Breaking News

ಲಂಚ ಸ್ವೀಕರಿಸುವಾಗ ಪಂಚಾಯಿತಿ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ!


ಚಿತ್ರದುರ್ಗ: ಲಂಚ ಸ್ವೀಕರಿಸುವಾಗ ಪಂಚಾಯಿತಿ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಅವರು ಗುರುಶಾಂತಪ್ಪ ಅವರಿಂದ ಎರಡು ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜಾಬ್ ಕಾರ್ಡ್ ನೀಡಲು ಗುರುಶಾಂತಪ್ಪ ಅವರ ಹಳೆಯ ಬ್ಯಾಲೆನ್ಸ್‌ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊದಲು ಇ-ಸ್ವತ್ತು ಮಾಡಿಸಲು 6 ಸಾವಿರ ರೂ. ಬೇಡಿ ಇಟ್ಟು 3 ಸಾವಿರ ರೂ. ಲಂಚ ಪಡೆದಿದ್ದರು ಎನ್ನಲಾಗಿದೆ.

ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದ ಗುರುಶಾಂತಪ್ಪ ಬಳಿ ಬ್ಯಾಲೆನ್ಸ್ ಹಣ ನೀಡುವಂತೆ ಬೇಡಿಕೆ ಇಟ್ಟಾಗ, ಪಿಡಿಒ ಶ್ರೀನಿವಾಸ್ ಲಂಚದ ಬೇಡಿಕೆ ಕುರಿತು ಗುರುಶಾಂತಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಹಣ ಸ್ವೀಕರಿಸುವಾಗ ಗ್ರಾಮ ಪಂಚಾಯತಿ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್‌ಪಿ ಬಸವರಾಜ್ ಮಗದುಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನಾಳೆ ಭಗೀರಥ ಪೀಠದಲ್ಲಿ ಅಖಿಲ ಭಾರತ ಭಗೀರಥ ಜಯಂತ್ಯೋತ್ಸವ!

ಹೊಸದುರ್ಗ: ತಾಲ್ಲೂಕಿನ ಭಗೀರಥ ಪೀಠದಲ್ಲಿ ಜೂನ್ 3 ಮತ್ತು 4ರಂದು ಎಲ್ಲ ಸಮುದಾಯದವರನ್ನು ಒಳಗೊಂಡು ಅದ್ದೂರಿಯಾಗಿ ‘ಅಖಿಲ ಭಾರತ ಭಗೀರಥ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