ಬೆಂಗಳೂರು: 20 ಸಾವಿರ ಲಂಚ ಪಡೆಯುತ್ತಿದ್ದ ಟ್ರಾಫಿಕ್ ಮಹಿಳಾ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಕ್ಕಜಾಲ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೇಲ್ ಗ್ಯಾಸ್ ಕಂಪನಿ ವತಿಯಿಂದ ನೈಸರ್ಗಿಕ ಅನಿಲ ಪೈಪ್ ಅಳವಡಿಕೆಗೆ ರಸ್ತೆ ಬದಿ ನೆಲ ಅಗೆಯಲು ಮುಂದಾಗಿದ್ದರು.
ಈ ಬಗ್ಗೆ ಅನುಮತಿ ಪಡೆಯಲು ಸಂಚಾರಿ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ ಇನ್ಸ್‌ಪೆಕ್ಟರ್ ಹಂಸವೇಣಿ ಪರ್ಮಿಷನ್ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.
ಲಂಚ ಕೇಳಿರುವ ಬಗ್ಗೆ ಎಸಿಬಿಗೆ ಗೇಲ್ ಕಂಪನಿಯಿಂದ ದೂರು ನೀಡಲಾಗಿತ್ತು. ಸದ್ಯ ಗೇಲ್ ಕಂಪನಿಯಿಂದ 20 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಅಗಿ ಎಸಿಬಿ ಅಧಿಕಾರಿಗಳು ಹಂಸವೇಣಿಯನ್ನು ಲಾಕ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.