Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಪಾಲಿಕೆ ಆವರಣದಲ್ಲಿ ಕನ್ನಡ ಧ್ವಜ ಹಾರಾಟ : ಶಪಥಗೈದಿದ್ದ ಕಸ್ತೂರಿ ಬಾವಿ ಅವರಿಗೆ ಸನ್ಮಾನ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿದ ಹಿನ್ನೆಲೆ  ಕನ್ನಡ ಪರ ಹೋರಾಟಗಾರ  ಶ್ರೀನಿವಾಸ ತಾಳೂರಕರ, ಹೋರಾಟಗಾರ್ತಿ ಕಸ್ತೂರಿ ಬಾವಿ ಅವರಿಗೆ ಸನ್ಮಾನಿಸಿ, ಚಪ್ಪಲಿ ತೊಡಸಿದರು. ಕಳೆದ 30 ವರ್ಷಗಳಿಂದ ಕಸ್ತೂರಿ ಬಾಯಿ ಅವರು ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. 16 ವರ್ಷ ಗಳ ಹಿಂದೆ ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಹಾರಾಡುವವರೆಗೂ ಕಾಲಿಗೆ ಚಪ್ಪಲಿ ಹಾಕಿಕೊಳ್ಳುವುದಿಲ್ಲವೆಂದು ಶಪಥ ಮಾಡಿದ್ದರು.  ಹೀಗಾಗಿ 16 ವರ್ಷಗಳು ಬರಿಗಾಲಿನಲ್ಲಿಯೇ …

Read More »

ಶಿಕ್ಷಕರ ಸಂಘದಿಂದ ನಾಗಪ್ಪ ಶೇಖರಗೋಳ ಅವರಿಗೆ ಸತ್ಕಾರ

ಗೋಕಾಕ: ಶಿಕ್ಷಕರು ತಮ್ಮ ಕರ್ತವ್ಯದ ಜೊತೆಗೆ ಸಂಘದ ಪ್ರಗತಿಗೂ ಶ್ರಮಿಸಿ, ಶಿಕ್ಷಕರ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ತಿಳಿಸಿದರು. ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು …

Read More »

ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ; ಮಾನವೀಯತೆ ಮೆರೆದ ಸಚಿವ ರಮೇಶ್ ಜಾರಕಿಹೊಳಿ‌.

ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ರಮೇಶ್ ಜಾರಕಿಹೊಳಿ‌* ಅವರು ಮಾನವೀಯತೆಯನ್ನು ಮೆರೆದಿದ್ದಾರೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ *ಶ್ರೀ ಬಿ ಎಸ್ ಯಡಿಯೂರಪ್ಪ* ಅವರು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು …

Read More »

FDA, SDA ಅಭ್ಯರ್ಥಿಗಳ ನೇಮಕಾತಿಗೆ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಭ್ಯರ್ಥಿಗಳಿಂದ ಸಚಿವರಿಗೆ ಮನವಿ

ಗೋಕಾಕ :ಸನ್ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡಿದ್ದು ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ ಇಲಾಖೆಯು ನೇಮಕ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಆದರೇ ಇದೇ ಅಧಿಸೂಚನೆಯಲ್ಲಿ ಆಯ್ಕೆಯಾದ …

Read More »

ದುಪಧಾಳ ಮೆಥೋಡಿಸ್ಟ್ ಸಭಿಕರಿಂದ ಸಂಭ್ರಮದಿಂದ ಕ್ರಿಸ್‍ಮಸ್ ಆಚರಣೆ…

ಗೋಕಾಕ: ತಾಲೂಕಿನ ದುಪಧಾಳ ಮೆಥೋಡಿಸ್ಟ್ ಸೇರಿದಂತೆ ತಾಲೂಕಾದ್ಯಂತ ಕ್ರೈಸ್ತ ಸಮುದಾಯದವರು ಕ್ರಿಸ್‍ಮಸ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಡಿಸೆಂಬರ್ 25 ಶುಕ್ರವಾರ ಅಂದು ಅತಿ ವಿಜೃಂಭಣೆಯಿಂದ ಧುಪದಾಳ ಮೆಥೋಡಿಸ್ಟ್ ಚರ್ಚಿನ ಸಭಿಕರು ಆಚರಿಸಿದರು. ಇನ್ನು ಮೆಥೋಡಿಸ್ಟ್ ಕ್ರೈಸ್ತ ಸಮುದಾಯದ ಸಭಿಕರು ಮನೆ ಮನೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದು, ಏಸು ಕ್ರಿಸ್ತನ ಹುಟ್ಟು ಹಬ್ಬದ ಸಂಭ್ರಮ ಎಲ್ಲೆಡೆಯೂ ಮನೆ ಮಾಡಿತ್ತು. ಬಂಧು, ಬಾಂಧವರ ಭೇಟಿ, ಶುಭಾಶಯ ವಿನಿಮಯ, ಕೇಕ್ ಕತ್ತರಿಸುವ ಸಂಭ್ರಮ, ಸಾಮೂಹಿಕ …

Read More »

ರಾಜಕಾರಣ ಬೇರೆ ಪಕ್ಷದವರಿಗೆ ವೃತ್ತಿ ಆದರೆ ಬಿಜೆಪಿಗೆ ಅದು ನೀತಿ : ಡಾ: ಮಲ್ಲಿಕಾರ್ಜುನ ಬಾಳಿಕಾಯಿ

