ಗೋಕಾಕ : ಕೇಂದ್ರ ಸರ್ಕಾರದ ಕೃಷಿ ಮಸೂದೆ ಜಾರಿಯನ್ನು ಸುಪ್ರೀಂ ಕೋರ್ಟ್ ತಡೆದಿದೆ . ಜತೆಗೆ ಪ್ರತಿಭಟನೆ ಜನಸಾಮಾನ್ಯರ ಹಕ್ಕು ಅದನ್ನು ಮೊಟಕುಗೊಳಿಸಬಾರದು ಎಂದು ಮಹತ್ವದ ನಿರ್ದೇಶನವನ್ನು ನೀಡಿದೆ. ಇದರ ಹೊರತಾಗಿಯೂ ಸಹ ಕೇಂದ್ರ ಸರ್ಕಾರ ಮಸೂದೆಯನ್ನು ತರಲು ಹೊರಟಿದೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ಮಸೂದೆಯನ್ನು ವಿರೋಧಿ ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು, ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನಾ ರೈತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರು ಖಂಡನೀಯ ಎಂದರು.
ಕೃಷಿ ಭೂಮಿಯನ್ನು ಯಾರು ಬೇಕಾದ್ರು ಖರೀದಿ ಮಾಡುವ ಕಾಯ್ದೆ ಬಂದ್ರೆ, ರೈತರಲ್ಲಿ ಒಂದು ಗುಂಟೆ ಕೃಷಿ ಭೂಮಿ ಇರುವುದಿಲ್ಲ. ಜತೆಗೆ ಕೃಷಿಯನ್ನು ಅವಲಂಭಿಸಿರುವ ದೇಶ ನಮ್ಮದಾಗಿದೆ. ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳು ಖರೀದಿಸಿ ಬೇರೆ ಬೇರೆ ಉದ್ದೇಶಕ್ಕೆ ಬಳಸಿದ್ರೆ, ಆಹಾರಕ್ಕೆ ತೊಂದರೆಯಾಗಲಿದೆ ಎಂದರು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರೈತರು ಹಾಗೂ ಜನರು ನೆಲೆ ಕಚ್ಚಲಿದ್ದಾರೆ. ಮುಂದಿನ ದಿನಗಳಲ್ಲಿ ಬಂಡವಾಳ ಶಾಹಿಗಳಿಂದ ನಾವು ಬೆಳೆ ಆಹಾರವನ್ನು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ ಕಾರಣ ಸರ್ಕಾರ ರೈತರ ಕೃಷಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.