Breaking News

cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

“ಮಾತಾಡ್ ಮಾತಾಡ್ ಕನ್ನಡ” ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಕರೆ.

ಗೋಕಾಕ: ವಲಯದ ಹಾಗೂ ನಗರದ ಸಾರ್ವಜನಿಕ ಬಂಧುಗಳಿಗೆ ತಿಳಿಸುದೇನೆಂದರೆ ಬರುವ 01 ನವ್ಹೆಂಬರ 2021 ರ ಕರ್ನಾಟಕ ರಾಜ್ಯೋತ್ಸವನ್ನು ಸರಕಾರ ಸೂಚಿಸಿದಂತೆ ಅತಿ ವಿಜೃಂಭಣೆಯಿಂದ ಹಾಗೂ ನಿಯಮಾನುಸಾರ ಆಚರಿಸುವ ನಿಟ್ಟಿನಲ್ಲಿ “ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮವನ್ನು 31/10/2021 ರಂದು ಮುಂಜಾನೆ 10:00 ಘಂಟೆಯಿಂದ ನಗರದ ಸಮುದಾಯ ಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಮಹಿಳೆಯರು …

Read More »

ಮತದಾರರು ಹಣದ ಆಮಿಷಕ್ಕೆ ಮರುಳಾಗದೇ, ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಹಾನಗಲ್: ಬಿಜೆಪಿಯವರು ನೀಡುತ್ತಿರುವ ಹಣ ಒಂದು ದಿನದ ಖರ್ಚಿಗೆ ಮಾತ್ರ ಸಾಲುತ್ತದೆ. ಹೀಗಾಗಿ, ಹಣ ಹಾಗೂ ಇನ್ನಿತರ ಆಮಿಷಗಳಿಗೆ ಮತದಾರರು ಮರುಳಾಗದೇ ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನವಿ ಮಾಡಿದರು. ಮತಕ್ಷೇತ್ರದ ಮತ್ತಂಗ, ಸಮ್ಮಸಗಿ ಸೇರಿ ವಿವಿಧ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಇಂದು ಪ್ರಚಾರ ನಡೆಸಿ ಅವರು ಮಾತನಾಡಿದರು. ದೇಶದ ಜನರು …

Read More »

ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದು ಬಿಜೆಪಿಯ ಯೋಜನೆಯಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ

ಹಾನಗಲ್: ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದು ಬಿಜೆಪಿಯ ಯೋಜನೆಯಾಗಿದೆ. ಹೀಗಾಗಿಯೇ, ಸರ್ಕಾರ ನಿರಂತರವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಸಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಮತಕ್ಷೇತ್ರದ ಅಕ್ಕಿಆಲೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಸಾಪುರ ಹಾಗೂ ವೀರಾಪುರ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಆದರೂ …

Read More »

ಬಿಜೆಪಿ ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಾಗಿ ಲಕ್ಷ್ಮಣ ತಪಸಿ ನೇಮಕ!

ಗೋಕಾಕ: ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಲಕ್ಷ್ಮಣ ತಪಸಿ ಅವರನ್ನು ನೇಮಕಗೊಳಿಸಿದ್ದಾರೆ. ನಗರದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮಣ ತಪಸಿ ಅವರನ್ನ ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಅಧ್ಯಕ್ಷರಾದ ಡಾ॥ ಕೆ ಲಕ್ಷ್ಮಣ ಅವರು ಆದೇಶ ಹೊರಡಿಸಿದ್ದಾರೆ. ತಮ್ಮನ್ನು ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೆಂದು ನೇಮಕಾತಿ ಆಗಿರುವುದಕ್ಕೆ ಹಾರ್ದಿಕ ಅಭಿನಂದನೆಗಳು. ತಾವು ಪಕ್ಷವನ್ನು …

Read More »

ಜನಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಹಾನಗಲ್: ಜನಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆಯಲ್ಲಿ ಮತದಾರರು ಆಶೀರ್ವಾದ ಮಾಡಬೇಕು ಎಂದು  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಹಾನಗಲ್ ಮತಕ್ಷೇತ್ರದ ಅಕ್ಕಿ ಆಲೂರು ಜಿಪಂ ವ್ಯಾಪ್ತಿಯ ಸುರಳಸವರ ಗ್ರಾಮದಲ್ಲಿ ಉಪಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಜನರು ಮತ ನೀಡಿ ಬಹುಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.   ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ …

Read More »

ಡೋರ ಸಮಾಜದ ಚರ್ಮಗಾರಿಕೆ ವೃತ್ತಿಯಲ್ಲಿ ತೋಡಗಿಸಿಕೊಂಡವರಿಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರ ವಿತರಣೆ!

