ಗೋಕಾಕ: ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಶ್ರೀ ದ್ಯಾಮವ್ವದೇವಿ ಜಾತ್ರಾಮಹೋತ್ಸವದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಭಾಗವಹಿಸಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅಂಕಲಗಿ ಗ್ರಾಮ ದೇವತೆಯ ಜಾತ್ರಾ ಕಮೀಟಿಯ ಸದಸ್ಯರುಗಳು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸನ್ಮಾನಿಸಿದರು.
ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ನಿರ್ವಾಣಿ, ಪಟ್ಟಣಶೆಟ್ಟಿ, ಘೋಡಗೇರಿ ಸೇರಿದಂತೆ ಅಂಕಲಗಿ ಗ್ರಾಮಸ್ಥರು, ಜಾತ್ರಾ ಕಮೀಟಿ ಸದಸ್ಯರು ಮುಖಂಡರು ಇತರರು ಇದ್ದರು.