ಗೋಕಾಕ: ತಾಲೂಕಿನ ಗಣೇಶವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನಾಡಿನ ಮಹಾನ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿ ಅನೇಕರು ದೇಶಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ …
Read More »ಫೇಸ್ ಬುಕ್, ವಾಟ್ಸಾಪ್ ಸೇವೆ ಸರಿಯಾಗಿದ್ದು, ಬಳಕೆದಾರರು ನಿಟ್ಟುಸಿರು!
ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ಅಡಚಣೆಯಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ. ರಾತ್ರಿ 9 -10 ಗಂಟೆ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಬಳಕೆದಾರರು ತಮಗೆ ಆದ ತೊಂದರೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೊಸ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಾದ …
Read More »22 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ರಾಹುಲ್ ಜಾರಕಿಹೊಳಿ ಚಾಲನೆ
ಬೆಳಗಾವಿ: ಯಮಕನಮರಡಿ ಮತ ಕ್ಷೇತ್ರ ಹುದಲಿ ಜಿಪಂ. ವ್ಯಾಪ್ತಿಯ ಬುಡ್ರ್ಯಾನೂರು ಗ್ರಾಮದಲ್ಲಿ ಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾನ ಮತ್ತು ಸಮುದಾಯಭವನವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಶುಕ್ರವಾರ ಉದ್ಘಾಟಿಸಿದರು. ಸತೀಶ ಜಾರಕಿಹೊಳಿ ಅವರ, ಶಾಸಕರ ವಿಶೇಷ ಅನುದಾನದಡಿಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಅಭಿವೃದ್ಧಿ ಕಾಮಗಾರಿ ಮತ್ತು ಹಳ್ಳೂರು, ಕರವಿನಕುಪ್ಪಿ ಇವೆರಡು ಗ್ರಾಮಕ್ಕೆ 6 ಲಕ್ಷ ರೂ. ಅನುದಾನದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. …
Read More »ದಿ.ಪ್ರಕಾಶ ಬಾಗೇವಾಡಿ ಪುಣ್ಯಸ್ಮರಣೆಯಲ್ಲಿ ರಾಹುಲ್ ಜಾರಕಿಹೊಳಿ ಭಾಗಿ
ಗೋಕಾಕ: ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ತೋಟದಲ್ಲಿ ಇಂದು ಸಮಾಜಸೇವಕ ಹಾಗೂ ದುರೀಣರಾಗಿದ್ದ ದಿ.ಪ್ರಕಾಶ ಭೀಮಪ್ಪ ಬಾಗೇವಾಡಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ದಿ.ಪ್ರಕಾಶ ಬಾಗೇವಾಡಿ ಅವರ ನೂತನ ಮೂರ್ತಿಯನ್ನು ಉದ್ಘಾಟಿಸಿದರು. ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಗೋಕಾಕ ಶಾಮಾನಂದ ಆಶ್ರಮದ ಅತ್ಯಾನಂದ ಸ್ವಾಮೀಜಿ, ದೇವರಹುಬ್ಬಳ್ಳಿ ಸಿದ್ದಾಶ್ರಮದ ಸಿದ್ದಶಿವಯೋಗಿಗಳು, ಸುಣಧೋಳಿ …
Read More »ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಸೌಂದರ್ಯೀಕರಣಕ್ಕೆ ಶ್ರಮಿಸುತ್ತಿದ್ದು, ನಾವೆಲ್ಲರೂ ಈ ಕಾರ್ಯವನ್ನು ಬೆಂಬಲಿಸೋಣ : ಬಸವರಾಜ ದೇಶನೂರ
ಗೋಕಾಕ ಸೆ, 29 ;- ನಗರಸಭೆಯಿಂದ “ಸ್ವಚ್ಛ ಭಾರತ ಮಿಷಣ್’ ಯೋಜನೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ವಾರ್ಡ ನಂ. 29 ರಲ್ಲಿ ಬುಧವಾರದಂದು “ಕಸ ವಿಂಗಡನೆ ಅಮೃತ ದಿನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ ಅವರು ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ನಗರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಜನತೆಯು ನಗರಸಭೆಯವರು ತಿಳಿಸಿದಂತೆ ಒಣಕಸ, ಹಸಿಕಸ ಹಾಗೂ ಹಾನಿಕಾರಕ ಕಸವನ್ನು ಪ್ರತ್ಯೇಕಿಸಿ ನಗರಸಭೆಯ …
