ಗೋಕಾಕ: ಹಿರಿಯ ರಾಜಕೀಯ ಧುರೀಣ, ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷರಾದ ಅಶೋಕ ನಿಂಗಯ್ಯಸ್ವಾಮಿ ಪೂಜಾರಿ ಅವರು ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪ್ರವಾಹದಿಂದ ಹಾನಿಯಾದ ಲೊಳಸುರ ಸೇತುವೆ ಹಾಗೂ ಗೋಕಾಕ ಜಲಪಾತಕ್ಕೆ ಹೋಗುವ ಚಿಕ್ಕಹೋಳಿ ಸೇತುವಗಳ ವಾಸ್ತವ್ಯ ಪರಿಸ್ಥಿತಿಯನ್ನು ವಿಕ್ಷಿಸಿದರು ,
ಈ ಸಂದರ್ಭದಲ್ಲಿ ಲೋಳಸುರ ಸೇತುವೆ ಹಾನಿಗೊಳಗಾದ ವ್ಯವಸ್ಥೆಯನ್ನು ಸರಿಪಡಿಸಲು ಸ್ಥಳ ಪರಿಶೀಲನೆಗೆ ಆಗಮಿಸಿದ್ದ., ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ವಿ. ಎನ್ ಪಾಟೀಲ
ಕಾರ್ಯನಿರ್ವಾಹಕ ಅಭಿಯಂತರರು ಚಿಕ್ಕೋಡಿ , ಪವಾರ್ ಅಧೀಕ್ಷಕ ಅಭಿಯಂತರರು ಬೆಳಗಾವಿ , ನಾಗಾಭರಣ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗೋಕಾಕ ಅವರಿಂದ ಸೇತುವೆ ರೀಪೇರಿ ಕುರಿತಾದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು ಶೀಘ್ರ ರೀಪೇರಿಗೆ ಆಗ್ರಹಿಸಿದರು.