ಗೋಕಾಕ: ಕನ್ನಡ ಚಿತ್ರರಂಗದ ಮೇರು ನಟ ಪವರ್ ಸ್ಟಾರ್ ನಮ್ಮಗಲಿ ಒಂದು ತಿಂಗಳಾಗಿದೆ. ಪುನೀತ್ ನೆನಪಿನಲ್ಲಿ ರಾಜ್ಯಾದ್ಯಂತ ವಯಸ್ಸಿನ ಬೇಧವಿಲ್ಲದೆ ಭಾವ ಪೂರ್ಣ ನಮನ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುನೀತ್ ಅನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅದೇ ರೀತಿಯಲ್ಲಿ ಗೋಕಾಕ ನಗರದಲ್ಲಿ ಶಿವು ಪೂಜಾರಿ ಎಂಬ ಯುವಕ ತನ್ನ ಆಟೋ ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಅರಳಿದೆ ಅದಕ್ಕೆ ದೇವರು ಎಂದು ಹೆಸರಿಟ್ಟು ಪುನೀತ್ ನೆನಪನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ.
ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ನೆನಪು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪುನೀತ ಅವರು ಬದುಕಿರುವ ತನಕವೂ ಮಾಡಿದ ಸಮಾಜ ದೇವೆಯೇ ಅವರ ಹೆಸರು ಜನರ ಹೃದಯದಲ್ಲಿ ಅಜರಾಮರವಾಗಿರಲು ಸಾಧ್ಯವಾಗಿದೆ. ಅವರ ಸಮಾಜ ಸೇವೆಗಳ ಅಭಿಮಾನಕ್ಕೆ ಅಭಿಮಾನಿ ಶಿವು ಪೂಜಾರಿ ಆಟೋ ಮೇಲೆ ಅರಳಿದ “ಅಪ್ಪು” ಭಾವಚಿತ್ರ ನಮ್ಮೆಲ್ಲರ ಮಧ್ಯೆ ಅಪ್ಪು ಇನ್ನೂ ಅಜರಾಮರವಾಗಿ ದ್ದಾರೆ.