ಕೋವಿಡ್ ನಿಂದಾಗಿ ಉಂಟಾದ ಭಾರಿ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಯಾವುದೇ ತೆರಿಗೆ ವಿಧಿಸದೇ ಉದ್ಯಮ ಸ್ನೇಹಿ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದು ಇದು ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕೇಂದ್ರ ಬಜೆಟ್ ನ್ನು ಸ್ವಾಗತಿಸಿ ಮಾತನಾಡಿದ ಅವರು, ದೇಶಾದ್ಯಂತ 15,000 ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ. …
Read More »ಆರ್ಥಿಕತೆಗೆ ಚೈತನ್ಯ ತುಂಬಲು ಬಜೆಟ್ ಸಹಕಾರಿ, ಜನಹಿತದ ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ರೈತರ ಅಭಿವೃದ್ಧಿ ಅದು ಕೇಂದ್ರದಿಂದ ಮಾತ್ರ ಸಾಧ್ಯವಿದ್ದು, ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ …
Read More »*ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ಆಯ್ಕೆ*
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆಶೀರ್ವಾದದಿಂದ ಕೌಜಲಗಿ ಬ್ಲಾಕ್ ಕಾಂಗ್ರೆಸ್ ಘಟಕದ ಘಟಕದ ಅಧ್ಯಕ್ಷರಾಗಿ ಮಂಜುನಾಥ ಮಸಗುಪ್ಪಿ ಅವರು ನೇಮಕ. ಮಂಜುನಾಥ ಮಸಗುಪ್ಪಿ ಮಾತನಾಡಿ “ನಾನು ಅತ್ಯಂತ ಅಚ್ಚುಕಟ್ಟಾಗಿ ಪಕ್ಷನಿಷ್ಠೆಯಿಂದ ಕಾರ್ಯ ಮಾಡುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ವಿನಾಯಕ ಪೂಜಾರಿ, ಹಣಮಂತಗೌಡ ಚಿಕ್ಕೆಗೌಡ್ರು, ಭೀಮಶಿ ಕಾರಡಗಿ, ಸಂಜು ಬಾಗಿ, ಪರಶು ಸೂರ್ಯವಂಶಿ , ಗುರುರಾಜ ತಿಮ್ಮಾಪೂರ, ಮುತ್ತು ಕೌಜಲಗಿ ,ಉಮೇಶ್ ಚಿಪ್ಪಲಕಟ್ಟಿ, ಮಾದೇವ …
Read More »*ಪುಟ್ಟ ಸಾಹುಕಾರರ ಹುಟ್ಟು ಹಬ್ಬ, ಮಾನವೀಯತೆ ಮೇರೆದ ಸಂತೋಷ ಜಾರಕಿಹೊಳಿ ಕುಟುಂಬ*
ಗೋಕಾಕ: ಇವತ್ತು ಸಾಹುಕಾರರ ಕುಟುಂಬದಲ್ಲಿ ಮತ್ತೊಂದು ಖುಷಿಯ ದಿನ ಇದೆ ದಿನ ಒಂದು ವರ್ಷದ ಹಿಂದೆ ಶ್ರೀ ಸಂತೋಷ್ ಜಾರಕಿಹೊಳಿ ದಂಪತಿಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿದ ವಿಶೇಷ ದಿನ ಹುಟ್ಟಿನಿಂದಲೂ ಸರಳತೆಯನ್ನು ಮೆರೆದು ಬಂದ ಸಾಹುಕಾರರ ಕುಟುಂಬ ಮಗುವಿನ ಹೆರಿಗೆಯನ್ನು ಸರ್ಕಾರಿ ದವಾಖಾನೆಯಲ್ಲಿ ಮಾಡಿ ಒಂದು ಮಾದರಿಯಾಗಿತ್ತು ಇಂದು ಆ ಪ್ರೀತಿಯ ಕಂದಮ್ಮನಿಗೆ ಮೊದಲನೇ ವರ್ಷ ತುಂಬಿದ ದಿನ ಇಂದು ಕೂಡ ಒಂದು ಸಾಮಾಜಿಕ ಕಳಕಳಿಯನ್ನು ಹೊತ್ತು …
Read More »ಗೋಕಾಕ ಬ್ಲಾಕ್ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ
ಗೋಕಾಕ: ಗೋಕಾಕ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೊಣ್ಣೂರಿನ ರಾಹುಲ್ ಬಡೇಸಗೋಳ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆದೇಶದ ಮೇರೆಗೆ ಇವರನ್ನು ನೇಮಿಸಲಾಗಿದೆ. ಕಾರ್ಯಕರ್ತರಾದ ಪಾಂಡು ಮನ್ನಿಕೇರಿ, ವಿವೇಕ ಜತ್ತಿ, ಪ್ರಕಾಶ್ ಡಾಂಗೆ, ಅಜ್ಜಪ್ಪ ಕರನಿಂಗ, ಪ್ರವೀಣ್ ಗುಡ್ಡಾಕಾಯು, ಮಂಜುಳಾ ರಾಮಗಾನಟ್ಟಿ, ಇಮ್ರಾನ್ ತಕ್ಕೀರ್, ಹನುಮಂತ ಗೋಪಾಳೆ, ಸುನೀಲ ಗುಡ್ಡಾಕಾಯು, ಶಿವು ಕಿಲಾರಿ, ನಿಯಾಲ ಹುಲಿಕಟ್ಟ, ಬಾಬಾಜಾನ್, ಶ್ರೀಶೈಲ್ ಅವರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.
