Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಅಸ್ಸಾಂ* – *ಶಕ್ತಿ ಪೀಠ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ*

  ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ *ಶ್ರೀ ಕಾಮಾಕ್ಯ ದೇವಾಲಯ* ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ*, *ಕಾಮಾಕ್ಯ ದೇವಾಲಯ* ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ *ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ *ರಮೇಶ್ ಜಾರಕಿಹೊಳಿ*, ಮಾರಕ ಕೊರೋನಾ ಸೋಂಕು …

Read More »

ಗ್ರಾಂ.ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳಿಂದ ಸಂತೋಷ ಜಾರಕಿಹೊಳಿಯವರಿಗೆ ಸತ್ಕಾರ.

ಗೋಕಾಕ : ಚಿಕ್ಕ ನಂದಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ಇಂದು ಯುವ ನಾಯಕರು ಹಾಗೂ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನರಾದ ಸಂತೋಷ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಜಾರಕಿಹೊಳಿ ಅವರು ಗ್ರಾಮದ ಜನತೆಯೊಂದಿಗೆ ಉತ್ತಮ ಒಡನಾಟದಿಂದ ಇರಿ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಹೇಳಿದರು. ನಂತರ ಜಯ ಗಳಿಸಿದ ಅಭ್ಯರ್ಥಿಗಳು ಸಾಹುಕಾರರಿಗೆ ಸನ್ಮಾನಿಸಿ , ಸಿಹಿ …

Read More »

ರಾಹುಲ ,ಪ್ರಿಯಾಂಕಾ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು!

ಬೆಳಗಾವಿ: ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ  ಪಾಶ್ಚಾಪೂರ ಪಂಚಾಯಿತಿಯಿಂದ ನಿನ್ನೇಯಷ್ಟೇ ಆಯ್ಕೆಯಾಗಿದ್ದ  ಬಿಜೆಪಿ ಬೆಂಬಲಿತ ಸದಸ್ಯೆ ಬಿಜೆಪಿ  ಪಕ್ಷ ತೊರೆದು  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಾಸಕ  ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್,  ಪ್ರಿಯಾಂಕಾ ಜಾರಕಿಹೊಳಿ  ಅವರ  ಸಮ್ಮುಖದಲ್ಲಿ  ಬಿಜೆಪಿ  ಕಾರ್ಯಕರ್ತರೆ ಹಾಗೂ ಪಂಚಾಯಿತಿ ಸದಸ್ಯೆ ಮನಿಷಾ ಸಿಂಧೆ ಎಂಬುವವರು 10 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಾಶ್ಚಾಪೂರ ಪಂಚಾಯಿತಿ 5 ನೇ ವಾರ್ಡ್ ನಿಂದ ಮನಿಷಾ ಸದಸ್ಯರಾಗಿ ಆಯ್ಕೆಯಾಗಿದ್ದರು.  …

Read More »

ಕೃಷ್ಣ -ಕಾವೇರಿ ಕಣಿವೆ ರೈತರ ಅನುಕೂಲಕ್ಕೆ ವಿಶಿಷ್ಠ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ ; ಭೂಪೇಂದ್ರ ಯಾದವ್ ಜತೆ ಸಚಿವ ರಮೇಶ್ ಜಾರಕಿಹೊಳಿ ಸಮಾಲೋಚನೆ

ಬೆಂಗಳೂರು, ಡಿ. 31, 2020: ರಾಜ್ಯದ ಕೃಷ್ಣ ಮತ್ತು ಕಾವೇರಿ ಕೊಳ್ಳದ ರೈತರಿಗೆ ಹೆಚ್ಚಿನ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕರಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯಸಭಾ ಸದಸ್ಯ ಭೂಪೆಂದ್ರ ಯಾದವ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂನ ರಾಜಧಾನಿ ಗೌಹಾಟಿಯಲ್ಲಿ ಭೂಪೆಂದ್ರ ಅವರನ್ನು ಭೇಟಿ ಮಾಡಿದ್ದ ಸಚಿವರು, ಬ್ರಹ್ಮಪುತ್ರ ನದಿ ಕಣಿವೆಯ ಇಕ್ಕೆಲಗಳಲ್ಲಿ ವಿಶ್ವದ ಪ್ರತಿಷ್ಠಿತ ಮಲ್‌ಬರಿ ಮತ್ತು ಗೋಲ್ಟನ್ ಮೋಘಾ …

Read More »

ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ

ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಸ್ಥಳಿಯ ಮುಖಂಡನ ಪೇನಲ್‍ನಲ್ಲಿ 10ಕ್ಕೆ 10 ಸೀಟ್‍ಗಳು ಬಂದಿದ್ದು. ಆದ್ರೆ ಇದೇ ಹೊಟ್ಟೆ ಕಿಚ್ಚಿನಿಂದ ವಿರೋಧಿ ಬಣದವರು ಆ ಮುಖಂಡನನ್ನೆ ಮರ್ಡರ್ ಮಾಡಿರುವ ಒಂದು ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್‍ಪುರ ಗ್ರಾಮದಲ್ಲಿ ನಡೆದಿದೆ. ಶಾನುರಸಾಬ್ ದಸ್ತಗೀರ್‍ಸಾಬ್ ಮುಲ್ಲಾ ಕೊಲೆಯಾಗಿರುವ ದುರ್ದೈವಿ. ಸುಲ್ತಾನ್‍ಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು. ನಿನ್ನೆಯಷ್ಟೇ ಫಲಿತಾಂಶ ಹೊರ …

Read More »

ಶಾಸಕ  ಸತೀಶ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳ ಗೆಲುವು.

