ಕೆಲವು ಗಂಟೆಗಳ ಹಿಂದೆಯೆ ಹಲವು ಮಾಧ್ಯಮಗಳು ವಿಟಿಯು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ಪರೀಕ್ಷೆ ಗಳ ಕುರಿತು ಸುದ್ದಿ ಮಾಡಿದ್ದೇವು. ಅದರಂತೆ ಎಲ್ಲ ವಿಟಿಯು ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ. “‘ಕೋವಿಡ್ ಕರ್ಫ್ಯೂ’ ಜಾರಿ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನ ಎಲ್ಲಾ ಪರೀಕ್ಷೆಗಳನ್ನು ಹಾಗೂ ಡಿಪ್ಲೋಮಾ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕೊರೋನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು. ವಿದ್ಯಾರ್ಥಿ ಮಿತ್ರರು …
Read More »ಕೋವಿಡ್ ನಿಗ್ರಹಕ್ಕಾಗಿ ಮಗದುಮ್ ಆಸ್ಪತ್ರೆ ಟೊಂಕ ಕಟ್ಟಿ ನಿಂತಿದೆ: ಸತೀಶ್ ಜಾರಕಿಹೊಳಿ
ಚಿಕ್ಕೋಡಿ: ಸಮೀಪದ ಅಂಕಲಿ ಪಟ್ಟಣದ ಡಾ.ಎನ್.ಎ. ಮಗದುಮ್ ಆಯುರ್ವೇದಿಕ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರದಲ್ಲಿ 120 ಬೆಡ್ ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದ್ದು, ಈ ಯೋಜನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಇಂದು ಚಾಲನೆ ನೀಡಿದರು. “ಆಸ್ಪತ್ರೆಯೊಂದಿಗೆ ಸತೀಶ ಜಾರಕಿಹೊಳಿ ಅವರ ಸತೀಶ ಜಾರಕಿಹೊಳಿ ಫೌಂಡೇಶನ್ ಹಾಗೂ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರ ಅನ್ನಪೂರ್ಣೇಶ್ವರಿ ಫೌಂಡೇಶನ್ …
Read More »ವಿದ್ಯಾರ್ಥಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಟಿಯು ಆಡಳಿತ!
ರಾಜ್ಯಾದ್ಯಂತ ವಿವಿಧ ಪರೀಕ್ಷೆಗಳು ಮುಂದುಡಿಕೆ ಮಾಡಿದ್ದಾರೆ, ಆದರೆ VTU ಆಡಳಿತ ಮಂಡಳಿ ಮಾತ್ರ ಪರೀಕ್ಷೆ ಮುಂದೂಡಿಲ್ಲ, ಪರೀಕ್ಷೆ ಮಾಡಲೇಬೇಕೆಂಬ ಹಠಮಾರಿ ಧೋರಣೆ ತೋರುತ್ತಿದೆ.ಎಲ್ಲರಿಗೂ ಒಂದು ರೂಲ್ಸ್ ಆದರೆ VTU ಗೆ ಇನ್ನೊಂದು ರೂಲ್ಸ್ ಅಂತ ಪ್ರತಿಭಾವಂತ ನಾಗರಿಕರ ಮಾತಾಗಿದೆ. ಮಹಾಮಾರಿ ಕೊರೋನಾ ಹೊಡೆತಕ್ಕೆ ರಾಜ್ಯವೇ ಬೆಚ್ಚಿಬೀಳ್ತಿದೆ. ಇತ್ತ ಕೊರೋನಾ ಕರಿನೆರಳು ಶಿಕ್ಷಣ ಕ್ಷೇತ್ರವನ್ನು ಬಿಟ್ಟಿಲ್ಲ. ಒಂದೆಡೆ ಪೋಷಕರಿಗೆ ಮಕ್ಕಳ ಚಿಂತೆಯಾದ್ರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಚಿಂತೆ. ಈ ನಡುವೆ ಇದನ್ನು …
Read More »ಕೊರೊನಾ ಲಾಕ್‍ಡೌನ್ ಹಿನ್ನೆಲೆ: ನಾಳೆಯಿಂದ ನಡಿಬೇಕಿದ್ದ RCU ಎಲ್ಲಾ ಪರೀಕ್ಷೆಗಳು ಮುಂದೂಡಿಕೆ
ಬೆಳಗಾವಿ: ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ನಾಳೆಯಿಂದ ನಡೆಯಬೇಕಿದ್ದ ಪದವಿ, ಸ್ನಾತಕ, ಸ್ನಾತಕೋತ್ತರ ಹಾಗೂ ಎಂಬಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಏ.27ರಿಂದ ಪರೀಕ್ಷೆಗಳು ನಿಗದಿಯಾಗಿದ್ದವು. ಆದರೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅಲ್ಲದೇ ಮತ್ತೆ ನಾಳೆಯಿಂದ 14 ದಿನ ಲಾಕ್‍ಡೌನ್ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸರ್ಕಾರದ ಆದೇಶದ ಮೇರೆಗೆ ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು …
Read More »ನಾಳೆ ರಾತ್ರಿಯಿಂದ ಕರ್ನಾಟಕ 14 ದಿನ ಲಾಕ್- ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಸಿದ್ದಾರೆ. ಇಂದಿನ ಕೊರೋನಾ ನಿಯಂತ್ರಣ ಸಂಬಂಧ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಮಂತ್ರಿ …
Read More »ಕೊರೋನಾ ಚೈನ್ ಬ್ರೇಕ್ ಮಾಡುವುದೇ ತಮ್ಮ ಉದ್ಧೇಶ : ಶಾಸಕ ಬಾಲಚಂದ್ರ ಜಾರಕಿಹೊಳಿ
