Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಖಂಡನೆ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಆಗ್ರಹ

ಗೋಕಾಕ: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕಾಂಗ್ರೆಸ್ ಮುಖಂಡ ವಿವೇಕ‌ ಜತ್ತಿ ಖಂಡನೆ ವ್ಯಕ್ತಪಡಿಸಿದ್ದಾರೆ.  ಉತ್ತರ ಪ್ರದೇಶದಲ್ಲಿ ಯೋಗಿ‌ ಆದಿತ್ಯಾನಾಥ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ. ಹೀಗಾಗಿ, ಅಲ್ಲಿ ಪದೇ ಪದೇ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಆದರೂ, ಕೂಡ ಸರ್ಕಾರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ …

Read More »

ಮೂರನೇ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: “ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದೇವೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳು ಹಾಗೂ ಬಿಮ್ಸ್ ನ ಅಧಿಕಾರಿಗಳನ್ನು ಭೇಟಿ‌ ಮಾಡಿ ಚರ್ಚಿಸಿದ ನಂತರ‌ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕೊರೊನಾ ನಿಯಂತ್ರಣಕ್ಕೆ ಸಲಹೆಗಳನ್ನು ನೀಡಲಾಗಿತ್ತು. ಅವುಗಳ‌ …

Read More »

ಕಾಲು ಜಾರಿ ಘಟಪ್ರಭಾ ನದಿಗೆ ಬಿದ್ದ 20 ವರ್ಷದ ಯುವಕ ; ಹುಡುಕಾಟದಲ್ಲಿ ಪೊಲೀಸರು

ಗೋಕಾಕ :  ಕಾಲು ಜಾರಿ ಘಟಪ್ರಭಾ ನದಿಗೆ ಯುವಕ ಬಿದ್ದು ಕಣ್ಮರೆಯಾದ ಘಟನೆ ಸೋಮವಾರ ನಡೆದಿದ್ದು, ಯುವಕ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಮೋಮಿನ್ ಗಲ್ಲಿಯ ತೌಫಿಕ್ ನರೋ (20) ಕಾಣೆಯಾದ ಯುವಕ. ಸ್ನೇಹಿತರೊಂದಿಗೆ ಘಟಪ್ರಭಾ ನದಿಗೆ ಹೋದ  ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಹಿಡಕಲ್ ಜಲಾಶಯದಿಂದ 4043 ಸಾವಿರ ಕ್ಯೂಸೇಕ್ ನೀರು ಬಿಟ್ಟಿರುವುದರಿಂದ ಯುವಕ ನೀರಿನ ರಬಸಕ್ಕೆ ಕೊಚ್ಚಿ ಹೋಗಿದ್ದು, ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ …

Read More »

*ರಮೇಶ ಜಾರಕಿಹೊಳಿ ಅವರ ಸ್ವಂತ ಖರ್ಚಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಿರ್ಮಾಣ*

ಘಟಪ್ರಭಾ: ಗೋಕಾಕ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇನ್ನೂ ಎರಡು ದಿನಗಳಲ್ಲಿ ಗೋಕಾಕ ದಲ್ಲಿ 40 ಮತ್ತು ಕೊಣ್ಣೂರ ದಲ್ಲಿ 10 ಮತ್ತು ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಐದು ಆಕ್ಷೀಜನ್ ಬೇಡ್ ಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ರಾದ ಸುರೇಶ ಸನದಿ ಹೇಳಿದರು. ಅವರು ಸೋಮವಾರ ದಂದು ಸಮೀಪದ ಶಿಂದಿಕುರಬೇಟ …

Read More »

ಕರ್ನಾಟಕ ಸರ್ಕಾರ ಮತ್ತೆ ರೈತ ಬಡವರ ವಿರೋಧಿ ಧೋರಣೆ : ರೆಹಮಾನ್ ಮೊಕಾಶಿ

ಕರ್ನಾಟಕ ಸರ್ಕಾರ ಮತ್ತೆ ರೈತ ಬಡವರ ವಿರೋಧಿ ಧೋರಣೆಯನ್ನು ಮುಂದುವರೆಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಸಹಕಾರಿ ಸಂಘಗಳ ಸಾಲವನ್ನು ಪಾವತಿಸಲು ಮೂರು ತಿಂಗಳು ಮುಂದಕ್ಕೆ ಹಾಕಿದ್ದು ರೈತರಿಗೆ ಹಾಗೂ ಬಡವರಿಗೆ ಖುಷಿ ತಂದಿತ್ತು ಆದರೆ ಈಗ ಒಮ್ಮಿಂದೊಮ್ಮಿಗೆ ಮೇ ಮೂವತ್ತು ಸಾಲ ತುಂಬಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಿದ್ದರಿಂದ ರೈತರು ಬಡವರಿಗೆ ಶಾಕ್ ನೀಡಿದಂತಾಗಿದೆ …

Read More »

ಪ್ರತಿ ಗ್ರಾಮಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಣೆ- ನಾಗಪ್ಪ ಶೇಖರಗೋಳ.

