ಗೋಕಾಕ: ಕೊರೊನಾ ಸಮಯದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಜನರ ಆರೋಗ್ಯವನ್ನು ಕಾಪಾಡುವಗೊಸ್ಕರ ಮಳೆ,ಬಿಸಿಲು,ಚಳಿ ಎನ್ನದೆ ಪಟ್ಟಣವನ್ನು ಸ್ವಚ್ಚ ಮಾಡುವ ಪೌರಕಾರ್ಮಿಕರ ನಿಶ್ವಾರ್ಥ ಸೇವೆ ಗುರುತಿಸಿ.
ಪೌರಕಾರ್ಮಿಕರು ಹಸಿವಿನಿಂದ ಬಳಲಬಾರದೆಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಆಶಾ ಟೆಕ್ಸ್ ಟೈಲ್ಸ್ ಮಾಲಿಕರುಗಳಾದ ಅಬ್ದುಲ್ ಮುನಾಫ್, ರಿಯಾಜ ಪಿರಜಾದೆ,
ಇಮ್ತಿಯಾಜ್ ಪಿರಜಾದೆ, ಇವರು ಕೊಣ್ಣೂರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ, ಚಾಲಕರಿಗೆ, ನೀರು ಸರಬರಾಜುದವರಿಗೆ ಹಾಗೂ ಕಂಪ್ಯೂಟರ ಆಪರೇಟರಗಳಿಗೆ ಸುಮಾರು 40 ದಿನಶಿ ಕಿಟ್ ವಿತರಿಸಿದರು.
ಈ ಸಮಯದಲ್ಲಿ ಆಶಾ ಟೆಕ್ಸ್ ಟೈಲ್ಸ್ ಮಾಲಿಕರಾದ ಇಮ್ತಿಯಾಜ್ ಪಿರಜಾದೆ ಮಾತನಾಡಿ ಪೌರಕಾರ್ಮಿಕರು ಮಾಡುತ್ತಿರುವ ಸೇವೆ ನಿಜವಾಗಿಯೂ ಶ್ಲ್ಯಾಘನೀಯ, ಅದರ ಜೊತೆಯಲ್ಲಿ ಸ್ವಚ್ಚತೆಗಾಗಿ ಸಾರ್ವಜನಿಕರು ಪೌರಕಾರ್ಮಿಕರನ್ನೆ ಅವಲಂಬಿಸದೆ ತಮ್ಮಮನೆಯ ಸುತ್ತ ಮುತ್ತ ಸ್ವಚ್ಚತೆ ಕಾಪಾಡಲು ವಿನಂತಿಸಿ,ಪೌರಕಾರ್ಮಿಕರಿಗೆ ಕೊರೊನಾದಿಂದ ರಕ್ಷಿಸಿ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತಿಳಿಸಿ ಧೈರ್ಯ ತುಂಬಿದರು.