ಯಮಕನಮರಡಿ  ಮತಕ್ಷೇತ್ರದ  ಧರನಟ್ಟಿ  ಗ್ರಾಮ ಪಂಚಾಯಿತಿ  ಒಂದನೇ ವಾರ್ಡ್ ನಿಂದ  ಶ್ರೀ   ಬಾಳೇಶ ನಿಂಗಪ್ಪ ದಾಸನಟ್ಟಿಯವರು ಭರ್ಜರಿ ಜಯಗಳಿಸಿದ್ದಾರೆ. ಶಾಸಕ  ಸತೀಶ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿರುವ ಬಾಳೇಶ್  361 ಮತಗಳ ಪಡೆಯುವ ಮೂಲಕ  ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.  ಧರನಟ್ಟಿ ಪಂಚಾಯಿತಿಗೆ ಇವರ ತಂದೆ, ತಾಯಿ ಸೇರಿ ಒಟ್ಟು  ಒಂದೇ ಕುಟುಂಬದ  ಮೂರು   10 ಬಾರಿ   ಸದಸ್ಯರಾಗಿ ಆಯ್ಕೆಯಾದ್ದರು ಇಲ್ಲಿ ಸ್ಮರಿಸಬಹುದು. ವಿಜಯೋತ್ಸವ: ಚುನಾವಣೆಯಲ್ಲಿ ಭರ್ಜರಿ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ.!

ಗೋಕಾಕ: ಡಿ.೨೨ ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ ೩೩ ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ ೩೩ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಬಣ ಸಂಪೂರ್ಣವಾಗಿ ವಿಜಯದತ್ತ …

Read More »

ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯತಿಥಿ ; ಶ್ರೇಷ್ಠ ಕಲಾವಿದನನ್ನು ಸ್ಮರಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಕನ್ನಡ ಚಲನಚಿತ್ರ ರಂಗದ ಧೃವತಾರೆಯಾಗಿ ಮಿಂಚಿದ *ಸಾಹಸಸಿಂಹ ಡಾ.ವಿಷ್ಣುವರ್ಧನ್* ಅವರ ಪುಣ್ಯತಿಥಿಯ ದಿನವಾದ ಇಂದು ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಬಹುಭಾಷಾ ತಾರೆಯಾಗಿ ಕಲಾ ರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ *ಡಾ. ವಿಷ್ಣುವರ್ಧನ್* ಅವರ ಕಲಾ ಪ್ರೌಢಿಮೆ, ನಟನಾ ಶ್ರೀಮಂತಿಕೆ ಹಾಗೂ ಸರ್ವಶ್ರೇಷ್ಠ ವ್ಯಕ್ತಿತ್ವದ ಪ್ರಭಾವ ಸದಾ ಜೀವಂತವಾಗಿದೆ. ಸಾಮಾಜಿಕ ಸಂದೇಶಗಳನ್ನು ಸಾರುವ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಜನಮನಗೆದ್ದ ಡಾ. ವಿಷ್ಣುವರ್ಧನ್ ಅವರು ಇಂದಿಗೂ ನಮ್ಮ ಮನೆ, …

Read More »

ಉಪ ಸಭಾಪತಿ ಎಸ್.ಎಲ್ ಧರ್ಮೇಗೌಢ ನಿಧನಕ್ಕೆ ಶಾಸಕ ಸತೀಶ ಜಾರಕಿಹೊಳಿ ಸಂತಾಪ

ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್ ಧರ್ಮೇಗೌಢ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ಧರ್ಮೇಗೌಡರು  ತುಂಬ ಆತ್ಮೀಯರು, ಮುಂಚೆ ಜೆಡಿಎಸ್ ನಲ್ಲಿ  ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ.  ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅವರು  ಹೋರಾಟ ಮಾಡಬೇಕಿತ್ತು.  ಅನಿವಾರ್ಯವಾಗಿ ನಮ್ಮನ್ನೆಲ್ಲ  ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖ  ಸಹಿಸಿಕೊಳ್ಳುವ ಶಕ್ತಿ ಬರಲಿ ಎಂದು ಕಂಬನಿ ಮಿಡಿದರು. ಚಿಕ್ಕಮಗಳೂರಿನಲ್ಲಿ  ಸಹಕಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಧರ್ಮೇಗೌಡರು  …

Read More »

ಧರ್ಮೇಗೌಡರ ಹಠಾತ್ ನಿಧನ ; ಸಹಕಾರಿ ಕ್ಷೇತ್ರವೂ ಬಡವಾಗಿದೆ – ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಕರ್ನಾಟಕ ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ *ಶ್ರೀ ಎಸ್ ಎಲ್ ಧರ್ಮೇಗೌಡ* ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ *ಧರ್ಮೇಗೌಡ* ರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು …

Read More »