ಗೋಕಾಕ : ಗೋಕಾಕ ಮತಕ್ಷೇತ್ರದ ಬಿಜೆಪಿಯ ಯುವ ಮೊರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕಾರಿಣಿ ಸಭೆ ಗೋಕಾಕ ನಗರದ ಸಮುದಾಯ ಬವನದಲ್ಲಿ ನಡೆಯಿತು. ಜ್ಯೋತಿ ಬೆಳಗಿಸಿ ಅಟಲ ಜಿ ಬಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ರಾಜ್ಯ ಯುವ ಮೊರ್ಚಾ ಪ್ರದಾನ ಕಾರ್ಯದರ್ಶಿಗಳಾದ ಡಾ: ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ಇವತ್ತು ಬಾರತಿಯ ಜನತಾ ಪಾರ್ಟಿಗೆ ಅಜಾತ ಶತ್ರು,ದೇಶಕ್ಕಾಗಿ,ಪಕ್ಷಕ್ಕಾಗಿಪ್ರದಾನಿ ಮಂತ್ರಿ ಹುದ್ದೆ ತ್ಯಾಗ ಮಾಡಿದ ಅಟಲ ಬಿಹಾರಿ …

Read More »

ಅಧಿಕಾರದ ಬೆನ್ನು ಹತ್ತದೆ ಜವಾಬ್ದಾರಿಗೆ ಬೆನ್ನು ಹತ್ತಿ : ಡಾ.ಮಲ್ಲಿಕಾರ್ಜುನ ಬಾಳಿಕಾಯಿ

ಅರಭಾಂವಿ ಮತಕ್ಷೇತ್ರದ ಬಿಜೆಪಿಯ ಯುವ ಮೊರ್ಚಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಾ: ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ತಾನು ಅಡಿದ ಕೆಲಸ ಕಾರ್ಯಗಳನ್ನು ಇನ್ನೊಬ್ಬರಿಗೆ ಒಪ್ಪುವಂತೆ ಮಾಡವವರೆ ಅಜಾತ ಶತ್ರು, ಅಂತಹ ವ್ಯಕ್ತಿ ಅಟಲ ಬಿಹಾರಿ ವಾಜಪೇಯಿ, ಅತ್ಯಂತ ಶತ್ರುಗಳನ್ನು ಹೊಂದುವ ಏಕೈಕ‌ ಕ್ಷೇತ್ರವೆಂದರೆ ಅದುವೆ ರಾಜಕೀಯ ಕ್ಷೇತ್ರ ಅಂತಹ ಕ್ಷೇತ್ರದಲ್ಲಿ ಯಾವುದೇ ವಿರೋದಿಗಳಿಲ್ಲದೆ ಅಜಾತಶತ್ರುವಾಗಿ ಇದ್ದವರು, ಅಟಲ್ ಜೀ ಎಂದರು,ಬಿಜೆಪಿ ಪಕ್ಷ ಹಿರಿಯರು …

Read More »

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ನಂದಿನಿಯಿoದ ಗ್ರಾಹಕರಿಗೆ ಗುಡ್ ನ್ಯೂಸ್: ಸಿಹಿ-ಚೀಸ್ ಫೇಸ್ಟ್ ಮೇಲೆ ಶೇಕಡಾ 10ರಷ್ಟು ರಿಯಾಯಿತಿ. ಬೆಂಗಳೂರು: ರಾಜ್ಯದ ಎಲ್ಲಾ ವರ್ಗಗಳ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಶುಚಿ-ರುಚಿಯಾದ ಹಾಲು ಮತ್ತು ಹಾಲಿನ ಉತ್ಪನಗಳನ್ನು ನಂದಿನಿ ಬ್ರಾಂಡ್ ಅಡಿಯಲ್ಲಿ ಕಳೆದ 4ದಶಕಗಳಿಂದ ನೀಡುತ್ತಾ ಬಂದಿರುವ ಕೆಎಮ್‌ಎಫ್, ಹೊಸ ವರ್ಷದ ನಿಮಿತ್ಯ ಇಂದಿನಿoದ ಜ. 7ರವರೆಗೆ ರಾಜ್ಯದಾದ್ಯಂತ ನಂದಿನಿ ಸಿಹಿ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು …

Read More »

ನೈಟ್ ಕರ್ಫ್ಯೂ ಇಲ್ಲ!..ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರ.

ಬೆಂಗಳೂರು: ಬ್ರಿಟನ್​ನಲ್ಲಿ ರೂಪಾಂತರಿತ ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಜನವರಿ 2 ರ ತನಕ ನೈಟ್ ಕರ್ಫ್ಯೂ ಎಂದು ಸರ್ಕಾರ ಘೋಷಿಸಿತ್ತು. ಇದಕ್ಕೂ ಮೊದಲು ನಿನ್ನೆಯಿಂದಲೇ ಜಾರಿ ಎಂದಿತ್ತಾದರೂ, ಬಳಿಕ ಅದರಿಂದ ಹಿಂದೆ ಸರಿದಿತ್ತು. ಇಂದು ಮತ್ತೆ ನಿನ್ನೆಯ ತೀರ್ಮಾನದಿಂದಲೂ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ನೈಟ್​ ಕರ್ಫ್ಯೂ ಇರಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದಿಷ್ಟು – ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ …

Read More »

ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಮೈಸೂರು,ಡಿ.23: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಟಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬನ್ನೂರು ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ 25 ಸಾವಿರ ರೂ. ಲಂಚ ಪಡೆಯುವ ವೇಳೆ ಮೈಸೂರಿನ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಬನ್ನೂರು ಪಟ್ಟಣದ ಕಾಮಗಾರಿ ಸಂಬಂಧ ಬಿಲ್ ಮಾಡಿಕೊಡಲು ಗುತ್ತಿಗೆದಾರರೊಬ್ಬರಿಗೆ 25 ಸಾವಿರ ರೂ. ಲಂಚ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರರು ಮೈಸೂರಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. …

Read More »