ಬೆಂಗಳೂರು ; ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿರುವ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ. ಒಂದೇ ಕಾಲದಲ್ಲಿ 9 ಅಧಿಕಾರಿಗಳ ಮನೆಗೆ ದಾಳಿ ನಡೆಸಲು ಯೋಜನೆ ರೂಪಿಸಿರುವ ಎಸಿಬಿ ಅಧಿಕಾರಿಗಳು ಈ ದಾಳಿಗಾಗಿ ಸುಮಾರು 300 ಅಧಿಕಾರಿಗಳನ್ನು ನೇಮಕ ಮಾಡಿದ್ದು, ಏಕ ಕಾಲದಲ್ಲಿ ರಾಜ್ಯದ 40 ಕಡೆ ದಾಳಿ ನಡೆಸಿದ್ದಾರೆ. ಒಂಭತ್ತು ಮಂದಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿದ್ದು, ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲದೆ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಹತ್ತಾರು ಪ್ರಮುಖ ದಾಖಲೆಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆದಿದೆ.
ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಒಂದೇ ದಿನ ಬೆಂಗಳೂರು, ಮಂಗಳೂರು, ಉಡುಪಿ, ಮಾಲೂರು, ಬೀದರ್, ಮಂಡ್ಯ, ವಿಜಯಪುರ ಮತ್ತು ಬಳ್ಳಾರಿಯಲ್ಲಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ 9 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿಗೆ ಒಳಗಾಗಿರುವ ಅಧಿಕಾರಿಗಳು
1) ಆರ್ ಬಿ ಕುಲಕರ್ಣಿ- ಚೀಫ್ ಇಂಜಿನಿಯರ್, ಕೆಆರ್ ಐಡಿಸಿಎಲ್, ಬೆಂಗಳೂರು.
2) ಜಿ. ಶ್ರೀಧರ್ -ಎಕ್ಸ್ ಕ್ಯೂಟಿವ್ ಇಂಜಿಜಿಯರ್ ಮಂಗಳೂರು.
3)ಕೃಷ್ಣ, ಎಸ್ – ಎಕ್ಸ್ ಕ್ಯೂಟಿವ್ ಇಂಜಿನಿಯರ್ ಯಬ್ಬೂರ್ , ಕೆಆರ್ ಐಡಿಸಿಎಲ್, ಉಡುಪಿ.
4)ಹೆಚ್.ಆರ್. ಕೃಷ್ಣಪ್ಪ- ಅಸಿಸ್ಟೆಂಟ್ ಡೈರೆಕ್ಟರ್, ಹರ್ಬಲ್ ಪ್ಲಾನಿಂಗ್ ಮಾಲೂರು.
5) ಸುರೇಶ್ ಮೊಹರೆ, ಜೂನಿಯರ್ ಇಂಜಿನಿಯರ್, ರೂರಲ್ ಡೆವಲಪ್ಮೆಂಟ್ ಬೀದರ್..
6) ವೆಂಕಟೇಶ್ -ಟಿ.ಡಿಸಿಎಫ್, ಸೋಷಿಯಲ್ ಫಾರೆಸ್ಟ್ ಡಿಪಾರ್ಟ್ಮೆಂಟ್ ಮಂಡ್ಯ.
7) ಸಿದ್ದರಾಮ ಮಲ್ಲಿಕಾರ್ಜುನ್- ಎಇಇ ಬೆಸ್ಕಾಂ ವಿಜಯಪುರ.
8) ಕೃಷ್ಣಮೂರ್ತಿ- ಸೀನಿಯರ್ ಮೋಟರ್ ವೈಹಿಕಲ್‌ಇ ನ್ಸ್ಪೆಕ್ಟರ್ ಬೆಂಗಳೂರು.
9) ವಿಜಯ್ ಕುಮಾರ್-ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್,ಬಳ್ಳಾರಿ.