Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ಸಿಎಂ ಹುದ್ದೆಗೆ ಏರೋದಕ್ಕೆ ಲಾಭಿ ಆರಂಭ! ಈ ರೇಸ್ ನಲ್ಲಿ ಯಾರ ಇದ್ದಾರೆ ನೋಡಿ.

ಬೆಂಗಳೂರು : ರಾಜ್ಯದಲ್ಲಿ ಜುಲೈ.26ರ ಲೆಕ್ಕಾಚಾರ ಗರಿಗೆದರಿದೆ. ಸಿಎಂ ಬದಲಾವಣೆ ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಎಂ ಹುದ್ದೆಗೆ ಏರೋದಕ್ಕೆ ಲಾಭಿ ಆರಂಭಗೊಂಡಿದ್ದು, ಈ ರೇಸ್ ನಲ್ಲಿ ಬಿಜೆಪಿಯ ಹಾಲಿ ಸಚಿವರು, ಶಾಸಕರು ತೆರೆ ಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ. ಅದರಲ್ಲೂ ಲಿಂಗಾಯತ ಸಮುದಾಯದ ಅನೇಕ ಹೆಸರುಗಳು ಸಿಎಂ ಪಟ್ಟದ ರೇಸ್ ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಯ ಪ್ರವಾಸದಲ್ಲಿ ಅನಾರೋಗ್ಯದ ನೆಪದಿಂದಾಗಿ ತಮ್ಮ …

Read More »

ವಿರೋಧಿಗಳಿಗೆ ಮುಖ್ಯಮಂತ್ರಿ ಟಕ್ಕರ್! ಬಿಎಸ್​ವೈಗೆ ಎರಡು ಟಾಸ್ಕ್​ ಕೊಟ್ಟ ಹೈಕಮಾಂಡ್.

ಯಾವಾಗ ಸಿಎಂ ಬಿ. ಎಸ್​. ಯಡಿಯೂರಪ್ಪ ದೆಹಲಿಗೆ ಹೋದರೋ, ಆಗಿನಿಂದಲೂ ರಾಜ್ಯದಲ್ಲಿ ಎದ್ದ ಗಾಳಿ ಸುದ್ದಿ ಅಂದರೆ, ಬಿಎಸ್​ವೈ ರಾಜೀನಾಮೆ ನೀಡಲಿದ್ದಾರೆ ಎಂಬುದು. ಮೊದಲೇ ಕೆಲವು ತಿಂಗಳಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬದಲಾವಣೆ ಬಗ್ಗೆ ವಿರೋಧಿಗಳು ಪದೇಪದೆ ಹೇಳಿಕೆ ಕೊಡುತ್ತಿರುವುದಕ್ಕೂ, ಬಿಎಸ್​ವೈ ದೆಹಲಿಗೆ ಹಾರಿದ್ದಕ್ಕೂ ತಾಳೆ ಆಗುವಂತೆ ಅಂತೆ-ಕಂತೆ ಜೋರಾಗಿದ್ದ ಬೆನ್ನಲ್ಲೇ ಸಿಎಂ ಇದೀಗ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದಲ್ಲದೆ, ದೆಹಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ತಮ್ಮ ವಿರೋಧಿಗಳಿಗೆ ಠಕ್ಕರ್ ಕೂಡ ಕೊಟ್ಟಿದ್ದಾರೆ. ದೆಹಲಿಗೆ …

Read More »