ಗೋಕಾಕ: ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಡೋರ ಸಮಾಜದಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೋಡಗಿಸಿಕೊಂಡವರಿಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಖಿಲ ಕರ್ನಾಟಕ ಡೋರ ಸಮಾಜದ ವತಿಯಿಂದ ರಾಜ್ಯ ಅಧ್ಯಕ್ಷರಾದ ಸಂತೋಷ ಸವಣೂರ ಇವರ ನೇತೃತ್ವದಲ್ಲಿ ಸಮಾಜ ಸಂಘಟನೆಗಾಗಿ 3 ಜಿಲ್ಲೆ ಪ್ರವಾಸವನ್ನು ಹಮ್ಮಿಕೊಂಡಿದ್ದು ಅದೇ ರೀತಿಯಲ್ಲಿ ಇಂದು ಗೋಕಾಕ ತಾಲೂಕಿಗೆ ಆಗಮಿಸಿದರು. ಡೋರ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀಮತಿ ತಾಯವ್ವ ಸೋನುನಿ ಇವರ ನೇತೃತ್ವದಲ್ಲಿ ಡಾ ಬಾಬು …

Read More »

*ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯ*

ಗೋಕಾಕ:  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಅಭಿಮಾನ ಕಾರ್ಯಕ್ರಮವನ್ನು  ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಭಾನುವಾರ ನಡೆಸಲಾಯಿತು. ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು, ಎರಡನೇ ವಾರ ಬಸ್ ನಿಲ್ದಾಣವನ್ನು ಆಯ್ಕೆ ಮಾಡಿ ಸ್ವಚ್ಛತೆಗೊಳ್ಳಿಸಲಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ತೆರಳುವ ಬಸ್ ನಿಲ್ದಾಣ ಸ್ವಚ್ಛತೆ ಸಮಸ್ಯೆಯಿಂದ ಕೂಡಿತ್ತು. ಹಾಗಾಗಿ ಇಂದು ಬಸ್ ನಿಲ್ದಾಣದ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರವೂ …

Read More »

ಹಾನಗಲ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರಿಂದ ಭರ್ಜರಿ ಪ್ರಚಾರ

ಹಾನಗಲ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಇಂದು ಮತಬೇಟೆ ನಡೆಸಿದರು. ಮತಕ್ಷೇತ್ರದ ತಿಳವಳ್ಳಿ, ಸೋಮಸಾಗರ, ಕೂಸನೂರ ಗ್ರಾಮಗಳಲ್ಲಿ ಸತೀಶ ಅವರು ನೂರಾರು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು. ತಿಳವಳ್ಳಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು ಯೋಗ್ಯ ಅಭ್ಯರ್ಥಿಯಾಗಿದ್ದು, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಹೀಗಾಗಿ, ಮತದಾರರು ಈ ಬಾರಿ ಮಾನೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ …

Read More »

ಒಂದೇ ಕುಟುಂಬದ ಐವರ ದಾರುಣ ಸಾವು: ತೀವ್ರ ಶೋಕ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಜಿ ಯೋಧನೊಬ್ಬ ತನ್ನ ನಾಲ್ವರು ಮಕ್ಕಳಿಗೆ ವಿಷ ನೀಡಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ಇವರು ನಾಲ್ಕು ಮಕ್ಕಳಿಗೆ ವಿಷ ಪ್ರಾಶನ ಮಾಡಿ ತಾನೂ ದಾರುಣವಾಗಿ ಸಾವಿಗೀಡಾಗಿರುವುದು ಅತ್ಯಂತ ದುಃಖಕರ ಸಂಗತಿ. ಇಂತಹ ದುಡುಕಿನ ನಿರ್ಧಾರವನ್ನು ಅವರು ಕೈಗೊಳ್ಳಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. …

Read More »

ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು:ಪವನ ಮಹಾಲಿಂಗಪುರ

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದಂದು ಅದ್ಧೂರಿ ಆಚರಣೆಗೆ ಅವಕಾಶ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ, ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷ ಪವನ ಹು ಮಹಾಲಿಂಗಪುರ ಅವರು ಆಗ್ರಹಿಸಿದ್ದಾರೆ. ಎಲ್ಲ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದೆ. ಚುನಾವಣೆಗಳನ್ನೂ ನಡೆಸಲಾಗುತ್ತಿದೆ. ಆದರೆ, ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸರಕಾರ ಹೇಳುತ್ತಿರುವುದು ಸಮಂಜಸವಲ್ಲ.ಗಡಿನಾಡಿನಲ್ಲಿ ಕನ್ನಡಿಗರ ಸ್ವಾಭಿಮಾನದ ಹಬ್ಬವನ್ನು ವಿಜೃಂಭಣೆಯಿಂದ ನಡೆಸಲು ಅನುವು ಮಾಡಿಕೊಡಬೇಕು. ಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಬೃಹತ್ …

Read More »