ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯ (ACB Raid) ಅಧಿಕಾರಿಗಳು ಇಂದು ಮಂಗಳವಾರ ಬೆಳ್ಳಂಬೆಳಗ್ಗೆಯೇ ರಾಜ್ಯದ 11 ಜಿಲ್ಲೆಗಳಲ್ಲಿ 28 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ವಿವಿಧ ಇಲಾಖೆಯ ಒಂಬತ್ತು ಅಧಿಕಾರಿಗಳ (Govt Officers) ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳ ತಂಡಗಳು ದಾಖಲೆಗಳನ್ನ ಪರಿಶೀಲನೆ ನಡೆಸಿವೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ರೇಡ್ ನಡೆದಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ದಾವಣಗೆರೆ, ಬೆಳಗಾವಿ, ಯಾದಗಿರಿ, ಕೋಲಾರ, ಉಡುಪಿ, ಮಂಡ್ಯ, ಕಾರವಾರ, ಕನಕಪುರ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿವೆ. ದಾಳಿಯಾದ ಆ 9 ಅಧಿಕಾರಿಗಳ ವಿವರ ಇಲ್ಲಿದೆ: 1) ಕೃಷ್ಣೇಗೌಡ, ಪ್ರಾಜೆಕ್ಟ್ ಡೈರೆಕ್ಟರ್, ನಿರ್ಮಿತಿ ಕೇಂದ್ರ ಚಿಕ್ಕಬಳ್ಳಾಪುರ:
ಕೋಲಾರದ ಮನೆ, ಚಿಕ್ಕಬಳ್ಳಾಪುರದ ಕಚೇರಿ, ಸಹೋದರರ ಮನೆಗಳಲ್ಲಿ ಶೋಧ.ಎಸ್ ಪಿ ಕಲಾ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ಪರಿಶೀಲನೆ.
2) ಹನಮಂತ ಶಿವಪ್ಪ ಚಿಕ್ಕಣ್ಣನವರ, ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಬೆಳಗಾವಿ.
ಈ ಆಧಿಕಾರಿಯ ಮನೆ, ಅಂಕೋಲಾ, ಬೆಳಗಾವಿ ಕಚೇರಿ, ಜಮಖಂಡಿಯ ಹುಟ್ಟೂರು, ಬೆಳಗಾವಿಯ ಫ್ಲಾಟ್ ಗಳ ಮೇಲೆ ದಾಳಿ. ಎಸ್ ಪಿ ನ್ಯಾಮಗೌಡ ನೇತೃತ್ವದಲ್ಲಿ ಎಸಿಬಿ ದಾಳಿ ಪರಿಶೀಲನೆ.
3) ಸುಬ್ರಹ್ಮಣ್ಯ ಕೆ ವಡ್ಡರ್, ಜಂಟಿ ನಿರ್ದೇಶಕರು, ಟೌನ್ ಆಂಡ್ ಕಂಟ್ರಿ ಫ್ಲಾನಿಂಗ್ ಮೈಸೂರು.
ಉಡುಪಿಯ ಮನೆ, ಕಾರವಾರದ ತಾಯಿ ಮನೆ, ಮೈಸೂರಿನ ಬಾಡಿಗೆ ಮನೆ ಕಚೇರಿ ಮೇಲೆ ದಾಳಿ. ಎಸ್ ಪಿ ಬೋಪಯ್ಯ ನೇತೃತ್ವದ ಎಸಿಬಿ ತಂಡದಿಂದ ದಾಳಿ ಪರಿಶೀಲನೆ.
4) ಮುನಿ ಗೋಪಾಲರಾಜು, ಸೂಪರಿಂಟೆಂಡೆಂಟ್ ಇಂಜಿನಿಯರ್ ಚೆಸ್ಕಾಂ ಮೈಸೂರು.
ಮೈಸೂರು ಕುವೆಂಪುನಗರದ ಚೆಸ್ಕಾಂ ಕಚೇರಿ, ಗೋಕುಲಂನ ನಿವಾಸ, ಕನಕಪುರದ ಹುಟ್ಟೂರಿನ ಮನೆ ಮೇಲೆ ದಾಳಿ.
5) ಚನ್ನವೀರಪ್ಪ, ಎಫ್‌ಡಿಎ ಆರ್ ಟಿಒ ಮೈಸೂರು.
ಮಂಡ್ಯದ ಕುವೆಂಪುನಗರ ಮನೆ, ಹುಟ್ಟೂರು ಹಲಕೆರೆಯ ಮನೆ, ಮೈಸೂರು ಲಕ್ಷ್ಮೀಪುರಂ ಕಚೇರಿ ಮೇಲೆ ದಾಳಿ.
6) ರಾಜು ಫತ್ತರ್, ಅಕೌಂಟ್ ಅಪೀಸರ್ ಜೆಸ್ಕಾಂ ಯಾದಗಿರಿ.
ಯಾದಗಿರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಪರಿಶೀಲನೆ.
7) ವಿಕ್ಟರ್ ಸೈಮನ್, ಪೊಲೀಸ್ ಇನ್ಸ್‌ಪೆಕ್ಟರ್ ಬಿಎಂಟಿಎಫ್.
ಬೆಂಗಳೂರಿನ ಕಸವನಹಳ್ಳಿಯ ಮನೆ, ಮೈಸೂರಿನ ತಂದೆಯ ಹಾಗೂ ಮಾವನ ಮನೆ ಮತ್ತು ಬೆಂಗಳೂರಿನ ಬಿಎಂಟಿಎಫ್ ಕಚೇರಿ ಮೇಲೆ ದಾಳಿ ಪರಿಶೀಲನೆ.
8) ಕೆ ಸುಬ್ರಹ್ಮಣ್ಯಂ, ಜೂನಿಯರ್ ಇಂಜಿನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಟೌನ್ ಫ್ಲಾನಿಂಗ್ ಅಫೀಸ್ ಬಿಬಿಎಂಪಿ.
ಬೆಂಗಳೂರಿನ ಸಹಕಾರನಗರ ನಿವಾಸ ಮತ್ತು ಯಲಹಂಕ ಕಚೇರಿ ಮೇಲೆ ದಾಳಿ ಪರಿಶೀಲನೆ.
9) ಕೆ ಎಂ ಪ್ರಥಮ್, ಡೆಪ್ಯುಟಿ ಡೈರೆಕ್ಟರ್ ಪ್ಯಾಕ್ಟರಿಸ್ ಆಂಡ್ ಬಾಯ್ಲರೀಸ್ ದಾವಣಗೆರೆ.
ಬೆಂಗಳೂರಿನ ಸಂಜಯನಗರ ಬಳಿಯ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದ ಸಹೋದರನ ಮನೆ, ದಾವಣಗೆರೆಯ ಕಚೇರಿ ಮೇಲೆ ದಾಳಿ ಪರಿಶೀಲನೆ.