ಬೆಳಗಾವಿ: ಆನ್ಲೈನ್ ಕ್ಲಾಸ್ಗಾಗಿ ನೆಟ್ವರ್ಕ್ ಸಿಗದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮದ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಅಲ್ಲದೆ ಖಾನಾಪುರ ತಾಲೂಕಿನ ಮಾನ್, ಸಡಾ, ಪಾರವಾಡ, ಚಿಗುಲೆ ಗ್ರಾಮದ ಮಕ್ಕಳು ನೆರೆಯ ಮಹಾರಾಷ್ಟ್ರದ ಮೊಬೈಲ್ ನೆಟ್ವರ್ಕ್ಗಾಗಿ ಗುಡ್ಡ ಹತ್ತುತ್ತಿದ್ದಾರೆ. ಆದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆ ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೇಲ್ಡ್ ಗವರ್ನನ್ಸ್, ಫೇಲ್ಡ್ ಕೋವಿಡ್ ಮ್ಯಾನೇಜ್ಮೆಂಟ್ ಎಂಬ ಟ್ಯಾಗ್ಲೈನ್ ಹಾಕಿ ಟ್ವೀಟ್ ಮಾಡಿರುವ ಬೆಳಗಾವಿ ಜಿಲ್ಲೆ ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಆನ್ಲೈನ್ ಕ್ಲಾಸ್ಗಳು ಶುರುವಾಗಿದ್ದು, ಕರ್ನಾಟಕ ಗಡಿ ಗ್ರಾಮಗಳಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ. ಪುಟ್ಟ ಪುಟ್ಟ ವಿದ್ಯಾರ್ಥಿಗಳು ಗುಡ್ಡ ಹತ್ತಿ ಮಹಾರಾಷ್ಟ್ರ ನೆಟ್ವರ್ಕ್ ಆಸರೆ ಪಡೆದು ಆನ್ಲೈನ್ ಕ್ಲಾಸ್ ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Do Not Disturb…
‘Online School is On’ in Maan, Sada, Parwad, Chigule & many such villages of my constituency.
As there is no network in Karnataka side; kids are climbing hills to catch adjacent Maharashtra network to attend classes.#FailedGovernance #FailedCovidManagement pic.twitter.com/KVmp2R8dhW
— Dr. Anjali Nimbalkar (@DrAnjaliTai) July 9, 2021