Read More »ಗೋಕಾಕ ಸರಕಾರಿ ವೈದ್ಯರಿಂದ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ.
ಗೋಕಾಕ: ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ ಇವರು ರಿಬ್ಬನ್ ಕಟ್ ಮಾಡಿ ನಗರಸಭೆಯ ಉಪಾದಕ್ಷ ಬಸವರಾಜ ಆರೆನ್ನವರ ಇವರು ಬ್ಯಾಂಡ ಬಾರಿಸುವ ಮೂಲಕ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ನಾಳೆ ದಿನ ಜನೆವರಿ 31 ರವಿವಾರದಂದು ಸ್ಥಳಿಯ ಪ್ರಾಥಮಿಕ …
Read More »*ಗೋಕಾಕ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ ಗೋಕಾಕ ಆಯ್ಕೆ*
ಗೋಕಾಕ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕುತ್ಬುದ್ಧೀನ್ ಗೋಕಾಕ ಶನಿವಾರ ಆಯ್ಕೆಯಾಗಿದ್ದಾರೆ. ಕುತ್ಬುದ್ಧೀನ್ ಅವರು ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಲಖನ್ ಜಾರಕಿಹೊಳಿ ಹಾಗೂ ಅಂಬಿರಾವ್ ಪಾಟೀಲ ಅವರ ಸೂಚನೆಯ ಮೇರೆಗೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಬಸವರಾಜ ಅರೇನ್ನವರ, ನಗರ ಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, …
Read More »*ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ.!*
ಗೋಕಾಕ: ಗೋಕಾಕ ಮತಕ್ಷೇತ್ರದ ಉಪ್ಪಾರಟ್ಟಿ ಹಾಗೂ ಮಾಲದಿನ್ನಿ ಗ್ರಾಮದಲ್ಲಿ ೧ ಕೋಟಿ ೬೦ ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ಶನಿವಾರದಂದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಡಿಯಲ್ಲಿ ೮೫ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, ೧೫ ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನ. ೨೦ ಲಕ್ಷ ರೂಪಾಯಿ …
Read More »*ನಾಡು, ನುಡಿ ವಿಷಯಕ್ಕೆ ಬಂದಾಗ ಪಕ್ಷಾತೀತ ಹೋರಾಟ, ಒಗ್ಗಟ್ಟು ಪ್ರದರ್ಶಿಸಬೇಕು: ಶಾಸಕ ಸತೀಶ ಜಾರಕಿಹೊಳಿ*
ಮಂಡ್ಯ: ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪುತ್ತಿದ್ದು, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರತಿಯೊಬ್ಬರು ಹೋರಾಟ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡವನ್ನು ಪ್ರತಿಯೊಬ್ಬರು ನಿರಂತರವಾಗಿ ಪ್ರೀತಿಸಿ, ಪ್ರೋತ್ಸಾಹಿಸಬೇಕು. ರಾಜ್ಯ, ಹೊರ ರಾಜ್ಯಗಳಲ್ಲಿಯೂ ಕನ್ನಡ ಕ್ರಾಂತಿಯಾಗಬೇಕು. ನಾಡು, ನುಡಿ ವಿಷಯಕ್ಕೆ ಬಂದಾಗ ಪಕ್ಷಾತೀತ ಹೋರಾಟ …
Read More »ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗುರುವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. ವಿಕಲಚೇತನರನ್ನು ಸಮಾಜ ಗೌರವದಿಂದ ನಡೆಸಿಕೊಳ್ಳಬೇಕು. ಅವರ ಬಗ್ಗೆ ಕೀಳುರಿಮೆ ಮಾಡದೇ ಆದರದಿಂದ ನೋಡಿಕೊಳ್ಳಬೇಕು. ವಿಕಲಚೇತನರ ಪ್ರಗತಿಗಾಗಿ …
Read More »