ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್ 21 ರವರೆಗೆ ಲಾಕ್ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಈಗ ಅನುಷ್ಠಾನದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ಕೊವಿಡ್ …
Read More »ಪೌರಕಾರ್ಮಿಕರಿಗೆ ದಿನಶಿ ಕಿಟ್ ವಿತರಿಸಿ ಮಾನವಿಯತೆ ಮೆರೆದ ಆಶಾ ಟೆಕ್ಸ್ ಟೈಲ್ಸ್ ಮಾಲಿಕರು.
ಗೋಕಾಕ: ಕೊರೊನಾ ಸಮಯದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಜನರ ಆರೋಗ್ಯವನ್ನು ಕಾಪಾಡುವಗೊಸ್ಕರ ಮಳೆ,ಬಿಸಿಲು,ಚಳಿ ಎನ್ನದೆ ಪಟ್ಟಣವನ್ನು ಸ್ವಚ್ಚ ಮಾಡುವ ಪೌರಕಾರ್ಮಿಕರ ನಿಶ್ವಾರ್ಥ ಸೇವೆ ಗುರುತಿಸಿ. ಪೌರಕಾರ್ಮಿಕರು ಹಸಿವಿನಿಂದ ಬಳಲಬಾರದೆಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಆಶಾ ಟೆಕ್ಸ್ ಟೈಲ್ಸ್ ಮಾಲಿಕರುಗಳಾದ ಅಬ್ದುಲ್ ಮುನಾಫ್, ರಿಯಾಜ ಪಿರಜಾದೆ, ಇಮ್ತಿಯಾಜ್ ಪಿರಜಾದೆ, ಇವರು ಕೊಣ್ಣೂರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ, ಚಾಲಕರಿಗೆ, ನೀರು ಸರಬರಾಜುದವರಿಗೆ ಹಾಗೂ ಕಂಪ್ಯೂಟರ ಆಪರೇಟರಗಳಿಗೆ ಸುಮಾರು 40 ದಿನಶಿ ಕಿಟ್ ವಿತರಿಸಿದರು. …
Read More »ಬೆಳಗಾವಿಯಲ್ಲಿ ವಾರದ ಕೊನೆಯ 2 ದಿನ ಸಂಪೂರ್ಣ ಲಾಕ್ ಡೌನ್; ಡಿಸಿ ಆದೇಶ
ಬೆಳಗಾವಿ: ಕೊರೊನಾ ನಿಯಂತ್ರಣ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲೆಯಲ್ಲಿ ಜೂ.12 ರಿಂದ ಜೂ.14 ರ ಬೆಳಗ್ಗೆ 6:00 ಗಂಟೆಯ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ಜೂ. 12ರ ಬೆಳಿಗ್ಗೆ 6 ಗಂಟೆಯಿಂದ 14 ರ ಬೆಳಿಗ್ಗೆ 6 ಗಂಟೆಯವರೆಗೆ ಎರಡು ದಿನಗಳವೆರೆಗ ಜಿಲ್ಲೆಯಾಧ್ಯಂತ ಸಂಪೂರ್ಣ ಲಾಕ್ ಡೌನ್ ಇರಲಿದೆ. ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ವೀಕೆಂಡ್ ನಲ್ಲಿ ಸಂಪೂರ್ಣ …
Read More »ತುಮ್ಮರಗುದ್ದಿ ಬಳಿ ಎಸ್ಟಿಪಿ ಘಟಕ ನಿರ್ಮಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹ
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ ಚರ್ಚೆ; ಜಿಲ್ಲಾಡಳಿತದ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಣೆ ಬೆಳಗಾವಿ: “ಬಳ್ಳಾರಿ ನಾಲಾದ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ತುಮ್ಮರಗುದ್ದಿ ಬಳಿ ಎಸ್ಟಿಪಿ ಘಟಕ ನಿರ್ಮಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಆಗ್ರಹಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ ಅವರು, “ಈಗಾಗಲೇ ಹಲಗಾ ಬಳಿ ಎಸ್ಟಿಪಿ ಘಟಕ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.