Read More »ಪ್ರವಾಹದಿಂದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಗೋಕಾಕ : ‘ ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಭಾನುವಾರ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ ಅವರು, …
Read More »ಮೃತ ಕಲಾವಿದನ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಗೋಕಾಕ: ಕಳೆದ ತಿಂಗಳು ಅಪಘಾತಕ್ಕೀಡಾಗಿ ಮೃತಪಟ್ಟ ಗೋಕಾಕ ಕಲಾವಿದ ಶಿವಾನಂದ ಪೂಜೇರಿ ಅವರ ಚಿಕಿತ್ಸೆಗಾಗಿ ತಗುಲಿದ್ದ ಆಸ್ಪತ್ರೆಯ ವೆಚ್ಚವನ್ನು ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಅವರು ನೀಡಿದರು. ಅಪಘಾತಕ್ಕೀಡಾದಾಗ ಅವರನ್ನು ಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದರು. ಇವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಹುಲ್ ಜಾರಕಿಹೊಳಿ ಅವರು ಇಂದು ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ.ಗಂಗಾಧರ ಉಮರಾಣಿ, ಮುಖಂಡರಾದ ರಿಯಾಜ್ ಚೌಗಲಾ, ಶಂಕರ ಉಮರಾಣಿ, ಶಿವು ಅವರ ಸಹೋದರ …
Read More »“ನಾಳೆ ಭಾರತ ಬಂದ್” ಎಂದಿನಂತೆ ಬಸ್ ಸಂಚಾರ!
ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಸಂಚರಿಸಲಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್ಟಿಸಿ ಬಸ್ ಗಳಿಗೆ ಭದ್ರತೆ ಕೋರಿ ಪೊಲೀಸರಿಗೆ ಮನವಿ ಮಾಡಲಾಗಿದೆ. ಕಳಸದ, ಸೋಮವಾರ ರಾಜ್ಯದಲ್ಲಿ ಎಂದಿನಂತೆ ಸಾರಿಗೆ ಬಸ್ ಸಂಚರಿಸಲಿದ್ದು, ಬಸ್ ಮತ್ತು ಸಂಸ್ಥೆಯ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಒದಗಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದರು. ನಗರದಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರಕ್ಕೂ ಯಾವುದೇ …
Read More »ಮಂಜೂರಾಗಿ ರದ್ದಾಗಿದ್ದ ಪ್ರೌಢ ಶಾಲೆಯನ್ನು ಒಗ್ಗಟ್ಟಿನಿಂದ ಮರಳಿ ಪಡೆದ ತಿಗಡಿ ಗ್ರಾಮಸ್ಥರು : ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ
ಮೂಡಲಗಿ : ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಮಂಜೂರಾಗಿ, ರದ್ದಾಗಿದ್ದ ಸರ್ಕಾರಿ ಪ್ರೌಢ ಶಾಲೆಯನ್ನು ಮರಳಿ ಮಂಜೂರಾತಿ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ತಿಗಡಿ ಗ್ರಾಮಸ್ಥರನ್ನು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು. ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ …
Read More »ಶಾಸಕ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಂ. ದೀನದಯಾಳ ಉಪಾಧ್ಯಾಯವರ ಜನ್ಮ ದಿನಾಚರಣೆ!
ಗೋಕಾಕ: ಶಾಸಕರ ಬಿಜೆಪಿ ಗೃಹ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಪಂಡಿತ ದಿನದಯಾಳ ಉಪಾಧ್ಯಾಯರವರ 105 ನೆ ಜನ್ಮ ದಿನವನ್ನು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ತನುಮನದಿಂದ ಹಗಲಿರುಳು ದುಡಿದು ಬೆಜೆಪಿ ಪಕ್ಷ ಬೆಳೆಸಿ,ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನಗರ ಮತ್ತು ಗ್ರಾಮೀಣ …
Read More »