ಎ. 26 ರಿಂದ ಮೇ 4 ರವರೆಗೆ ಮಧ್ಯಾಹ್ನ ನಂತರ ಅಂಗಡಿ ಮುಗ್ಗಟ್ಟುಗಳು ಬಂದ್ ಸೋಮವಾರ ದಿ. 26 ರಿಂದ ಮೇ 4 ರವರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ರವರೆಗೆ ಸಾರ್ವಜನಿಕರಿಗೆ ಅಗತ್ಯವಿರುವ ಅಂಗಡಿ ಮುಗ್ಗಟ್ಟುಗಳನ್ನು ತೆರೆದು ತಮ್ಮ ವ್ಯವಹಾರಗಳನ್ನು ನಡೆಸಿಕೊಳ್ಳಬೇಕು. ಮದ್ಯಾಹ್ನ 1 ಗಂಟೆಯ ನಂತರ ಕಡ್ಡಾಯವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ತಾಲೂಕಾ ಆಡಳಿತದೊಂಡಿಗೆ ಸಹಕರಿಸಬೇಕು. ಗೋಕಾಕ : …
Read More »ತಾಲೂಕಾಡಳಿತದಿಂದ ಸಕಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ಡಾ. ಆರ್.ಎಸ್ ಬೆನಚನಮರಡಿ
ಮೂಡಲಗಿ: ಕೊರೋನಾ ಮಹಾ ಮಾರಿಯಿಂದ ಜನ ಜೀವನ ಮೇಲೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ತಾಲೂಕಾಡಳಿತದಿಂದ ಸಕಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್ ಬೆನಚನಮರಡಿ ಹೇಳಿದರು. ಅವರು ಶನಿವಾರದಂದು ಮೂಡಲಗಿ ಹಾಗೂ ಮಲ್ಲಾಪೂರ ಪಿಜಿ ಗ್ರಾಮಗಳ ಆರೋಗ್ಯ ಕೇಂದ್ರಗಳ ನಿಗದಿನ ಕೊವೀಡ್ ಕೇಂದ್ರಗಳಿಗೆ ಭೇಟಿ ನೀಡಿ ಕೈಗೊಂಡ ಕ್ರಮಗಳನ್ನು ತಾಲೂಕಾ ತಂಡದೊಂದಿಗೆ ತೆರಳಿ ಪರಿಶೀಲಿಸಿ ಮಾತನಾಡಿದ ಅವರು, ಕೆ.ಎಮ್.ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ …
Read More »ಕೋವಿಡ್ ನಿಯಂತ್ರಣಕ್ಕೆ ಟಿಮ್ ಜೊತೆ ಫೀಲ್ಡಿಗಿಳಿದ ಮುಖ್ಯಾಧಿಕಾರಿ ಬಳ್ಳಾರಿ.
ಚಿಂಚಲಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಜಿಲ್ಲಾಡಳಿತ ಮಾರ್ಗದರ್ಶನದತ್ತೆ ಚಿಂಚಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೇತೃತ್ವದಲ್ಲಿ ಕೋವಿಡ್ ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಿದೆ. ಈ ಪಡೆಗಳನ್ನು ಕೋವಿಡ್ ತಡೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದೆಂದು ಮುಖ್ಯಾಧಿಕಾರಿ ವೇಕಟಸ್ವಾಮಿ ಬಳ್ಳಾರಿ ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಭರ್ಜರಿಯಾಗಿಯೇ ಅಪ್ಪಳಿಸುತ್ತಿದೆ. ಕಳೆದ …
Read More »ಪ್ಲಾಂಟ್ ನಲ್ಲಿನ ಆಕ್ಸಿಜನ್ ಸಿಲಿಂಡರ್ ಗಳ ಸಂಗ್ರಹಣೆ, ಸಾಮರ್ಥ್ಯದ ಬಗ್ಗೆ ಪರಿಶೀಲಿಸಿದ ಸತೀಶ ಜಾರಕಿಹೊಳಿ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಕಾಕತಿಯಲ್ಲಿರುವ ‘ಬೆಳಗಾವಿ ಆಕ್ಸಿಜನ್ ಪ್ಲಾಂಟ್’ ಗೆ ಶುಕ್ರವಾರ ಸಂಜೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ಲಾಂಟ್ ನಲ್ಲಿನ ಆಕ್ಸಿಜನ್ ಸಿಲಿಂಡರ್ ಗಳ ಸಂಗ್ರಹಣೆ ಹಾಗೂ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಪ್ಲಾಂಟ್ ಗೆ ಆಕ್ಸಿಜನ್ ಸರಬರಾಜು ಮಾಡುವ ಮೂಲಗಳ ಬಗ್ಗೆ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಸಹಾಯಕ ಔಷಧ ನಿಯಂತ್ರಕ ರಘುರಾಮ್ ಅವರೊಂದಿಗೆ ಸತೀಶ ಅವರು ಕೆಲಹೊತ್ತು ಚರ್ಚೆ ನಡೆಸಿದರು. …
Read More »ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಮಹಾಮಾರಿ ಕೊರೋನಾ ನಿಯಂತ್ರಿಸಲು ಅಧಿಕಾರಿಗಳು ಸಕಲ ಸಿದ್ಧತೆಯೊಂದಿಗೆ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸುವಂತೆ ತಿಳಿಸಿದರು. ಇದುವರೆಗೆ ಗೋಕಾಕ ತಾಲೂಕಿನಲ್ಲಿ 79 …
Read More »
CKNEWSKANNADA / BRASTACHARDARSHAN CK NEWS KANNADA