ಕೊರೋನಾ ನಿಯಂತ್ರಣ ಸಂಬಂಧ ವಿವಿಧ ಗ್ರಾಮಗಳಿಗೆ ಟೀಂ ಎನ್ಎಸ್ಎಫ್ ಭೇಟಿ. ಮೂಡಲಗಿ: ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ಹಿಮ್ಮೆಟ್ಟಿಸಲು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅಗತ್ಯವಿರುವ ಎಲ್ಲ ಬೀಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯತಿಗಳಿಗೆ ಸೋಡಿಯಂ ಹೈಪೋಕ್ಲೋರೈಡ್ ವಿತರಿಸಲಾಗುತ್ತದೆ ಎಂದು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅರಭಾವಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಚಿವ …

Read More »

*ಕರ್ತವ್ಯ ನಿರತ ಪೋಲಿಸರಿಗೆ ಊಟದ ವ್ಯವಸ್ಥೆ ಮಾಡಿದ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗ*

  ಗೋಕಾಕ: ಕರೋನಾ ಎರಡನೇ ಅಲ್ಲೇ ಶುರುವಾಗಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಕುಟುಂಬ ಬಿಟ್ಟು ತಮ್ಮ ಜೀವದ ಹಂಗು ತೋರೆದು ಸೇವೆ ಸಲ್ಲಿಸುತ್ತಿರುವ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗದಿಂದ ಮಧ್ಯಾಹ್ನದ ಸುಮಾರು 150 ಕ್ಕೂ ಹೆಚ್ಚು ಪೋಲಿಸರಿಗೆ ಊಟದ ವ್ಯವಸ್ಥೆ, ತಂಪು ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಸುಡು ಬಿಸಿಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೆ ಕಳೆದ ಲಾಕ್ ಡೌನ್ …

Read More »

*ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ನಿಧನ*

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಇಂದು ನಿಧನ ರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಗಮನಸೆಳೆದಿದ್ದರು. ಕರ್ನಾಟಕದ ಪ್ರಬಲ ರೈತಪರ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯಾತೀತ ಜನತಾ ದಳ ಸೇರಿದಂತೆ ವಿವಿಧ ಪಕ್ಷಗಳನ್ನು ಪದೇಪದೆ ಬದಲಾಯಿಸಿ ಪಕ್ಷಾಂತರ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದರು. ತಮ್ಮ ತತ್ವ ಸಿದ್ಧಾಂತಗಳು ಒಗ್ಗದ ಸಂದರ್ಭದಲ್ಲಿ ದಿಢೀರನೆ ಆ …

Read More »

20ಎಮ್‍ಡಿಎಲ್‍ಜಿ1 ಶಿಥಿಲೀಕರಣಗೊಂಡಿದ್ದ ಆರೋಗ್ಯ ಇಲಾಖೆಯ ವಸತಿ ಗೃಹಗಳಿಗೆ ಕಾಯಕಲ್ಪ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ರೋಗಿಗಳ ಅನುಕೂಲಕ್ಕಾಗಿ ಸ್ವಂತ ಹಣ ನೀಡಿ ದುರಸ್ತಿ ಮಾಡಿಸಿ ನವೀಕರಣಗೊಳಿಸಿದ ಮಾದರಿ ಶಾಸಕ. ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿಗೆ ಷಹಬಾಷ ಎಂದ ಮೂಡಲಗಿ ಜನ ಮೂಡಲಗಿ : ಕೋವಿಡ್ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣ ಸಿರುವ ಅರಬಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ಮೂಡಲಗಿಯಲ್ಲಿ ಸೋಂಕಿತರಿಗಾಗಿ ಮತ್ತು …

Read More »

*ಜೀವದ ಹಂಗನ್ನು ತೊರೆದು ಸುದ್ದಿ ಮಾಡುವ ಪತ್ರಕರ್ತರಗಿಲ್ಲ ಸರ್ಕಾರದ ಪ್ಯಾಕೇಜ್*

ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ನಗರ,ಪಟ್ಟಣ.ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಾಮಾಣಿಕ ಕೆಲಸ ಮಾಡುವುದಲ್ಲದೇ ಸೋಂಕಿತರಿವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಅನೂಕೂಲ ಮತ್ತು ಅನಾನೂಕೂಲ ಬಗ್ಗೆ ತಿಳಿಸುವ ಪತ್ರಕರ್ತರ ಯಾವಾಗ ಸೋಂಕು ಹರಡುತ್ತೇ ಎನ್ನುವ ಆತಂಕದಲ್ಲಿ ನಿತ್ಯ ಸಾರ್ವಜನಿಕರ ಬಗ್ಗೆ ಕಳಿಕಳಿಯುಳ್ಳ ಒಬ್ಬ ಪತ್ರಕರ್ತರು ಯಾವದೇ …

Read More »