಜೆಪಿ ಮುಖಂಡರು ಇದ್ದಾರೆ.

Read More »

ವಿಧಾನಪರಿಷತ್ತಿನ ಮಾನ-ಮರ್ಯಾದೆ ಹರಾಜು ಮಾಡಿದ ಮಾನ್ಯ ವಿಧಾನ ಪರಿಷತ ಶಾಸಕರುಗಳು!

ಬೆಂಗಳೂರು, ಡಿ.15- ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷವಾದ ಬಿಜೆಪಿ, ಪ್ರತಿಪಕ್ಷವಾದ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಉಂಟಾಯಿತು. ಕಲಾಪ ಆರಂಭಕ್ಕೂ ಮುನ್ನ ಉಪಸಭಾಪತಿ ಧರ್ಮೇಗೌಡ ಅವರು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಿದ್ದರು. ಇದನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಪೀಠದ ಹಿಂದೆ ಇರುವ ಬಾಗಿಲ ಮೂಲಕ ಸಭಾಪತಿ ಅವರು ಸದನದ ಸಭಾಂಗಣ ಪ್ರವೇಶಿಸದಂತೆ …

Read More »

ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಶ್ರಮ ವಹಿಸಿ, ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ರಾಯಬಾಗ: ‘ ಪ್ರಧಾನಿ ಮೋದಿಯ ಬಣ್ಣದ ಮಾತಿಗೆ ಈಗಾಗಲೇ ದೇಶ ಮರುಳಾಗಿದೆ. ಇದೇನು ಹೊಸದೆನಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಗೋ ಹತ್ಯೆ ನಿಷೇಧ ಕಾಯ್ದೆ ಏನು ಹೊಸದಲ್ಲ. 1965ರಲ್ಲಿಯೇ ನೆಹರು ಅವರು ಜಾರಿಗೆ ತಂದಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಅದಕ್ಕೆ ಸುಣ್ಣ ಬಣ್ಣ ಬಳೆದು, ಅಲಂಕರಿಸಿ ಹೊರಟ್ಟಿದ್ದಾರೆ. ದೇಶದ ಜನರು ಬಣ್ಣದ ಮಾತಿಗೆ ಮರುಳಾಗದೆ. …

Read More »

16 ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರುವರಿ 1 ರಿಂದ ಪ್ರಾರಂಭ, “ಕಾಯಕಶ್ರೀ ಪ್ರಶಸ್ತಿಗೆ ಶ್ರೀ ರವಿಶಂಕರ್ ಗುರೂಜಿ” ಆಯ್ಕೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು

ಗೋಕಾಕ ಡಿ 14 : ಪ್ರತಿ ವರ್ಷ ಶ್ರೀ ಮಠದಿಂದ ಕೊಡಮಾಡುವ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ರವಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದಲ್ಲಿ ನಡೆದ 16ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭದ ಪೂರ್ಣಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. …

Read More »

ಶಿಕ್ಷಕರು ಮತ್ತು ಇಲಾಖೆಯ ಸಂಪರ್ಕದ ಕೊಂಡಿಯಾಗಿ ಶಿಕ್ಷಕರ ಸಂಘ ಶ್ರಮಿಸಲಿ :ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಕೊಂಡಿಯಾಗಿ ಶಿಕ್ಷಕರ ಸಂಘದ ಪ್ರತಿನಿಧಿಗಳು ಕರ್ತವ್ಯನಿರ್ವಹಿಸುವಂತೆ ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ರವಿವಾರ ಸಂಜೆ ಮೂಡಲಗಿ ತಾಲೂಕು ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಮನ್ವಯತೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುವಂತೆ ಶುಭ ಕೋರಿದರು. ಮೂಡಲಗಿ ತಾಲೂಕು ಘಟಕಕ್ಕೆ ಶಿಕ್ಷಕರ ಸಂಘಕ್ಕೆ …

Read More »

ಸಾರಿಗೆ ನೌಕರರ ಮುಷ್ಕರ ಸುಖಾಂತ್ಯ!

ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದಿದೆ. ಮುಷ್ಕರ ನಿರತ ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಂತ 10 ಬೇಡಿಕೆಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಹೊರತಾಗಿ 9 ಬೇಡಿಕೆಗಳಿಗೆ ಅಸ್ತು ಎಂದಿದೆ. ಇಂತಹ ಪತ್ರವನ್ನು BMTC ಅಧ್ಯಕ್ಷ ನಂದೀಶ್ ರೆಡ್ಡಿಯೇ ಫ್ರೀಡಂ ಪಾರ್ಕ್ ಗೆ ಆಗಮಿಸಿ, ಮುಷ್ಕರ ನಿರತ ನೌಕರರಿಗೆ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸಿದಂತ ಬೇಡಿಕೆ …

Read More »