ಗೋಕಾಕ: ವಿದ್ಯುತ್ ದೀಪ ಮತ್ತು ಕಾಂಕ್ರೇಟ್ ರಸ್ತೆ, ಪೇವರ್ಸ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ಚಾಲನೆ ನೀಡಿದರು.
ನಗರ ಸಭೆ ವತಿಯಿಂದ ಸನ್ 2019-20 ರ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ಹಾಗೂ 14ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ವಿದ್ಯುತ್ ದೀಪ ಮತ್ತು ಕಾಂಕ್ರೇಟ್ ರಸ್ತೆ, ಪೇವರ್ಸ ಕಾಮಗಾರಿಗಳಿಗೆ ಮಂಜೂರಾದ ಒಟ್ಟು ಮೊತ್ತ 22.81 ಲಕ್ಷ ರೂಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಶಾಸಕ ರಮೇಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ನಗರದ ಮುಸ್ಲಿಂ ಮಹದ್ವಿಯಾ ಜಮಾತ ಸ್ಮಶಾನಕ್ಕೆ ಹೆಚ್ಚುವರಿ 25 ಲಕ್ಷಗಳನ್ನು ಬಿಡುಗಡೆ ಮಾಡಿ ನಗರಸಭೆಯಿಂದ ಅಭಿವೃದ್ಧಿ ಪಡೆಸಲಾಗುವುದು ಎಂದು ನಗರ ಸಭೆ ಪೌರಾಯುತ್ತ ಶಿವಾನಂದ ಹಿರೇಮಠ ಹೇಳಿದರು
ಈ ಸಂದರ್ಭದಲ್ಲಿ ನಗರ ಸಭೆ ಸ್ಥಾಯಿ ಸಮಿತಿ ಚೇರಮನರಾದ ಕುತುಬುದ್ದೀನ ಗೋಕಾಕ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ದುರ್ಗಪ್ಪಾ ಶಾಸ್ತ್ರೀಗೊಲ್ಲ, ಬಾಬು ಮುಳಗುಂದ, ವಿಜಯ ಜತ್ತಿ, ಬಸವರಾಜ ದೇಶನೂರ ಹಾಗೂ ಮುಸ್ಲಿಂ ಮಹದ್ವಿಯಾ ಸಾತ ಘರ ಜಮಾತ ಹಿರಿಯರಾದ ಅಲ್ಹಾಜ ಮಹ್ಮದಶರೀಫ ಪಾಜನಿಗರ, ಅಲ್ಹಾಜ ಮಹ್ಮದಶಫೀ ಮತ್ತೆ, ಅಲ್ಹಾಜ ಶರಪುದ್ದೀನ ನರೋ, ಅಲ್ಹಾಜ ರಾಜು ಅಂಡಗಿ, ಮಹ್ಮದಸಾಬ ಪಟೇಲ್,ಸಿಕಂದರ ಬಡೆಘರ ಖಾಜಾಸಾಬ ಮತ್ತೆ, ಮುಸ್ತಾಕಅಹ್ಮದ ಅಂಡಗಿ, ಆರೀಫ್ ಪಾಜನಿಗರ , ಸಿಕಂದರ ಪಾಜನಿಗರ, ಖ್ವಾಜಾ ನರೋ,ಹನೀಪ್ ಅಂಡಗಿ ಹಾಗೂ ಅನೇಕರು ಉಪಸ್ಥಿತರಿದ್ದರು.