ಗೋಕಾಕ: ಕೊರೋನಾ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಹಾಯ ಹಸ್ತ ನೀಡುವುದರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಅವರ ಕಷ್ಟ ನೀಗಿಸುವುದರಲ್ಲಿ ನಿರತರಾಗಿದ್ದಾರೆಂದು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಹೇಳಿದರು. ಸೋಮವಾರದಂದು ನಗರದ ಮುಪ್ಪಯ್ಯನಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯವರು ಹಮ್ಮಿಕೊಂಡ ಗೋಕಾಕ ತಾಲೂಕಿನ ಕೊರೋನಾ ಸಂಕಷ್ಟದಲ್ಲಿರುವ 500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಜನತೆ ಧೈರ್ಯದಿಂದ ಕೊರೋನಾ …
Read More »ಗಾಯಗೊಂಡ ಕಾರ್ಮಿಕನಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಸತೀಶ್ ಜಾರಕಿಹೊಳಿ
ಬೆಳಗಾವಿ: ಅಂದು ದಿನಾಂಕ 28/05/2021. ಮಹಾರಾಷ್ಟ್ರದ ಅಮರಾವತಿಯಿಂದ ಪಾಶ್ಚಾಪೂರದ ಪುರಾತನ ಅಕಾನಿಬಾಷಾ ದರ್ಗಾದ ಜೀರ್ಣೋದ್ಧಾರ ಕೆಲಸಕ್ಕೆ ಮಹಾರಾಷ್ಟ್ರದ ವಿಜಯ್ ಅಸೂಲ್ಕರ್ ಎಂಬ ವ್ಯಕ್ತಿ ಆಗಮಿಸಿದ್ದರು. ಕೆಲಸ ಮುಗಿದ ನಂತರ ವಾಪಸ್ ತಮ್ಮ ಊರಿಗೆ ರೈಲಿನಲ್ಲಿ ತೆರಳುವಾಗ ಆಕಸ್ಮಿಕವಾಗಿ ರೈಲಿನ ಚಕ್ರದಲ್ಲಿ ಕಾಲು ಸಿಕ್ಕಿಕೊಂಡು ಸಾವು-ಬದುಕಿನ ಮಧ್ಯೆ ವ್ಯಕ್ತಿ ಹೋರಾಟ ನಡೆಸುತ್ತಿದ್ದರು. ಈ ವಿಷಯ ಯಮಕನಮರಡಿ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಕಿವಿಗೆ ಬಿದ್ದಿದೆ. ತಕ್ಷಣ ಗಾಯಗೊಂಡ ವ್ಯಕ್ತಿಯನ್ನು …
Read More »ಸಿಎಂ ಪುತ್ರ ವಿಜಯೇಂದ್ರ ದೆಹಲಿಯ ಭೇಟಿ ಬಳಿಕ ಯಡಿಯೂರಪ್ಪ ಸ್ಪೋಟಕ ಹೇಳಿಕೆ
ಸಿಎಂ ಪುತ್ರ ವಿಜಯೇಂದ್ರ ದೆಹಲಿಯ ಭೇಟಿ ಬಳಿಕ ಯಡಿಯೂರಪ್ಪ ರಾಜೀನಾಮೆಯಂತಹ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಕುರಿತಾಗಿ ಚರ್ಚೆ ನಡೆದಿರುವ ಹೊತ್ತಲ್ಲೇ ಸಿಎಂ ಅವರಿಂದ ಇಂತಹ ಹೇಳಿಕೆ ಬಂದಿದೆ. ವಿಜಯೇಂದ್ರ ಮೂಲಕ ಸಿಎಂ ರಾಜೀನಾಮೆಗೆ ವರಿಷ್ಠರ ಸೂಚನೆ ಬಂದಿದೆ. ವರಿಷ್ಠರಿಂದ ರಾಜೀನಾಮೆ ಬಗ್ಗೆ ಸಂದೇಶ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ ಎಂದೆಲ್ಲ ಚರ್ಚೆಯಾಗ್ತಿದೆ. ಪುತ್ರ ವಿಜಯೇಂದ್ರ ಅವರ ಮೂಲಕ …
Read More »ಜೂನ, ಅಂತ್ಯದ ವರೆಗೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ರಮೇಶ ಜಾರಕಿಹೊಳಿ!!
ಗೋಕಾಕ: ರಾಜ್ಯದಲ್ಲಿ ಜಾರಿಯಲ್ಲಿರುವ ಸೆಮಿ ಲಾಕಡೌನ ತೆರವುವಾದರೂ ಸಹ ಜೂನ, ಅಂತ್ಯದ ವರೆಗೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೋಳಿ ಎಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರದಂದು ನಗರ ತಮ್ಮ ಕಛೇರಿಯಲ್ಲಿ ಕರೆದಿದ್ದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಸಹ ಲಾಕಡೌನ ತೆರವುಗೊಂಡ ನಂತರ ಸರ‍್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ ಹಾಕದೆ ಸಾಮಾಜಿಕ ಅಂತರ …
Read More »ಪೋಲಿಸ್ ಸಿಬ್ಬಂದಿಯ ಅಮಾನತು ರದ್ದುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ.
ಗೋಕಾಕ :ಕಳೆದ ಮಾರ್ಚ್ ತಿಂಗಳಲ್ಲಿ ಬೆಳಗಾವಿಯ ರಾಮಕಿಂಡ ಗಲ್ಲಿಯಲ್ಲಿ ಎಂ ಈ ಎಸ್ ಪುಂಡರು ಕನ್ನಡ ವಿರೋಧಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಪುಂಡಾಟ ನಡೆಸಿದ್ದರು ಆ ಪ್ರತಿಭಟನೆಯ ಫೋಟೋ ವನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಕನ್ನಡ ಹಾಗೂ ಮರಾಠಿ ಬಾಂಧವರ ಮಧ್ಯೆ ವೈಷಮ್ಯ ಸೃಷ್ಟಿಸಲು ಪೋಸ್ಟನ್ನು ಮಾಡಿದ್ದರು ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಕ್ಷಣ ಎಚ್ಚೆತ್ತ ಗ್ರಾಮೀಣ ಠಾಣೆಯ ಪೊಲೀಸರು ಎಂಇಎಸ್ ಪುಂಡರಾದ …
Read More »ಮಕ್ಕಳ ಮನೆಗೆ ಹಾಲಿನ ಪುಡಿ. ಸಿಎಂ ಯಡಿಯೂರಪ್ಪನವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಸಲ್ಲಿಕೆ.
ಬೆಂಗಳೂರು : ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ರಾತ್ರಿ ಮುಖ್ಯಮಂತ್ರಿಗಳ ಗೃಹ ಕಛೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳ ಮನೆಗೆ …
Read More »