ರಸ್ತೆ ದಿಢೀರ ಕುಸಿತ, ಹೊಂಡ ಸೇರಿದ ಕಾರು!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯಾರ್ಭಟ ಜೋರಾಗಿದ್ದು, ದ್ವಾರಕಾ ಸೆಕ್ಟರ್​ನಲ್ಲಿ ಕಾರ್​ವೊಂದು ದಿಢೀರ್​ ಆಗಿ ಕುಸಿದು ಬಿದ್ದಿರುವ ಘಟನೆ ನಡೆಯಿತು. ದ್ವಾರಕಾ ಸೆಕ್ಟರ್​​-18ರಲ್ಲಿ ರಸ್ತೆ ಮೇಲೆ ಚಲಿಸುತ್ತಿದ್ದ ವಾಹನವೊಂದು ರಸ್ತೆ ಕುಸಿತದಿಂದ ದಿಢೀರ್​ ಆಗಿ ಭೂಮಿಯೊಳಗೆ ಸಿಲುಕಿಕೊಂಡಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಕಾರು ಮೇಲೆತ್ತಲಾಗಿದೆ. ಹೀಗಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪೊಲೀಸ್ ಕಾನ್ಸ್​​ಸ್ಟೇಬಲ್ ವಾಹನ ಚಲಾವಣೆ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ …

Read More »

ಬೆಳಗಾವಿಯ ಬಿಜೆಪಿ ಗೌಪ್ಯ ಸಭೆಯಲ್ಲಿ ನಡಿತಾ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ?

ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಆಡಳಿತಾರೂಢ ಬಿಜೆಪಿ ಪ್ರಮುಖರ ಸಭೆ ಇಲ್ಲಿ ಸೋಮವಾರ ಜರುಗಿದೆ. ಬೆಳಗಾವಿ ಹಾಗೂ ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆ ಗೌಪ್ಯವಾಗಿ ನಡೆದಿರುವುದು ಹಲವು ವಿಶ್ಲೇಷಣೆಗೆ ಮತ್ತು ಚರ್ಚೆಗಳಿಗೆ ಗ್ರಾಸವಾಗಿದೆ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್ ನೇತೃತ್ವದಲ್ಲಿ ನಡೆದ ಚರ್ಚೆಯಲ್ಲಿ ಸಚಿವ ಉಮೇಶ ಕತ್ತಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಮಹೇಶ ಕುಮಠಳ್ಳಿ, ದುರ್ಯೋಧನ ಐಹೊಳೆ, …

Read More »

ಶೀಘ್ರವೇ ಗೋಕಾಕ-ಮೂಡಲಗಿಯಲ್ಲಿ ಹಾಲು ಶಿಥಿಲೀಕರಣ ಘಟಕಗಳು ಆರಂಭ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವ ರೈತ ಕಲ್ಯಾಣ ಸಂಘದ ಸದಸ್ಯರುಗಳ ೧೬ ವಾರಸುದಾರರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ತಲಾ ೧೦ ಸಾವಿರ ರೂ.ಗಳ ಸಹಾಯಧನದ ಚೆಕ್‌ಗಳನ್ನು ವಿತರಿಸಿದರು. ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ ೧೬ ಜನರು ಮೃತಪಟ್ಟಿದ್ದರಿಂದ ಅವರ ಕುಟುಂಬಗಳ ವಾರಸುದಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಚೆಕ್‌ಗಳನ್ನು ವಿತರಿಸಿದರು. ಜೊತೆಗೆ ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಬ್ಬಂದಿಯೋರ್ವ ನಿವೃತ್ತಿಯಾದ …

Read More »

ಎಟಿಎಂನಿಂದ ಹಣ ದೋಚಲು ಬಂದ ಖದೀಮರ ಗ್ಯಾಂಗ್​​!

ಶಿವಮೊಗ್ಗ:ಖದೀಮರ ಗ್ಯಾಂಗ್​​ ಎಟಿಎಂನಿಂದ ಹಣ ದೋಚಲು ಯತ್ನಿಸಿರುವ ಘಟನೆ ಜಿಲ್ಲೆಯ ಬಿ.ಹೆಚ್ ರಸ್ತೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿ.ಹೆಚ್ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್​ಗೆ ಸಂಬಂಧಪಟ್ಟ ಎಟಿಎಂಗೆ ನುಗ್ಗಿದ ಖದೀಮರು, ಮಿಷನ್​ನ್ನ ಸಂಪೂರ್ಣವಾಗಿ ಮುರಿದು ಹಾಕಿದ್ದಾರೆ. ಬಳಿಕ ಹಣ ಬಾರದೇ ಕೃತ್ಯ ಅರ್ಧಕ್ಕೆ ಕೈ ಬಿಟ್ಟು ಪರಾರಿಯಾಗಿದ್ದಾರೆ. ನಗರದ ದೊಡ್ಡಪೇಟೆ ಠಾಣೆ ಪೊಲಿಸರಿಂದ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ …

Read More »

ಜುಲೈ 30ರ ಬಳಿಕ‌ ಗಡ್ಡದ ಮಹಿಮೆ ರಾಜ್ಯಕ್ಕೆ ತಿಳಿಯಲಿದೆ ಬಸನಗೌಡ ಪಾಟೀಲ ಯತ್ನಾಳ ಅಚ್ಚರಿ ಹೇಳಿಕೆ.

ವಿಜಯಪುರ: ಮುಖ್ಯಮಂತ್ರಿ, ಸಚಿವರ ಬದಲಾವಣೆ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿರುವ ಆಡಿಯೊ ಲೀಕ್ ಪ್ರಕರಣ ಕುರಿತು ತನಿಖೆಯಾಗಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಆಪ್ತರಾಗಿರುವವರು ಸಿಸಿಬಿಯಲ್ಲಿದ್ದಾರೆ. ಹೀಗಾಗಿ ಎಲ್ಲವೂ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದರು. ಖಾಸಗಿಯಾಗಿ ಮಾತನಾಡಿದ್ದನ್ನ ರೆಕಾರ್ಡ್ ಮಾಡಿಕೊಳ್ಳೊದು …

Read More »

ನಾಳೆ ಸಂಜೆ 4.30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

ಬೆಂಗಳೂರು : ನಾಳೆ ಸಂಜೆ 4.30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ನಾಳೆ ಸಂಜೆ 4.30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ನಾಳೆ ಸಂಜೆ 4.30 ಕ್ಕೆ ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ ನಿರ್ಧಾರ …

Read More »

ಸಿಎಂ ಸೀಟ್ ಖಾಲಿ ಆದ್ರೆ ಮುಂದಿನ ಸಿಎಂ ನಾನೇ,ಮುಖ್ಯಮಂತ್ರಿ ಸ್ಥಾನಕ್ಕೆ ಕತ್ತಿ ಮತ್ತೆ ವರಸೆ.

ಬೆಳಗಾವಿ: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಸಚಿವ ಉಮೇಶ್​ ಕತ್ತಿ, ಇದೀಗ ಮತ್ತೊಮ್ಮೆ ಅದೇ ಆಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಪುನಃ ಚರ್ಚೆ ಆಗಲಾರಂಭಿಸಿರುವ ಬೆನ್ನಿಗೇ ಅವರು ತಮ್ಮ ಆಸೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದ ಸಂದರ್ಭದಲ್ಲಿ ಮಾತನಾಡಿರುವ ಆಹಾರ ಸಚಿವ ಉಮೇಶ್​ ಕತ್ತಿ, ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ, …

Read More »

ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಗೂಟಕ್ಕೆ ಅಂಟಿಕೊಂಡಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ ಗರಂ.

ಶಿವಮೊಗ್ಗ; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ನನ್ನನ್ನು ಯಾರೂ ಏನೂ ಮಾಡಲು ಆಗದು, ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವನು ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ನನ್ನ ವಿರುದ್ಧ ಷಡ್ಯಂತ್ರ ನಡೆದರೂ ತಲೆ ಕೆಡಿಸಿಕೊಳ್ಳಲ್ಲಾ, ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಗೂಟಕ್ಕೆ ಅಂಟಿಕೊಂಡಿಲ್ಲ ಎಂದು ಗರಂ ಆಗಿದ್ದಾರೆ. ನನಗೆ ನಮ್ಮ ಪಕ್ಷದ …

Read More »